ಒಂದು ಲಿಂಗದಿಂದ ಉದ್ಭವಿಸಿತ್ತು, ನಾದ ಬಿಂದು ಕಳೆ.
ಆ ನಾದ ಬಿಂದು ಕಳೆಗೆ ಉದ್ಭವಿಸಿತ್ತು,
ಬ್ರಹ್ಮ ವಿಷ್ಣು ರುದ್ರ ಈಶ್ವರ ಸದಾಶಿವನು.
ಈ ಪಂಚಬ್ರಹ್ಮದ ಬೆಳೆಯ [ಉತ್ಪತ್ಯವ] ಪೇಳುತಿದ್ದನು ಕಾಣಾ,
ಜಂಗಮಲಿಂಗಪ್ರಭುವೆ.
Transliteration Ondu liṅgadinda udbhavisittu, nāda bindu kaḷe.
Ā nāda bindu kaḷege udbhavisittu,
brahma viṣṇu rudra īśvara sadāśivanu.
Ī pan̄cabrahmada beḷeya [utpatyava] pēḷutiddanu kāṇā,
jaṅgamaliṅgaprabhuve.