ದೇಣಿಗೆ (Donation)
ಹಿರಿಯ ಶ್ರೀ ತರಳಬಾಳು ಜಗದ್ಗುರು ಶ್ರೀ ಲಿಂಗೈಕ್ಯ ಶ್ರೀ 1108 ಶಿವಕುಮಾರ ಶಿವಾಚಾರ್ಯ ಮಹಾಸ್ವಾಮಿಗಳವರು ವಚನ ಸಾಹಿತ್ಯ, ಶಿವಶರಣರ ತತ್ತ್ವ ಸಿದ್ಧಾಂತಗಳ ಪ್ರಚಾರ, ಪ್ರಸಾರಕ್ಕಾಗಿ ಹತ್ತು ಹಲವು ಯೋಜನೆಗಳನ್ನು ರೂಪಿಸಿದರು. ಅಣ್ಣನ ಬಳಗ, ಅಕ್ಕನ ಬಳಗ, ತರಳಬಾಳು ಕಲಾಸಂಘ, ತರಳಬಾಳು ಪ್ರಕಾಶನದ ಮೂಲಕ ನಾಡು-ಹೊರನಾಡುಗಳಲ್ಲಿ ಸರ್ವಶರಣ ಸಮ್ಮೇಳನ, ಶಿವಾನುಭವ ಪ್ರವಾಸ, ತರಳಬಾಳು ಹುಣ್ಣಿಮೆಯಂತಹ ವೇದಿಕೆಗಳಿಂದ ವಚನ ಸಾಹಿತ್ಯದ ಕಹಳೆ ಮೊಳಗುವಂತೆ ಮಾಡಿದರು. ಈ ಎಲ್ಲಾ ಚಟುವಟಿಕೆಗಳಿಗೆ ಅಗತ್ಯವಿದ್ದ ಆರ್ಥಿಕ ಸಂಪನ್ಮೂಲಕ್ಕಾಗಿ "ತರಳಬಾಳು ನಿಧಿ" ಯನ್ನು ಸ್ಥಾಪಿಸಿದರು. ಪೂಜ್ಯರು ಭಾಗವಹಿಸುವ ಸಭೆ ಸಮಾರಂಭಗಳಲ್ಲಿ ಭಕ್ತರು ನೀಡುವ ಭಕ್ತಿ ಕಾಣಿಕೆಯೇ ಈ "ತರಳಬಾಳು ನಿಧಿ".
ಶ್ರೀ ತರಳಬಾಳು ಜಗದ್ಗುರು ಡಾ. ಶಿವಮೂರ್ತಿ ಶಿವಾಚಾರ್ಯ ಮಹಾಸ್ವಾಮಿಗಳವರು ಹಿರಿಯ ಗುರುಗಳ ಆಶಯಗಳನ್ನು ಇಂದಿನ ಯುಗಮಾನಕ್ಕೆ ತಕ್ಕಂತೆ ರೂಪಿಸಿ ಅನುಷ್ಠಾನಗೊಳಿಸುತ್ತಿದ್ದಾರೆ. ವಚನ ಸಾಹಿತ್ಯ ಪ್ರಸಾರಕ್ಕೆ ಆಧುನಿಕ ತಂತ್ರಜ್ಞಾನವನ್ನು ಸಮರ್ಥವಾಗಿ ಬಳಸಿಕೊಂಡು ಒಂದು ಪ್ರತ್ಯೇಕ ತಂತ್ರಾಂಶವನ್ನು ರೂಪಿಸಿದ್ದಾರೆ. ಈ ತಂತ್ರಾಂಶದ ಮೂಲಕ ಎಲ್ಲಾ ಶಿವಶರಣರ 22 ಸಾವಿರಕ್ಕೂ ಹೆಚ್ಚು ವಚನಗಳು ಅಂಗೈಯಲ್ಲಿ ದೊರಕುವಂತಾಗಿದೆ. ಈ ತಂತ್ರಾಂಶದಿಂದ ಜಗತ್ತಿನ ಯಾವ ಮೂಲೆಯಲ್ಲಾದರೂ ಕುಳಿತು ಕ್ಷಣಮಾತ್ರದಲ್ಲಿಯೇ ನಮಗೆ ಬೇಕಾದ ವಚನಗಳನ್ನು ನೋಡಬಹುದಾಗಿದೆ. ಶರಣರ ಈ ಅಮೂಲ್ಯ ವಚನಗಳ ನಿಧಿಯನ್ನು ಆಸಕ್ತರು ಸದ್ಬಳಕೆ ಮಾಡಿಕೊಳ್ಳಬಹುದು.
ವಚನ ಸಾಹಿತ್ಯ ಪ್ರಚಾರದ ಉದ್ದೇಶಕ್ಕಾಗಿಯೆ ಸ್ಥಾಪಿಸಿರುವ ಈ ತರಳಬಾಳು ನಿಧಿಗೆ ಅಭಿಮಾನಿಗಳು ತಮ್ಮ ಇಚ್ಛಾನುಸಾರ ಭಕ್ತಿ ಕಾಣಿಕೆಯನ್ನು ಸಮರ್ಪಿಸಬಹುದು. ಆಸಕ್ತರು ಈ ಕೆಳಗೆ ಕಾಣಿಸಿದ ಬ್ಯಾಂಕ್ ಖಾತೆಗೆ ನೇರವಾಗಿ ಅಥವಾ ಆನ್ ಲೈನ್ ಪೇಮೆಂಟ್ ಆಪ್ ಗಳ ಮೂಲಕ ತಮ್ಮ ಉದಾರವಾದ ದೇಣಿಗೆಯನ್ನು ನೀಡಬಹುದು.
Name: Sri Taralabalu Jagadguru Brihanmath, Sirigere
Bank: Canara Bank
Branch: Sirigere
IFSC: CNRB0011003
A/c: 10032200077650