ಬೆಂದ ಮಣ್ಣಿನಂತೆ, ವಿಚ್ಛಂದವಾದ ಪಯ ಅನ್ನದಂತೆ,
ತಂತ್ರವ ಜಾರಿದ ಸೂತ್ರದಂತೆ,
ಚೇತನವಿಲ್ಲದ ಡಿಂಬಂಗಳಂತೆ,
ಏತಕ್ಕೂ ಸುಳುಹಿಲ್ಲದೆ ನಿಂದ ನಿಲವು
ಕಾಲಾಂತಕ ಭೀಮೇಶ್ವರಲಿಂಗವನರಿದುದು.
Transliteration Benda maṇṇinante, vicchandavāda paya annadante,
tantrava jārida sūtradante,
cētanavillada ḍimbaṅgaḷante,
ētakkū suḷuhillade ninda nilavu
kālāntaka bhīmēśvaraliṅgavanaridudu.