•  
  •  
  •  
  •  
Index   ವಚನ - 95    Search  
 
ಕಾಮವುಳ್ಳಲ್ಲಿ ಭಕ್ತಿ ಇಲ್ಲ, ಕ್ರೋಧವುಳ್ಳಲ್ಲಿ ಭಕ್ತಿ ಇಲ್ಲ. ಲೋಭವುಳ್ಳಲ್ಲಿ ಭಕ್ತಿ ಇಲ್ಲ, ಮೋಹವುಳ್ಳಲ್ಲಿ ಭಕ್ತಿ ಇಲ್ಲ. ಮದವುಳ್ಳಲ್ಲಿ ಭಕ್ತಿ ಇಲ್ಲ, ಮತ್ಸರವುಳ್ಳಲ್ಲಿ ಭಕ್ತಿ ಇಲ್ಲವಯ್ಯಾ. ಮಹಾ ಅರಿಷಡ್ವರ್ಗವುಳ್ಳಲ್ಲಿ ಭಕ್ತಿ ಇಲ್ಲ. ಇವು ಉಂಟಾಗಿ ಭಕ್ತರೆಂಬರು ,ಅದೇಕಯ್ಯಾ? ಹಗೆಯ ಸಮೂಹವಿದ್ದಲ್ಲಿ ಕೇಳಿರೆ, ಒಬ್ಬನೆಂತಿಪ್ಪನಯ್ಯಾ? ಇದು ಕಾರಣ, ಅರಿಷಡ್ವರ್ಗವುಳ್ಳಲ್ಲಿ ಭಕ್ತಿ ಇಲ್ಲ, ಭಕ್ತಿವುಳ್ಳಲ್ಲಿ ಅರಿಷಡ್ವರ್ಗಗಳಿಲ್ಲ. ಈ ಅರಿಷಡ್ವರ್ಗವಿಲ್ಲದವನೇ ಭಕ್ತ, ಇಂತಹ ಭಕ್ತದೇಹಿಕ ದೇವನು ಉರಿಲಿಂಗಪೆದ್ದಿಪ್ರಿಯವಿಶ್ವೇಶ್ವರಾ.
Transliteration Kāmavuḷḷalli bhakti illa, krōdhavuḷḷalli bhakti illa. Lōbhavuḷḷalli bhakti illa, mōhavuḷḷalli bhakti illa. Madavuḷḷalli bhakti illa, matsaravuḷḷalli bhakti illavayyā. Mahā ariṣaḍvargavuḷḷalli bhakti illa. Ivu uṇṭāgi bhaktarembaru,adēkayyā? Hageya samūhaviddalli kēḷire, obbanentippanayyā? Idu kāraṇa, ariṣaḍvargavuḷḷalli bhakti illa, bhaktivuḷḷalli ariṣaḍvargagaḷilla. Ī ariṣaḍvargavilladavanē bhakta, intaha bhaktadēhika dēvanu uriliṅgapeddipriyaviśvēśvarā.