ತರುಗಿಡು ಗುಣನಾಮವಾದಡೇನು,
ಸ್ಥಾಣುವಿನ ಒಲವರದ ತೆರ ಬೇರೆ.
ದರ್ಶನ ಸುಖಸಂಪತ್ತಾದಡೇನು,
ಅರಿವಿನ ಒಲವರದ ತೆರ ಬೇರೆ.
ಎಲೆಯ ಹಾಕಿ ತನ್ನಲ್ಲಿಗೆ ಕರೆವವನ ಗುಣ ಲೇಸೆ?
ಶಬರನ ವೇಷ, ಮೃಗದ ಹರಣದ ಕೇಡು.
ಹಿರಿಯತನವ ತೋರಿ, ತ್ರಿವಿಧವ ಬೇಡುವ ಅಡಿಗರಿಗೇಕೆ,
ಬಂಕೇಶ್ವರಲಿಂಗವ ಅರಿದ ಅರಿವು?
Transliteration Tarugiḍu guṇanāmavādaḍēnu,
sthāṇuvina olavarada tera bēre.
Darśana sukhasampattādaḍēnu,
arivina olavarada tera bēre.
Eleya hāki tannallige karevavana guṇa lēse?
Śabarana vēṣa, mr̥gada haraṇada kēḍu.
Hiriyatanava tōri, trividhava bēḍuva aḍigarigēke,
baṅkēśvaraliṅgava arida arivu?