ವೇಷ ಎಲ್ಲಿರದು?
ಸೂಳೆಯಲ್ಲಿ, ಡೊಂಬನಲ್ಲಿ, ಭೈರೂಪನಲ್ಲಿರದೆ?
ವೇಷವ ತೋರಿ ಒಡಲ ಹೊರೆವ
ದಾಸಿ ವೇಶಿಯ ಮಕ್ಕಳಿಗೆ ನಿಜಭಕ್ತಿ ಎಲ್ಲಿಯದೊ
ಆಚಾರವೆ ಪ್ರಾಣವಾದ ರಾಮೇಶ್ವರಲಿಂಗದಲ್ಲಿ?
Transliteration Vēṣa elliradu?
Sūḷeyalli, ḍombanalli, bhairūpanallirade?
Vēṣava tōri oḍala horeva
dāsi vēśiya makkaḷige nijabhakti elliyado
ācārave prāṇavāda rāmēśvaraliṅgadalli?