•  
  •  
  •  
  •  
Index   ವಚನ - 4    Search  
 
ನೆಲದ ಮರೆಯ ನಿಧಾನದಂತೆ, ಮುಗಿಲ ಮರೆಯಲಡಗಿದ ಮಿಂಚಿನಂತೆ, ಬಯಲ ಮರೆಯಲಡಗಿದ ಮರೀಚಿಯಂತೆ. ಶಬ್ದದ ಮರೆಯ ನಿಶ್ಯಬ್ದದಂತೆ ಕಂಗಳ ಮರೆಯಲಡಗಿದ ಬೆಳಗಿನಂತೆ- ಗುಹೇಶ್ವರಾ ನಿಮ್ಮ ನಿಲವು!
Transliteration Nelada mareya nidhānadante, mugila mareyalaḍagida min̄cinante, bayala mareyalaḍagida marīciyante. Śabdada mareya niśyabdadante kaṅgaḷa mareyalaḍagida beḷaginante- guhēśvarā nim'ma nilavu!
Music Courtesy: Bhakti Lahari Kannada - T-Series | Vachana Sangama Shiva Sharanara Vachanagalu Part-1
Hindi Translation धरती की आड़ में रही निधी जैसी, बादल की आड़ में रही बिजली जैसी, मैदान की आड़ में रहा मृगजल जैसा, नियनों की आड़ में रहा प्रकाश जैसा, गुहेश्वरा, आपकी स्थिति! Translated by: Eswara Sharma M and Govindarao B N
Tamil Translation நிலத்திலே மறைந்துள்ள புதையலனைய மேகத்திலே மறைந்துள்ள மின்னலனைய வெட்டவெளியில் மறைந்துள்ள கானல்நீரனைய கண்களிலே மறைந்துள்ள ஒளியனையதாம் குஹேசுவரனே, உம் இருப்பு. Translated by: Smt. Kalyani Venkataraman, Chennai
ಶಬ್ದಾರ್ಥಗಳು ನಿಧಾನ = ಭೂಗತಸಂಪತ್ತು; ಬೆಳಗು = ರೂಪವನ್ನು ತೋರಿಸುವ ಕಣ್ಣಿನ ವಿಶೇಷ ಶಕ್ತಿ; ಅದರ ಬೆಳಕು; ಮರೀಚಿ = ಉರಿವ ಬಿಸಿಲಲ್ಲಿ ಮರಳು ಎರೆಯ ಬಯಲಲ್ಲಿ ಕಾಣಬರುವ ಬಿಸಿಲು ಕುದುರೆ, ಮೃಗಜಲ, ಚಿತ್ರವಿಚಿತ್ರ ರೂಹುಗಳು; ಮುಗಿಲು = ಮೇಘ; Written by: Sri Siddeswara Swamiji, Vijayapura

C-761 

  Sat 29 Mar 2025  

 ನೆಲದ ಮರೆಯ ನಿಧಾನದಂತೆ
ಮುಗಿಲ ಮರೆಯ ಮಿಂಚಿನಂತೆ
ಅಲ್ಲಮ ಪ್ರಭುದೇವರ ವಚನಕ್ಕೆ ನಮಸ್ಕಾರಗಳು
ಅರ್ಥ ಬದ್ಧ ವಚನ ಅರಿವಿನ ಆಳಕ್ಕೆ ಕರೆದೊಯ್ಯುವ ವಚನ ಸಾಹಿತ್ಯ ಸಾರವತ್ತಾಗಿದೆ
ಧನ್ಯವಾದಗಳು
ಜಯ ಮಂಗಳ ಜವಳಿ ಬೆಂಗಳೂರು
  Jayamangala Javali
???????? ???????

C-760 

  Fri 28 Mar 2025  

 Helpfull
  ಪ್ರಿಯಾಂಕಾ H.P
State: mysore