ರುದ್ರಕ್ಷೆಯ ಧರಿಸಿದವನು
ಒಂದು ಕೋಟಿ ಗೋವುಗಳ
ದಾನ ಕೊಟ್ಟ ಫಲವ ಪಡೆವನು.
ಮರಣ ಕಾಲದಲ್ಲಿ ರುದ್ರಾಕ್ಷೆಯನು
ಉದಕದೊಡನೆ ಕೂಡಿಸಿ ಅರದು ಶ್ರುತಿ
ಪ್ರಸಿದ್ಧವಾದ ಬ್ರಹ್ಮ ಶಿವ ರುದ್ರನೆಂಬ
ಪರ್ಯಾಯ ನಾಮವುಳ್ಳ ಮಹಾಲಿಂಗವನು ಧ್ಯಾನಿಸುತ್ತ
ಪಾನವ ಮಾಡುವಾತನು ಶಿವಲೋಕವನೆಯ್ದವನಯ್ಯ
ಶಾಂತವೀರೇಶ್ವರಾ
Transliteration Rudrakṣeya dharisidavanu
ondu kōṭi gōvugaḷa
dāna koṭṭa phalava paḍevanu.
Maraṇa kāladalli rudrākṣeyanu
udakadoḍane kūḍisi aradu śruti
prasid'dhavāda brahma śiva rudranemba
paryāya nāmavuḷḷa mahāliṅgavanu dhyānisutta
pānava māḍuvātanu śivalōkavaneydavanayya
śāntavīrēśvarā