ಗೆಲ್ಲಾಳೆಲ್ಲರು ಬಿಲ್ಲನೂರಿ ನಿಂದಿರಲಾಗಿ
ಬಿಲ್ಲಿನ ಹೆದೆ ಹರಿದು ಬಿಲ್ಲಿನ ಹೆದೆಯ ಕೊಪ್ಪು ಅಲ್ಲಲ್ಲಿಗೆ ತೊಡಕು,
ಮೆಲ್ಲಗೆ ಏರಿಸಿದಡೆ ಹೆದೆ ಅಲ್ಲಿಯೆ ಸಿಕ್ಕಿತ್ತು.
ಆ ಹೆದೆಯನಿಳುಹುವರ ಕಾಣೆ. ಬಲ್ಲತನದಿಂದ ಬಿಲ್ಲು ಬೆರಗಾಯಿತ್ತು.
ಬಿಲ್ಲ ಹಿಡಿದಾತ ಮರೆದೊರಗಿದ. ಮರೆದೊರಗಿದಾತನ ಕರೆಯಲಾಗಿ,
ಬಿಲ್ಲಿನ ಹೆದೆ ಇಳಿಯಿತ್ತು, ಸೈವೆರಗು ಬಿಟ್ಟಿತ್ತು.
ಅಂಬಿನ ಕಣೆ ಎಲ್ಲಿ ಹೋಯಿತ್ತೆಂದರಿಯೆ,
ನಿಃಕಳಂಕ ಮಲ್ಲಿಕಾರ್ಜುನಾ.
Transliteration Gellāḷellaru billanūri nindiralāgi
billina hede haridu billina hedeya koppu allallige toḍaku,
mellage ērisidaḍe hede alliye sikkittu.
Ā hedeyaniḷuhuvara kāṇe. Ballatanadinda billu beragāyittu.
Billa hiḍidāta maredoragida. Maredoragidātana kareyalāgi,
billina hede iḷiyittu, saiveragu biṭṭittu.
Ambina kaṇe elli hōyittendariye,
niḥkaḷaṅka mallikārjunā.