•  
  •  
  •  
  •  
Index   ವಚನ - 67    Search  
 
ಕಾಯಹೇಯಸ್ಥಲವೆಂದು, ಜೀವಹೇಯಸ್ಥಲವೆಂದು, ಭಾವಹೇಯಸ್ಥಲವೆಂದು, ಇಂತಿವರೊಳಗಾದ ಸರ್ವಹೇಯಸ್ಥಲವೆಂದು ನುಡಿವಾಗ ಜ್ಞಾನವೇತರ ನೆಮ್ಮುಗೆಯಿಂದ ರೂಪಾಯಿತ್ತು? ತೊರೆಯ ಹಾವುದಕ್ಕೆ ಹರುಗೋಲು, ಲಘು ನೆಮ್ಮುಗೆಗಳಲ್ಲಿ ಹಾಯ್ದ ತೆರದಂತೆ, ಅವು ಹೇಯವೆಂಬುದಕ್ಕೆ ತೆರಹಿಲ್ಲ. ಅವು ತೊರೆಯ ತಡಿಯಲ್ಲಿಯ ಲಘು ಹರುಗೋಲು ಉಳಿದ ಮತ್ತೆ ಅಡಿವಜ್ಜೆಗುಂಟೆ ಅವರ ಹಂಗು? ತಾನರಿದಲ್ಲಿ ಅಹುದಲ್ಲವೆಂದು ಪಡಿಪುಚ್ಚವಿಲ್ಲ. ತಾ ಸದ್ಯೋಜಾತಲಿಂಗದಲ್ಲಿ ನಾಶವಾಗಿ ತನ್ನಲ್ಲಿ ವಸ್ತು ವಿನಾಶವಾದ ಕಾರಣ.
Transliteration Kāyahēyasthalavendu, jīvahēyasthalavendu, bhāvahēyasthalavendu, intivaroḷagāda sarvahēyasthalavendu nuḍivāga jñānavētara nem'mugeyinda rūpāyittu? Toreya hāvudakke harugōlu, laghu nem'mugegaḷalli hāyva teradante. Avu hēyavembudakke terahilla. Avu toreya taḍiyalliya laghu harugōlu uḷida matte aḍivajjeguṇṭe avara haṅgu? Tānaridalli ahudallavendu paḍipuccavilla. Tā sadyōjātaliṅgadalli nāśavāgi tannalli vastu vināśavāda kāraṇa.

C-369 

  Thu 21 Sep 2023  

 ಈ ವಚನ ತಪ್ಪಾಗಿ ಮುದ್ರಿತವಾಗಿದೆ. ಕೊಟ್ಟ ಟೈಟಲ್ ಬೇರೆ ಮುಡ್ರಿತ ವಚನ ಬೇರೆಯಾಗಿದೆ. ಪರಿಸಲಿಸಿ ಸರಿಪಡಿಸಿ
  ರುದ್ರಪ್ಪ ಪಿ