ಬಸವಣ್ಣ   
  ವಚನ - 773     
 
ನಂಬಿದರೆ ಪ್ರಸಾದ; ನಂಬದಿದ್ದರೆ ವಿಷವು. ತುಡುಕಬಾರದು, ನೋಡಾ, ಲಿಂಗನ ಪ್ರಸಾದ, ಸಂಗನ ಪ್ರಸಾದ! ಕೂಡಲಸಂಗನ ಪ್ರಸಾದ: ಸಿಂಗಿ, ಕಾಳಕೂಟ ವಿಷವು!