•  
  •  
  •  
  •  
Index   ವಚನ - 122    Search  
 
ವಿಷವ ಅಂಗಕ್ಕೆ ಕೊಂಡು ವೇಧಿಸಿದಲ್ಲಿ, ಆವ ಠಾವಿನಲ್ಲಿ ಗಾಯ? ಅದಾವ ಠಾವಿನ ಕುರುಹು? ಲಿಂಗದಷ್ಟ ಅಂಗಕ್ಕಾದಲ್ಲಿ ಅದಾರಿಗೆ ಮೊರೆ? ಅದಾರಿಗೆ ಕೈಲೆಡೆ? ಆಚಾರಗೂಡಿಯೆ ಆ ಘಟವಳಿಯಬೇಕು. ಆಚಾರವೆ ಪ್ರಾಣವಾದ ರಾಮೇಶ್ವರಲಿಂಗದಲ್ಲಿಗೆ ಇದಿರೆಡೆಯಿಲ್ಲದೆ ಕೂಡಬೇಕು.
Transliteration Viṣava aṅgakke koṇḍu vēdhisidalli, āva ṭhāvinalli gāya? Adāva ṭhāvina kuruhu? Liṅgadaṣṭa aṅgakkādalli adārige more? Adārige kaileḍe? Ācāragūḍiye ā ghaṭavaḷiyabēku. Ācārave prāṇavāda rāmēśvaraliṅgadallige idireḍeyillade kūḍabēku.