ಬೆತ್ತಲೆಯ ಹುತ್ತದಲ್ಲಿ ಕತ್ತಲೆಯ ಹೆಡೆಯ ಸರ್ಪ,
ತೆಕ್ಕೆ ಮಡಿಯಲರಿಯದೆ ಸಿಕ್ಕಿ,
ಅದೇ ಹುತ್ತದ ಬಾಯಲ್ಲಿ ಕಪ್ಪೆ ಹರಿದು ಬಂದು,
ಸರ್ಪನ ನುಂಗಿತ್ತು.
ಹುತ್ತ ಬಚ್ಚಬಯಲಾಯಿತ್ತು, ಅರ್ಕೇಶ್ವರಲಿಂಗನ ಗೊತ್ತು.
Transliteration Bettaleya huttadalli kattaleya heḍeya sarpa,
tekke maḍiyalariyade sikki,
adē huttada bāyalli kappe haridu bandu,
sarpana nuṅgittu.
Hutta baccabayalāyittu, arkēśvaraliṅgana gottu.