•  
  •  
  •  
  •  
Index   ವಚನ - 1709    Search  
 
ಸಹಜ ಸಂಬಂಧಾಚಾರದ ನಿರ್ಣಯವನಿಲ್ಲಿ ಹೇಳಿಹೆ ಕೇಳಿರಯ್ಯಾ: ಪ್ರತ್ಯಕ್ಷವಾಗಿ ಜಂಗಮವೆ ಭಕ್ತನ ಮಠಕ್ಕೆ ಬಿಜಯಂಗೈಯೆ ನೂರು ಮಂದಿಯಲ್ಲಿ ಮೂರು ಮಂದಿ ಇರ್ಪರೆಂಬಂತೆ, ಆ ಜಂಗಮದಲ್ಲಿ ಗುರು ಲಿಂಗಗಳುಂಟೆಂದು ತಿಳಿದು ತ್ರಿವಿಧ ಪಾದೋದಕವನಲ್ಲಿ ಪಡೆವುದು- ಇದೇ ಸದಾಚಾರ. ಆ ಜಂಗಮವಿಲ್ಲದೆ ಗುರು ಒರ್ವನೆ ಬಿಜಯಂಗೈಯೆ, ಆ ಗುರುವಿನಲ್ಲಿ ವಿಧಿಗನುಗುಣವಾಗಿ ಜಂಗಮವನನುಸಂಧಾನಿಸಿ ಗುರುವಿನಲ್ಲಿ ಲಿಂಗವು ಸಹಜವಾಗಿರ್ಪುದರಿಂದ ಅಲ್ಲಿ ತ್ರಿವಿಧೋದಕವ ಪಡೆವುದು- ಇದೊಂದು ಸಹಜಸಂಬಂಧವು. ಗುರುಜಂಗಮರೀರ್ವರೂ ಸಮಯಕ್ಕೊದಗದಿರ್ಪಲ್ಲಿ ಆ ಗುರುಜಂಗಮವ ತನ್ನ ಇಷ್ಟಲಿಂಗದಲ್ಲಿ ಕ್ರಮವರಿತು ಅನುಸಂಧಾನಿಸಿ. ಅಲ್ಲಿ ತ್ರಿವಿಧೋದಕವ ಪಡೆವುದು- ಇದೊಂದು ಕೇವಲ ಸಂಬಂಧವು. ಇಂತೀ ಸಹಜಸಂಬಂಧದ ಭೇದವನರಿದು, ಅರಿದಂತಾಚರಿಸಿ ನಮ್ಮ ಶರಣರು ಕೂಡಲಚೆನ್ನಸಂಗಯ್ಯನಲ್ಲಿ ಅಚ್ಚಸುಖಿಗಳಾದರು.
Transliteration Sahaja sambandhācārada nirṇayavanilli hēḷihe kēḷirayyā: Pratyakṣavāgi jaṅgamave bhaktana maṭhakke bijayaṅgaiye nūru mandiyalli mūru mandi irparembante, ā jaṅgamadalli guru liṅgagaḷuṇṭendu tiḷidu trividha pādōdakavanalli paḍevudu- idē sadācāra. Ā jaṅgamavillade guru orvane bijayaṅgaiye, ā guruvinalli vidhiganuguṇavāgi jaṅgamavananusandhānisi guruvinalli liṅgavu sahajavāgirpudarinda alli trividhōdakava paḍevudu- idondu sahajasambandhavu. Gurujaṅgamarīrvarū samayakkodagadirpalli ā gurujaṅgamava tanna iṣṭaliṅgadalli kramavaritu anusandhānisi. Alli trividhōdakava paḍevudu- idondu kēvala sambandhavu. Intī sahajasambandhada bhēdavanaridu, aridantācarisi nam'ma śaraṇaru kūḍalacennasaṅgayyanalli accasukhigaḷādaru.