Up
Down
ಶಿವಶರಣರ ವಚನ ಸಂಪುಟ
  
ಮೋಳಿಗೆ ಮಾರಯ್ಯ
  
ಶ್ರೀ ತರಳಬಾಳು ಜಗದ್ಗುರು ಬೃಹನ್ಮಠ, ಸಿರಿಗೆರೆ
Sri Taralabalu Jagadguru Brihanmath, Sirigere
   Home
   About
  ವಚನಕಾರರು
   ಸರ್ವಜ್ಞ
   ಕಗ್ಗ
   Search
   Books
   Dictionary
   ಆಕರ ಗ್ರಂಥಗಳು
   ಲೇಖನಗಳು
   Feedback
   ಪ್ರತಿಕ್ರಿಯೆಗಳು
   Donation
   Android Mobile App
   Privacy Policy
Sort
Search
1. ಅಂಗದ ಕಳವು ಕೈಯಲ್ಲಿದ್ದಂತೆ ಹಿಂಗುವದಕ್ಕೆ ನಾಲಿಗೆಯೇಕೊ?
2. ಅಂಗದ ನಿರಾಭಾರಿಗಳೆಲ್ಲರೂ ಕೂಡಿ,
3. ಅಂಗದ ಮೇಲೆ ಶಿವಲಿಂಗ ನೆಲಸುವಂಗೆ
4. ಅಂಗಭವಿ, ಗುರುವಿನ ಹಂಗು; ಮನಭವಿ, ಲಿಂಗದ ಹಂಗು.
5. ಅಂಗಭವಿ, ಭಕ್ತಂಗೆ ಮನಭವಿ ಮಹೇಶ್ವರಂಗೆ.
6. ಅಂಗ ಲಿಂಗವಂತವಾದ ಮತ್ತೆ
7. ಅಂಗಲಿಂಗವೆಂದು, ಪ್ರಾಣಲಿಂಗವೆಂದು,
8. ಅಂಗಲಿಂಗ ಸಂಬಂಧ, ಭಾವಲಿಂಗ ಸಂಬಂಧ, ಪ್ರಾಣಲಿಂಗ ಸಂಬಂಧವೆಂದು
9. ಅಂಗವಿರಲಾಗಿ ಲಿಂಗವೆಂಬುದೊಂದು ಕುರುಹು.
10. ಅಂಗಸ್ಥಲ ಮೂರು, ಲಿಂಗಸ್ಥಲ ಮೂರು, ಜ್ಞಾನಸ್ಥಲ ಮೂರೆಂಬಲ್ಲಿ,
11. ಅಂದಚಂದದ ಬಣ್ಣವ ಹೊದ್ದು,
12. ಅಂದಳದ ಮುಂದೆ ವಂದಿಸಿಕೊಂಡೆನೆಂದು
13. ಅಂಧಕ ಪಂಗುಳನಾದ, ಪಂಗುಳ ಅಂಧಕನಾದ.
14. ಅಂಬರದಲ್ಲಿ ಒಂದು ಕೋಡಗ ಹುಟ್ಟಿ, ಕೊಂಬಿಲ್ಲದೆ ನೆಗೆವುತ್ತಿಹುದ ಕಂಡೆ.
15. ಅಂಬರ ಹರಿದಡೂ ಸಂಭವಿಸದಡೂ ಕಲೆ ಬಿಡದು.
16. ಅಂಬುವಿನ ಸಾರ ಒಡಗೂಡಿ,
17. ಅಂಬುವಿಲ್ಲದಿರ್ದಡೆ ಅಂಬುಜವನಾರು ಬಲ್ಲರು?
18. ಅಕ್ಕಿಯ ಕುದಿಸಿದಡೆ ಪಕ್ವವಲ್ಲದೆ, ಮಿಕ್ಕುಳಿದುದಕ್ಕೆ ಪಕ್ವವುಂಟೆ?
19. ಅಗ್ನಿ ವಾಯುವ ಧರಿಸಿ, ವಾಯು ಆಕಾಶವ ಧರಿಸಿ,
20. ಅಚ್ಚಿನಲ್ಲಿ ಬೆಟ್ಟದ ರೂಹು ದೃಷ್ಟವಾಯಿತ್ತು.
21. ಅಜ ಅರ್ಕನ ಕೊಂಬಿನಲ್ಲಿ ನಿಂದು, ಭಜನೆವಂತರ ಕಂಡು,
22. ಅಜ ಗಳದಲ್ಲಿ ಬಿಡುಮೊಲೆಯಿದ್ದಡೆ ಅದು ಗಡಿಗೆಗೇಡು.
23. ಅಜಾಮಲ ಲಿಂಗವಾದಲ್ಲಿ, ಲೆಕ್ಕದ ಬುಡ ನಿಶ್ಚಯಲಿಂಗವಾದಲ್ಲಿ ಮತ್ತೆ
24. ಅಡಗಿದ ಕಿಚ್ಚು ಉರಿದಾಗವೆ ತನ್ನ ಇರವು ನಷ್ಟ.
25. ಅಣುಮಾತ್ರವಪ್ಪ ವಾಯುವ, ಮನದ ಕೊನೆಯ ಮೊನೆಯಲ್ಲಿ
26. ಅದಿರಿನ ತಲೆ, ಬಿದಿರಿದ ಬಾಯಿ,
27. ಅದ್ವೈತವ ಹೇಳುವ ಹಿರಿಯರೆಲ್ಲರೂ ದ್ವೈತಕ್ಕೊಳಗಾದರು.
28. ಅನಲನೆಂಬ ಗಂಡಂಗೆ ತೃಣವೆಂಬ ಹೆಂಡತಿ ಮೋಹದಿಂದಪ್ಪಲಾಗಿ,
29. ಅನ್ಯ ಶಬ್ದವ ನುಡಿಯೆ, ಕೇಳೆನೆಂದು ಗಂಟೆಯ ಕರ್ಣದಲ್ಲಿ ಕಟ್ಟಿಕೊಂಡೆ.
30. ಅನಾಚಾರದಲ್ಲಿ ಆಚಾರವಡಗಿ, ಭಕ್ತನಲ್ಲದೆ ಭವಿಯಾಗಿ,
31. ಅನುಪಮ ಲಿಂಗವೆ, ಎನ್ನ ನೆನಹಿಂಗೆ ಬಾರೆಯಾ, ಅಯ್ಯಾ ?
32. ಅಪಮಾನಿಗೇಕೆ ಸೀರೆ? ವೀರಗೇಕೆ ಕೈದು ? ಧೀರಗೇಕೆ ಮಂತ್ರ?
33. ಅಪರವನರಿತೆನೆಂದು ಪರಮನ ಬಿಡಲೇತಕ್ಕೆ?
34. ಅಪರವನರಿದುದೆ ಖರ್ಪರ, ತ್ರಿವಿಧವ ಮುರಿದುದೆ ಕಟ್ಟಿಗೆ.
35. ಅಪ್ಪು ಬೆರಸಿದ ಕಟ್ಟಿಗೆಯ ಕಿಚ್ಚಿನಲ್ಲಿಕ್ಕಿದಡೆ,
36. ಅಪ್ಪುವರತಲ್ಲಿಯೆ ಪೃಥ್ವಿಯ ಅಂಕುರ ನಷ್ಟ.
37. ಅಪ್ಪುವಿನ ಯೋಗದ ಕಾಷ್ಠ ಹೊತ್ತುವಲ್ಲಿ,
38. ಅಪ್ಪುವಿನೊಳಗಣ ಅಗ್ನಿಯಂತೆ ಅಪ್ಪುವಿನೊಳಗೆ ಬೆರೆದು,
39. ಅಪ್ಪು ಷಡುವರ್ಣವ ಕೂಡಿ ಚಿಹ್ನವಿಚ್ಫಿನ್ನವಿಲ್ಲದೆ
40. ಅಪ್ಪು ಫಲವ ನುಂಗಿ, ಫಲ ಅಪ್ಪುವ ನುಂಗಿ,
41. ಅಮೃತ ಸಾರವ ಬಲ್ಲುದೆ ? ಶಾಖೆ ಫಲವ ಬಲ್ಲುದೆ ?
42. ಅಯ್ಯಾ ಎನ್ನ ಕೇಡು ನಿನಗಲ್ಲದೆ ಎನಗೊಂದಿಲ್ಲ.
43. ಅಯ್ಯಾ [ನಾ] ನಿನಗಂಜುವೆ.
44. ಅಯ್ಯಾ, ನಿಮ್ಮಾದ್ಯರ ವಚನವ ಕೇಳಿ,
45. ಅರಗಿನ ಪುತ್ಥಳಿ ಉರಿಯ ಮನೆಯ ಹೊಕ್ಕಂತಿರಬೇಕು.
46. ಅರಗಿನ ಮಣಿಯ ಮಾಡಿ, ಉರಿಯ ನೇಣ ಮಾಡಿ,
47. ಅರಿತೆಹೆನರಿತೆಹೆನೆಂದು ಹೊರಹೊಮ್ಮುವಾಗ
48. ಅರಿದವ ತಾ[ನರಿ]ದ ಮತ್ತೆ ಹೆರೆ ಹಿಂಗದಿರಬೇಕು.
49. ಅರಿದ ಶರಣಂಗೆ ಅಡಗುವ ಠಾವುಂಟೆ ?
50. ಅರಿದು ಮಾಡುವ ಮಾಟ ಮರವೆಗೆ ಬೀಜವೆಂದೆ.
51. ಅರಿದೆನೆಂಬುದೇನೊ ? ಮರೆದೆನೆಂಬುದೇನೊ ?
52. ಅರಿವ ಕತ್ತಿ ಹರಣದ ಇರವ ಬಲ್ಲುದೆ ?
53. ಅರಿವನರಿವನ್ನಕ್ಕ ಅರ್ಚನೆ ಬೇಕು.
54. ಅರಿವ ಮನ ಏಕವಾಗಿಯಲ್ಲದೆ,
55. ಅರಿವಲ್ಲಿ ಉಭಯ,ಅರಿದಲ್ಲಿ ಏಕ.
56. ಅರಿವೆ ಹೇಳುವರೆಲ್ಲರೂ
57. ಅರಿವ ಹೇಳುವ ಹಿರಿಯರೆಲ್ಲರೂ
58. ಅರಿವಿಂದ ಕಂಡೆಹೆನೆಂದಡೆ, ಅರಿವಿಂಗೆ ಮರಹು ಹಿಡಿಯಬೇಕು.
59. ಅರಿವು ಕರಿಗೊಂಡಲ್ಲಿ ಇದರ ತೆರನನರಿಯಬೇಕು
60. ಅರುವಿಂಗೆ ಅರ್ಚನೆ ಒಳಗು.
61. ಅರ್ಚನೆಗೊಳಗಾಯಿತ್ತು ಲಿಂಗವೆಂಬರು, ಅದು ಹುಸಿ, ನಿಲ್ಲು.
62. ಅರ್ಚನೆಯಲರ್ಚಿಸಿದಲ್ಲಿ ಪುಣ್ಯದ ಫಲ, [ಭಕ್ತಿ].
63. ಅರ್ಚನೆಯ ಮಾಡುವಲ್ಲಿ, ಮಚ್ಚಿ ಬಯಸಲಾಗದು ಇಷ್ಟಾರ್ಥವ.
64. ಅರ್ಪಿತ ಭಿನ್ನವ ಮಾಡಬಹುದೆ ಅಯ್ಯಾ ?
65. ಅಲ್ಲಿಗೆ ಮರ್ಕಟನಂತಾಗದೆ, ಇಲ್ಲಿಗೆ ವಿಹಂಗನಂತಾಗದೆ.
66. ಅಷ್ಟ [ಕು] ಲ ದಿಗ್ದೇಶವನೆಲ್ಲವನು, ತತ್ತಿಯೊಳಗಣ ತುಪ್ಪುಳು ನುಂಗಿತ್ತು.
67. ಅಷ್ಟತನುಮೂರ್ತಿ ಕೂಡಿ ನಿಂದು, ವಸ್ತುವನರಿಯಬೇಕೆಂ[ಬು]ದು,
68. ಅಸಿ ಮಸಿ ಕೃಷಿ ವಾಣಿಜ್ಯ ಗೋಪಾಲ ಯಾಚನ
69. ಅಸಿಯಾಗಲಿ ಮಸಿಯಾಗಲಿ ಕೃಷಿಯಾಗಲಿ
70. ಅಹುದಹುದು, ಮಹಾಂತಿನ ಮನ ಎಲ್ಲರಿಗೆಲ್ಲಿಯದೊ ?
71. ಅಳಿವರಿಗೆ ಉಳಿವು ಎಲ್ಲಿಯೂ ಇಲ್ಲವೆಂಬುದ ತಿಳಿ.
72. ಆಕಾಶದಲ್ಲಿ ಗುಡಗಿ ಆಡಗುವ ಭೇದವ,
73. ಆಕಾಶ ಸತ್ತಿತ್ತು, ಬಯಲು ಅತ್ತಿತ್ತು, ವಾಯು ಹೊತ್ತಿತ್ತು,
74. ಅ ಖಂಡವ ಕೊಯ್ದು ಉಂಡವ ಭಕ್ತ, ಕೊಂಡವ ಮಾಹೇಶ್ವರ,
75. ಆಗಮವನರಿದಲ್ಲಿ ಆಗುಚೇಗೆಯನರಿಯಬೇಕು.
76. ಆಚಾರ ಅನುಸರಣೆಯಾದಲ್ಲಿ, ಲಿಂಗ ಬಾಹ್ಯವಾದಲ್ಲಿ,
77. ಆಚಾರಗುರು, ಸಮಯಗುರು, ಜ್ಞಾನಗುರು.
78. ಆಡುವಂಗೆ ಅವಧಾನ ಆಭಾಸಾಂಗವಲ್ಲದೆ
79. ಆಡುವ ಆಟವು ತಪ್ಪಿದ ಮತ್ತೆ
80. ಆತ್ಮ ತೇಜಕ್ಕೆ ಬೀಗಿ ಬೆರೆದು, ಶಾಸ್ತ್ರದ ಸಂತೋಷಕ್ಕೆ ಸಾಧ್ಯವಾದಿಹಿತೆಂದು,
81. ಆತ್ಮ ತೇಜದಲ್ಲಿ ಪೂಜಿಸಿಕೊಂಬ ಹಿರಿಯರುಗಳೆಲ್ಲರೂ
82. ಆತ್ಮತೇಜವ ಬಿಟ್ಟಾಗವೆ ಗುರುವನರಿದವ.
83. ಆತ್ಮನನರಿದೆಹೆವೆಂದು ಭೀಷ್ಮಿಸಿಕೊಂಡಿಪ್ಪ
84. ಆತ್ಮ ಪೃಥ್ವಿಯ ಗುಣವೊ ? ಅಪ್ಪುವಿನ ಗುಣವೊ ?
85. ಆದ್ಯರ ವಚನವ ನೋಡಿ, ಓದಿ ಹೇಳಿದಲ್ಲಿ ಫಲವೇನಿ ಭೋ ?
86. ಆದಿ ಅನಾದಿ ಅಂತರಾದಿ ನಾದ ಬಿಂದು ಕಳೆ
87. ಆದಿ ಮಧ್ಯ ಅವಸಾನವ ತಿಳಿದು ಆತ್ಮನನೆಯ್ದಬೇಕೆಂಬುದು
88. ಆದಿಯನರಿದ ಮತ್ತೆ ಅನಾದಿಯಲ್ಲಿ ನಡೆವ ಪ್ರಪಂಚೇಕೆ ?
89. ಆದಿಶೂನ್ಯಲಿಂಗಕ್ಕೆ ಮಜ್ಜನವಾವುದು ?
90. ಆನಂದಿಸಿ ಕಣ್ಣ ಮುಚ್ಚಿ ಆಹಾ ಎಂಬುದು ಆವೇಶಭಕ್ತಿ.
91. ಆನೆ ಕುದುರೆ ಭಂಡಾರವಿರ್ದಡೇನೊ ?
92. ಆ ಪರವನರಿದುದೆ ಕಪ್ಪರ.
93. ಆ ಮಹಾಂತಿನ ಘನವೆಂತೆಂದಡೆ, ಹೇಳಿಹೆ ಕೇಳಿರಣ್ಣಾ.
94. ಅರುದರುಶನದೊಡೆಯನ ಅಂತರಂಗದೊಳಿಪ್ಪ
95. ಅರೂಢನಾಗಿ ತಿರುಗಿ, ಮೂಢರ ಬಾಗಿಲಲ್ಲಿ ನಿಂದು,
96. ಆರೂಢನಾದ ಮತ್ತೆ, ರೂಢಿಯ ಅವತಾರವ ಹೊರಲೇಕೊ ?
97. ಆ ಲಿಂಗಸ್ಥಲ ಭಾವ[ಸ್ವ]ರೂಪವಾದಲ್ಲಿ,
98. ಆವಾವ ವಸ್ತು ತನ್ನ ಸ್ಥಾನದಲ್ಲಿ ರಿತುಕಾಲ ತುಂಬುವನ್ನಕ್ಕ.
99. ಆವಾವ ವಿಶ್ವಾಸದಲ್ಲಿ, ಭಕ್ತಿಯ ಮಾಡುವಲ್ಲಿ,
100. ಆವಾವ ಸ್ಥಲಂಗಳನಾದರಿಸಿ ನಡೆವಲ್ಲಿ,
101. ಆಳಿನಪಮಾನ ಆಳ್ದಂಗೆ[0]ದಲ್ಲಿ, ಆಳ್ದನಪಮಾನ ಆಳಿ[0]ಗೆ ಬಂದಲ್ಲಿ,
102. ಆಳು ಸಿಕ್ಕಿದಲ್ಲಿ ಕೈದುವಿನ ಒರೆಯ ತೆಗೆಯಬೇಕಲ್ಲದೆ,
103. ಇಂತೀ ಗುರುಸ್ಥಲವ ಲಿಂಗಸ್ಥಲವ, ಅಂಗೀಕರಿಸಿ ನಿಂದ ಶರಣನ ಇರವು
104. ಇಂದ್ರಿಯಂಗಳ ಕಟ್ಟಿ ವಸ್ತುವನರಿಯದೆಹೆನೆಂದಡೆ, ಕರೆವ ಹಸುವಲ್ಲ.
105. ಇಕ್ಕುವುದಕ್ಕೆ ಮುನ್ನವೆ ಬಾಯಾರಿ,
106. ಇಡಾ ಪಿಂಗಳ ಸುಷಮ್ನನಾಳ ನಾಡಿಗಳಲ್ಲಿ,
107. ಇದ್ದುದ ಇಲ್ಲದಲ್ಲಿ ನೋಡಲಿಕೆ ಅಲ್ಲಿಯೆ ಅಡಗಿತ್ತು.
108. ಇನ್ನು ಕೇಳಿ ಅರಿದೆಹೆನೆಂಬಾಗ ಮುಂದಕ್ಕೆ ಮರವೆಯೆ ?
109. ಇನ್ನೇನಹುದೆಂಬೆ, ಇನ್ನೇನಲ್ಲೆಂಬೆ, ಎಲ್ಲಾಮಯವು ನೀನಾಗಿ ?
110. ಇರಿ ಎಂಬುದಕ್ಕೆ ಮುನ್ನವೆ ಒಡಲು ಹರಿಯಿತ್ತೆ ?
111. ಇರಿವ ಅಸಿ, ನೋವ ಬಲ್ಲುದೆ ?
112. ಇರುವೆ ಆನೆಯ ನುಂಗಿತ್ತು, ಹೊಟ್ಟೆಗೆಯ್ದದೆ ಮಿಕ್ಕುವರ ನುಂಗಿತ್ತು.
113. ಇಷ್ಟಲಿಂಗಕ್ಕವಿರ್ತದ ಭಾಜನದೆಂದು,
114. ಇಷ್ಟಲಿಂಗದಲ್ಲಿ ಮುಟ್ಟುತಟ್ಟು ಬಲ್ಲವಂಗೆ
115. ಇಷ್ಟಲಿಂಗ ನಿದ್ರೆಯಲ್ಲಿ ಸೃಷ್ಟಿಯ ಮೇಲೆ ಬಿದ್ದು ಹೊರಳುವಾಗ,
116. ಇಷ್ಟಲಿಂಗವನರ್ಚಿಸುವನ ಇರವು,
117. ಇಷ್ಟಲಿಂಗವನರಿದು ಪೂಜೆಯ ಮಾಡಿ,
118. ಇಷ್ಟಲಿಂಗದಂಗ ಭಕ್ತಿಸ್ಥಲ, ಭಾವಲಿಂಗದಂಗ ಮಾಹೇಶ್ವರಸ್ಥಲ,
119. ಇಷ್ಟಲಿಂಗಸಂಬಂಧ, ಭಾವಲಿಂಗಸಂಬಂಧ,
120. ಇಷ್ಟಲಿಂಗಸಂಬಂಧಿಗಳು ಭಕ್ತಿಸ್ಥಲವನರಿಯರು.
121. ಇಷ್ಟಲಿಂಗವ ಹಿಡಿದು ಪೂಜೆಯ ಮಾಡುವಲ್ಲಿ,
122. ಇಹದಲ್ಲಿ ಸುಖಿ, ಪರದಲ್ಲಿ ಪರಿಣಾಮಿ ಎಂಬರು,
123. ಈದ ಪಶುವಿನ ಮೊಲೆಯಲ್ಲಿ ಕೈಯನಿಕ್ಕಿದಡೆ ಕ್ಷೀರವಲ್ಲದೆ,
124. ಈರೇಳುಭುವನ ವಳಯ ಮಧ್ಯದಲ್ಲಿ, ಹುಟ್ಟಿದುದೊಂದು ಚಿತ್ರ.
125. ಈರೇಳುಲೋಕವ ಕೋಡಗ ನುಂಗಿತ್ತ ಕಂಡೆ.
126. ಈಶ್ವರನಂಗವ ತಾಳಿದ ಮತ್ತೆ ಪರಕೆ ದೇಗುಲವಾಗಿರಬೇಕು
127. ಉಂಟು ಉಂಟೆಂಬನ್ನಕ್ಕ ಸಂದೇಹಕ್ಕೀಡಾಗದೆ,
128. ಉಂಡು ಉಪವಾಸಿ ಬಳಸಿ ಬ್ರಹ್ಮಚಾರಿಯಾದೆನೆಂಬ
129. ಉಂಡು ಕೊಂಡಾಡುವನ್ನ ಬರ,
130. ಉಂಬ ಊಟ ನಿನಗೊ, ಅಶನಕ್ಕೊ ಎಂಬುದನರಿ,
131. ಉಂಬ ತಳಿಗೆಯ ಬೆಳಗಿದಡೆ ನೊಂದಿತ್ತೆ, ನನ್ನ ಬೆಳಗಿದರೆಂದು ?
132. ಉಡುಪ ತನ್ನ ಕಳೆಯ ತಾ ಕಾಣಿಸಿಕೊಂಬಂತೆ,
133. ಉದಕದ ಬಾಯಲಲಿ ಒಂದು ರಸದ ಗಿರಿ ಹುಟ್ಟಿ,
134. ಉದಕದಲ್ಲಿ ತೊಳೆದು ಕಂಡೆಹೆನೆಂದಡೆ ಮಲಿನವಲ್ಲ.
135. ಉದಕದಲ್ಲಿ ಮಜ್ಜನವ ಮಾಡಿ, ಇಹ ಪರವ ಹರಿದವರಾರುವ ಕಾಣೆ.
136. ಉದಕವ ನುಂಗಿದ ಕೆಸರಿನಂತೆ, ಆತ್ಮ ಗಸಣಿಗೊಳಗಾಯಿತ್ತು.
137. ಉದಕವಿಲ್ಲದಿರೆ ಅಂಬುಧಿ ತಟಾಕಂಗಳೆಂಬ ನಾಮವುಂಟೆ ?
138. ಉದಕದ ರಸದಂತೆ, ಅಗ್ನಿಯ ಉಭಯದಂತೆ,
139. ಉದ್ಯಾಪನ ವ್ಯಾಪಾರ ಕೃತಭೇದ ಸರ್ವವನರಿದು,
140. ಉಪೇಕ್ಷೆಯಿಂದ ಉರಿವ ಬೆಳಗು, ಪವನನ ಪ್ರಾಣಕ್ಕೆ ಒಳಗು.
141. ಉಭಯವ ನೆಮ್ಮಿ ಹರಿವ ನದಿಯಂತೆ, ಮಾಡುವ ಕ್ರೀ, ಅರಿವ ಚಿತ್ತ.
142. ಉರಿ ಆತ್ಮಸ್ಥಾವರಂಗಳಲ್ಲಿ ನಂದದಿಹನ್ನಕ್ಕ,
143. ಉರಿಗೆ ರಸ ನಿಂದಾಗವೆ ರಸಸಿದ್ಧಿ ಎಂದೆ.
144. ಉರಿದು ಬೇವುದು ಉರಿಯೋ, ಮರನೋ ?
145. ಉರಿದು ಸತ್ತುದು, ಮತ್ತುರಿದು,
146. ಉರಿ ನೀರು ಕುಂಭದಂತೆ ಆಗಬಲ್ಲಡೆ, ಕಾಯಲಿಂಗಸಂಬಂಧಿ.
147. ಉರಿಯ ಬಣ್ಣದ ಸೀರೆಯನುಟ್ಟು,
148. ಉರಿಯೊಳಗಣ ಶೈತ್ಯದಂತೆ, ಶೈತ್ಯದೊಳಗಣ ಉರಿಯಂತೆ,
149. ಉರಿವ ಗಿರಿಯ ಮೇಲೆ ಬೆಣ್ಣೆಯ ಕೋಣ ಹುಟ್ಟಿ,
150. ಊಟದ ಸುಖವ ಕಲಿತ ಮತ್ತೆ ನೋಟಕ್ಕೆ ದೃಷ್ಟ.
151. ಊರ ಗುಬ್ಬಿಯೂ ಕಾಡಗುಬ್ಬಿಯೂ ಕೂಡಿಕೊಡು,
152. ಊರ ಮುಂದೊಂದು ದೇವರ ಗುಡಿಯ ಕಂಡೆ.
153. ಊರಾಡಿದಂತಾಡದಿರ್ದಡೆ ದೂರಿಹರೆನ್ನನು.
154. ಊರಿಗೆ ಹೋಹಾಗ ಓಣಿಯ ಇಕ್ಕೆಲದ ದಾರಿಯಲ್ಲಿ ಕಟ್ಟಿದ ಕಳ್ಳರ ದಂಡೆ.
155. ಊರಿನ ಹಾದಿಯಲ್ಲಿ ಹೋಗುತ್ತಿರಲಾಗಿ, ಎಯ್ದಿ ಬಂದಿತ್ತೊಂದು ಹಾವು.
156. ಊರು ಕೆಟ್ಟು ಸೂರೆಯಾಡುವಲ್ಲಿ ಆರಿಗಾರೂ ಇಲ್ಲ.
157. ಊರೆಲ್ಲರು ಬೇಟೆಗೆ ಹೋಗಿ ಕೊಂದರು ಕಾಡೆಮ್ಮೆಯ.
158. ಊರೊಳಗಣ ಉಡು ಕೇರಿಯ ನುಂಗಿತ್ತು.
159. ಊರೊಳಗಿದ್ದು ಊರು ಸುಡಬೇಕಲ್ಲದೆ,
160. ಎನಗೆ ಗುರುವಾಗಿ ಬಂದನಯ್ಯಾ ಬಸವಣ್ಣನು.
161. ಎನಗೆ ನೀನಿಂಬಕೊಡುವಲ್ಲಿ ಸಕಲವ ಪ್ರಮಾಣಿಸುವದ ಬಿಟ್ಟು,
162. ಎನ್ನ ಅರಿವು ಮರಹು ಬಸವಣ್ಣಂಗರ್ಪಿತ.
163. ಎನ್ನ ಚಿತ್ತಕ್ಕೆ ನಕಾರವಾದನಯ್ಯಾ ಬಸವಣ್ಣನು.
164. ಎನ್ನ ತನುವಿನಲ್ಲಿ ಗುರುಮೂರ್ತಿ ಸಂಗನಬಸವಣ್ಣನ ಕಂಡೆನು.
165. ಎನ್ನ ನೆನಹಿನ ನಿಧಿಯ ನೋಡಾ, ಎನ್ನ ಅನುವಿನ ಘನವ ನೋಡಾ.
166. ಎನ್ನ ಮಾಟ, ಕುರುಡ ಸಭೆಯಲ್ಲಿರ್ದು ನಗೆನಕ್ಕಂತಾಯಿತ್ತು.
167. ಎನ್ನ ವಿಶ್ವಾಸದಿಂದ ನಿನ್ನ ನೋಡಿಹೆನೆಂದಡೆ, ನೀ ವಿಶ್ವಾಸಹೀನ.
168. ಎಲೆ ಆತ್ಮನೆ ಪಾತಕದ ಪಾಕುಳದಲ್ಲಿ ಏಕೆ ಹುಟ್ಟಿದೆ ?
169. ಎಷ್ಟು ಪಟುಭಟನಾದಡೂ ಸ್ಫುಟದ ಮನೆಯಲ್ಲಿ ಅಡಗಬೇಕು.
170. ಏಕಜಲ ಬಹುಜಲವಾದ ಕ್ರಮವನರಿವುದು. ಅದಕ್ಕೆ ದೃಷ್ಟ;
171. ಏಕಾಕಾಶದಿಂದ ಅಂಬು ಸಂಭ್ರಮಿಸಿತ್ತು.
172. ಏತದ ತುದಿಯಲ್ಲಿ ಕಟ್ಟಿದ ಮಡಕೆಯಂತೆ, ಅದ ನೀತಿವಂತರು ಮೆಟ್ಟಿ,
173. ಏರಿ ನೀರ ಕುಡಿಯಿತ್ತು. ಬೇರು ಬೀಜವ ನುಂಗಿತ್ತು.
174. ಐಕ್ಯ ಶರಣಸನ್ಮತವಾಗಿ, ಶರಣ ಪ್ರಾಣಸನ್ಮತವಾಗಿ,
175. ಐದು ವರ್ಣದ ಪಶುವಿನ ಬಸುರಿನಲ್ಲಿ, ಮೂರು ವರ್ಣದ ಕರು ಹುಟ್ಟಿ,
176. ಒಂದ ಕಂಡು ಒಂದನರಿದೆಹೆನೆಂಬನ್ನಕ್ಕ,
177. ಒಂದು ದ್ವಾರದಲ್ಲಿ ಬಂದ ಆತ್ಮಂಗೆ, ಹಲವು ದ್ವಾರದಲ್ಲಿ ಉಂಟೆಂದು,
178. ಒಂದು ಪಕ್ಷಿಗೆ ಐದು ತಲೆ, ಶಿರವೊಂದರಲ್ಲಿಯೆ ಮೂಡಿತ್ತು ನೋಡಾ.
179. ಒಂದು ಬಾಲೆ ಕಂದನ ಹೊತ್ತು ಬಂದಿತ್ತು.
180. ಒಂದು ಬೀಜವ ಬಿತ್ತಿದಡೆ ಮೂರು ಫಲವಾಯಿತ್ತು.
181. ಒಂದು ಮೂರಾದ ಭೇದವ, ಮೂರು ಆರಾದ ಭೇದವ,
182. ಒಂದು ಶಿಲೆಯೊಡೆದು ಮೂರಾದ ಭೇದವ ನೋಡಾ.
183. ಒಡಗೂಡಿಪ್ಪ ಲಿಂಗವನರಿಯದೆ ಅಡಿಯಿಟ್ಟು,
184. ಒಡಲಿಲ್ಲದ ಭಕ್ತಂಗೆ ನಿರ್ಜೀವಿ ಜಂಗಮ ಸುಳಿದ ನೋಡಯ್ಯಾ.
185. ಒಡಲಿಲ್ಲದೆ ಆತ್ಮನಿರಬಲ್ಲುದೆ ? ಕ್ರೀಯಿಲ್ಲದೆ ಸತ್ಯ ನಿಲಬಲ್ಲುದೆ ?
186. ಒಡೆಯರ ಕಟ್ಟಳೆಯಾದ ಮತ್ತೆ,
187. ಒಡೆಯರು ದೇವರಿಗೆ ಕೊಟ್ಟಲ್ಲದೆ, ಕೊಳ್ಳೆನೆಂಬ ಮೃಡನ ಭಕ್ತರ ನೋಡಾ.
188. ಒಪ್ಪದ ಕಪ್ಪೆ ಸರ್ಪನ ನುಂಗಿತ್ತ ಕಂಡೆ.
189. ಒಳಲೆಯಲಟ್ಟಿದ ಹಾಲು, ಆ ಮಗುವಿನ ತಳದ ಏಣಲೆ ಕುಡಿಯಿತ್ತು.
190. ಓ ಎಂದಲ್ಲಿ ನಿರಾಕಾರವಸ್ತುವಾದೆಯಲ್ಲಾ,
191. ಓದಿನಲ್ಲಿ ಕಾಬಡೆ ಅಕ್ಷರಜ್ಞನಲ್ಲ,
192. ಔದುಂಬರದ ಕುಸುಮದಲ್ಲಿ ಪಾದರಿ ಫಲವಾಗಿ,
193. ಕಂಚಗಾರನ ಕೈಯ ಮೈಣವಿದ್ದಡೆ, ನಾನೆಂತು ಉಪಮಿಸುವೆ ?
194. ಕಂಡು ನೋಡಿದಲ್ಲಿ ಕಂಗಳಿಗೆ ಸುಖ, ,
195. ಕಂಡೆನಯ್ಯಾ, ಕಂಗಳೊಳಗೊಂದು
196. ಕಂಡೆನೊಂದು ನೆಟ್ಟ ಶೂಲವ, ಮೊದಲೊಂದು, ತುದಿಮೂರು.
197. ಕಂಥೆಯೊಳಗಣ ಕಪ್ಪ[ಡ]ವ ಹರಿದಲ್ಲದೆ ಕಾಯವಂಚಕನಲ್ಲ,
198. ಕಂಬಳಿಯ ಹರಿಕಿನಲ್ಲಿ ಛತ್ತೀಸಕೋಟಿದೇವರ್ಕಳೆಲ್ಲರೂ ಸಿಕ್ಕಿ,
199. ಕಂಬಳಿಯಲ್ಲಿ ಕೂಳ ಕಟ್ಟಿ, ಕೂದಲ ಸೋದಿಸಬಹುದೆ ಅಯ್ಯಾ ?
200. ಕಕ್ಷದಲ್ಲಿ ಅಂಗವ ಧರಿಸಿದ ಮತ್ತೆ ಕುಕ್ಷಿಯ ವರ್ತನೆ ಬಿಡಬೇಕು.
201. ಕಕ್ಷೆ, ಕರಸ್ಥಲ, ಉತ್ತಮಾಂಗ, ಉರಸೆಜ್ಜೆ, ಮುಖಸೆಜ್ಜೆ, ಅಮಳೋಕ್ಯ,
202. ಕಚ್ಚುವ ಹಾವ ಹಿಡಿವುದಕ್ಕೆ ಗಾರುಡವ ಕಲಿಸಿದುದಿಲ್ಲ.
203. ಕಟ್ಟರಸಿನೊ[ಡನೆ] ಎಕ್ಕಸಕ್ಕವನಾಡಿದಡೆ,
204. ಕಟ್ಟಿಗೆ ಕಸ ನೀರ ಹೊತ್ತು ಭಕ್ತರನ್ನಲ್ಲದೆ ಬೇಡೆನೆಂದು,
205. ಕಟ್ಟಿ ಬಿಟ್ಟು ಕಂಡೆಹೆವೆಂದು ಬಿಗಿದಿಪ್ಪರಂತೆ ಕೆಲ[ವರು].
206. ಕಣ್ಣ ಮುಚ್ಚಿ ದೃಷ್ಟಿಯಲ್ಲಿ ನೋಡಬಲ್ಲಡೆ ಆತನ ಬಲ್ಲವನೆಂಬೆ.
207. ಕಣ್ಣಿನಲ್ಲಿ ನೋಡಿ ಕಂಡೆಹೆನೆಂದಡೆ ರೂಪಿಂಗೊಡಲಿಲ್ಲ.
208. ಕಣ್ಣಿಲ್ಲದವ ಕನ್ನಡಿಯ ನೋಡಿ ಕಂಡ.
209. ಕಣ್ಣಿಲ್ಲದವಂಗೆ ಬಣ್ಣಬಚ್ಚಣೆಯೇಕೆ ?
210. ಕಣ್ಣು ಕಳೆದು ದೃಷ್ಟಿ ಕಾಬುದ ಕಂಡೆ.
211. ಕತ್ತಲೆಯ ಉದಕದಲ್ಲಿ ಮತ್ಸ್ಯ ಹುಟ್ಟಿದುದ ಕಂಡೆ.
212. ಕತ್ತಿಯನೆತ್ತಿ ಕೊಲೆಗೆಣಿಸಿದಡೆ,
213. ಕತ್ತೆ, ಕರ್ಪುರವ ಬಲ್ಲುದೆ ? ನಾಗ, ನಾಣ್ಣುಡಿಯ ಬಲ್ಲುದೆ ?
214. ಕತ್ತೆ ಬತ್ತಲೆ ಇದ್ದಡೆ ನೆಟ್ಟನೆ ನಿರ್ವಾಣಿಯೆ ?
215. ಕದ್ದ ಕಳವ ಮರೆಸಿಕೊಂಡು, ನಾ ಸಜ್ಜನನೆಂಬಂತೆ,
216. ಕಪ್ಪೆ ಸತ್ತು ಸರ್ಪನ ನುಂಗಿತ್ತು ನೋಡಾ.
217. ಕರ್ತೃ ನೀನಾಗಿ, ಭೃತ್ಯ ನಾನಾದ ಅಚ್ಚುಗವ ಬಿಡಿಸಯ್ಯಾ.
218. ಕರಣ ನಾಲ್ಕು, ಮದುವೆಂಟು, ವ್ಯಸನವೇಳು, ಅರಿಷಡ್ವರ್ಗಂಗಳಲ್ಲಿ
219. ಕರ್ಪುರದ ಘಟ ಬೆಂದಂತೆ, ಭಿತ್ತಿಯ ಮೇಲಣ ಚಿತ್ರಪಟ ನೆನೆದಂತೆ,
220. ಕರ್ಮವ ಮಾಡುವಲ್ಲಿ, ಆ ಕರ್ಮದ ವರ್ಮವನರಿಯಬೇಕು.
221. ಕಲ್ಲನೊಡೆದು ಕಲ್ಲು ಒಡಗೂಡುವಂತಾಗಬಲ್ಲಡೆ ಇಷ್ಟಲಿಂಗಸಂಬಂಧಿ.
222. ಕಲ್ಲಿನೊಳಗಣ ದಳ್ಳುರಿ, ಹುಳ್ಳಿಯ ಕಿಚ್ಚಿನಂತೆ
223. ಕಲ್ಲಿನೊಳಗೆ ವಲ್ಲಭನಿದ್ದಹನೆಂದು ಎಲ್ಲರೂ
224. ಕಲ್ಲಿಯ ಬಿಗಿದಡೆ, ತಲ್ಲೀಯವಾದ ಕಲ್ಲಿ
225. ಕಲ್ಲದೇವರೆಂದು ನಂಬಿ ಪೂಜಿಸಿದವರೆಲ್ಲರೂ
226. ಕಲ್ಲು ಮಣ್ಣು ಮರದಲ್ಲಿ ದೇವನಿದ್ದಹನೆಂದು
227. ಕವಡೆ ಕಟಕವ ನುಂಗಿತ್ತು,
228. ಕಳಬಂದ ಕಳ್ಳ ಬೆಳ್ಳನ ಕಾಲದೆಸೆಯಲ್ಲಿ, ಮರೆದು ನಿದ್ರೆಗೈದ ನೋಡಾ.
229. ಕಳವಿನಲ್ಲಿ ಬಂದಿರಿದಾತ ಕಳ್ಳನಲ್ಲದೆ ಧೀರನಲ್ಲ
230. ಕಳೆ ಮೆಳೆಯ ಕಿತ್ತಲ್ಲದೆ ಹೊಲ ಶುದ್ಧವಲ್ಲ.
231. ಕಾಡೆಮ್ಮೆಯ ಹಾಲ, ಊರ ಕೋಣ ಕುಡಿದು,
232. ಕಾಣಬಾರದ ಲಿಂಗವ ಕಾಬ ಪರಿಯಿನ್ನೆಂತೊ ?
233. ಕಾಣಿಯ ಹಾಕಿ ಮುಕ್ಕಾಣಿಯನರಸುವನಂತೆ,
234. ಕಾಬ ಕಣ್ಣಿದ್ದು ಕನ್ನಡಿಯ ನೋಡುವನಂತೆ,
235. ಕಾಯ ಇಂದ್ರಿಯಂಗಳಲ್ಲಿ ಮಚ್ಚಿ ಇಹನ್ನಕ್ಕ ಭಕ್ತಿಸ್ಥಲವಿಲ್ಲ.
236. ಕಾಯಕ್ಕೆ ಕಲ್ಪಿತವುಂಟೆಂಬುದು ಹುಸಿಯೋ, ದಿಟವೋ ?
237. ಕಾಯಗುಣವಿಡಿದು ಮಾಡುವನ್ನಕ್ಕ ಸತ್ಯಸದ್ಭಕ್ತನಲ್ಲ
238. ಕಾಯ ಜೀವದ ನಡುವೆ ಒಂದ ಭಾವಿಸಿ, ಇಷ್ಟಲಿಂಗವೆಂದು ಕೊಡುವಾಗ,
239. ಕಾಯದ ಕರದಲ್ಲಿ ಲಿಂಗವ ಹಿಡಿದು,
240. ಕಾಯದ ಕಳವಳದಿಂದ, ಜೀವನ ಭ್ರಾಂತಿಯಿಂದ,
241. ಕಾಯದ ಕೈಯಲ್ಲಿ ಲಿಂಗಪೂಜೆ.
242. ಕಾಯದ ಗುಣವನರಿವುದು ಕಾಯವೋ, ಜೀವವೋ?
243. ಕಾಯದೊಳಗುಂಟೆಂದಡೆ ಕರ್ಮಕಾಂಡಿಯಲ್ಲ.
244. ಕಾಯಪ್ರಕೃತಿ, ಜೀವಪ್ರಕೃತಿ, ಭಾವಪ್ರಕೃತಿ. ಸಂಚಾರಭ್ರಮೆ ಮುಂಚದೆ,
245. ಕಾಯಬಂಧನ ಭಾವ, ಭಾವಬಂಧನ ಜ್ಞಾನ, ಜ್ಞಾನಬಂಧನ ಸಕಲೇಂದ್ರಿಯ.
246. ಕಾಯ ಸಮಾಧಿಯನೊಲ್ಲೆ, ನೆನಹು ಸಮಾಧಿಗೆ ನಿಲ್ಲೆ,
247. ಕಾಯಸೂತಕಿಗಳು ಗುರುವನರಿಯರಾಗಿ,
248. ಕಾಯ ಹಸಿದು ಓಗರವ ಬೇಡುವಾಗ,
249. ಕಾಯ ಹೋಗಿ ಕರ್ಮವ ಮಾಡಿ, ಜೀವಕ್ಕೆ ಬಾಧೆಯ ತಂದಿತ್ತೆಂಬರು.
250. ಕಾಲಜ್ಞಾನ, ಕರ್ಮಜ್ಞಾನ, ಭಾವಜ್ಞಾನ ಭ್ರಮೆಯಳಿದು,
251. ಕಾಳಗಕ್ಕೆ ಆಳಾಗಿ ಬಂದೆ.
252. ಕಾಳಗದಲ್ಲಿ ಹೋದ ಮತ್ತೆ ಆಳುತನವೆನಗಿಲ್ಲ ಎಂದಡೆ,
253. ಕಾಳರಾತ್ರಿಯೆಂಬ ಕತ್ತಲೆಯ ಮನೆಯ ಹೊಕ್ಕು,
254. ಕಾಳಾಂಧರವೆಂಬ ಕಾಳರಕ್ಕಸಿಯ ಬಸುರಲ್ಲಿ,
255. ಕಾಳೆಮ್ಮೆಯ ಕರೆಯಲಾಗಿ, ಹಾಲು ರೋಹಿತವಾಗಿ ಬಿದ್ದಿತ್ತು.
256. ಕಿವಿಯ ಮುಚ್ಚಿ ಕಣ್ಣಿನಲ್ಲಿ ಕೇಳಿದಾಗ ಭಕ್ತಸ್ಥಲ.
257. ಕೀಲಿಂಗೆ ಕೀಲ ಮಾಡಿಹೆನೆಂದಡೆ, ಆ ತರುವಿಂಗೆ ಕಡೆ ನಡು ಮೊದಲಿಲ್ಲ.
258. ಕೀಲಿನೊಳಗೊಂದು ಕೀಲ ಕಂಡೆ.
259. ಕೀಳು ಮೇಲನರಸುವುದಕ್ಕೆ ಕೋಳಿಯ ಕಾಳಗವೆ ?
260. ಕುಕ್ಕುಟನ ಗರ್ಭದಲ್ಲಿ ಒಂದು ಮಾರ್ಜಾಲ ಹುಟ್ಟಿ,
261. ಕುರಿ ಕುನ್ನಿ ಮೊದಲಾಗಿರ್ದವು ಒಡೆಯನ ಬಲ್ಲವು.
262. ಕುರುಡನ ಮುಂದೆ ಗುಣಮಣಿ ಇದ್ದಡೆ,
263. ಕುರುಹ ಕೊಡುವಲ್ಲಿ ಗುರುವಾಗಿ,
264. ಕುರುಹಡಗಿಯಲ್ಲದೆ ಒಂದನರಿಯಬಾರದು.
265. ಕುರುಹವಿಡಿದು ಕಂಡೆಹೆನೆಂದಡೆ, ಪುಣ್ಯವ ಮಾಡಬೇಕೆಂಬರು.
266. ಕುಲ ಛಲ ಪಿಷ್ಠ ನೈಷ್ಠಿಕತೆಯಿಂದ ದೃಷ್ಟಿಸಿಕೊಂಡಿರ್ಪ
267. ಕುಲಿಶ ಅಂಗುಲದೊಳಗಡಗಿದಡೆ, ಕುಟ್ಟದೆ ಬೆಟ್ಟವ ಹಿಟ್ಟುಗುಟ್ಟಿ ?
268. ಕುಸುಮ ಗಂಧವ ಉಪದೃಷ್ಟದಿಂದ ಹೊರೆವಂತೆ,
269. ಕುಸುಮದಲ್ಲಿ ವಾಸನೆಯಿದ್ದಡೇನು
270. ಕುಸುಮದೊಳಗಣ ಗಂಧ ಹೋದ ಮತ್ತೆ, ಕುಸುಮವನಾರು ಬಲ್ಲರು ?
271. ಕೂಟಗೆಯ ಕೂಳನುಣ್ಣಬಂದವರೆಲ್ಲರೂ ಅಜಾತನ ನಿಲವ ಬಲ್ಲರೆ ?
272. ಕೂಟದ ಲಕ್ಷಣವುಳ್ಳನ್ನಕ್ಕ ಐಕ್ಯಸ್ಥಲ.
273. ಕೂಟದಲ್ಲಿ ಸುಖಿಯಾದ ಮತ್ತೆ ಬೇಟ ಕೂಟವೇಕೆ ?
274. ಕೃತಯುಗಕ್ಕರಸು ಶೂಲಿ, ತ್ರೇತಾಯುಗಕ್ಕರಸು ರಘು.
275. ಕೃತಯುಗದಲ್ಲಿ ಕುಂಜರನೆಂಬ ಆನೆಯ ತಿಂದರು ವಿಪ್ರರು.
276. ಕೆಚ್ಚಲಿನ ಹಾಲಲ್ಲಿ ತುಪ್ಪವಿಪ್ಪ ಭೇದವ ಬಲ್ಲಡೆ ಬಲ್ಲರೆಂಬೆ.
277. ಕೆರೆಯೊಳಗಣ ಮೊಸಳೆಯ ತಡಿಯ, ಉಡು ನುಂಗಿತ್ತು.
278. ಕೆಸರ ತೊಳೆವರಲ್ಲದೆ ಉದಕವ ತೊಳೆವರುಂಟೆ ಅಯ್ಯಾ ?
279. ಕೈಯಲ್ಲಿ ಕುರುಹ ಹಿಡಿದು, ಕಣ್ಣಿನಲ್ಲಿ ನೋಡಿ,
280. ಕೈಯಲ್ಲಿ ಹಿಡಿದಡೆ ಕಲ್ಲು ಸಿಕ್ಕಿತ್ತಲ್ಲದೆ, ಲಿಂಗವಿಲ್ಲಾ ಎಂದೆ.
281. ಕೊಂಡ ಅನ್ನದಿಂದ ಅಜೀರ್ಣ ಬಂದಡೆ,
282. ಕೊಂದು ಕುಟ್ಟಿ ದಂಡವ ಕೊಂಬವಂಗೆ,
283. ಕೊಟ್ಟ ದ್ರವ್ಯವನು ತಮ್ಮ ತಮ್ಮ ಲಿಂಗಕ್ಕೆ
284. ಕೊರಳ ಕಟ್ಟಿದ ನೇಣು ತಿರುಗಲಾಗಿ,
285. ಕೊರಳಿಗೆ ಒಂದು ನೇಣಿನಲ್ಲಿ ಸಂದೇಹ ಬಿಡದು.
286. ಕೊಲ್ಲಬಾರದು ಎಂದು ಎಲ್ಲಕ್ಕೆ ಹೇಳಿ,
287. ಕೋಡಗ ಜೋಗಿನಾಡಿಸುವುದ ಕಂಡೆ.
288. ಕೋಡಗದಣಲಿನಲ್ಲಿ ಮೂರಗುಳ ಕಂಡೆ.
289. ಕೋಲ ಹಿಡಿದು ಆನೆಯನೇರಿದ ಮತ್ತೆ,
290. ಕೋಳು ಹೋದ ಮತ್ತೆ ಕಾಳಗದ ಇರವೇಕೆ ?
291. ಕ್ರೀ ಆಚರಣೆ ಶುದ್ಧವಾದಲ್ಲಿ ಇಷ್ಟಲಿಂಗಪೂಜೆ.
292. ಕ್ರೀವಂತಂಗೆ ಅಂಗ ಭವಿ, ನಿಃಕ್ರೀವಂತಂಗೆ ಮನ ಭವಿ,
293. ಕ್ರೀವಂತಂಗೆ ಪಡಿಪುಚ್ಚಕ್ಕೆ ಬಂದಾಗವೆ ಆಚಾರಕ್ಕೆ ಭಂಗ.
294. ಕ್ರೀಶುದ್ಧವಾದವಂಗೆ ಭಾವಶುದ್ಧ.
295. ಕ್ರೂರ, ಮೃಗ, ಜಾರ, ಚೋರ, ಸಂದಣಿಗ, ಭಂಡ, ಚಾರ್ವಕ,
296. ಕ್ರೋಧವ ಬಿಟ್ಟಲ್ಲದೆ ಇಚ್ಫಾಶಕ್ತಿಯ ಹೊರಗಲ್ಲ.
297. ಖ್ಯಾತಿಲಾಭಕ್ಕೆ ಮಾಡುವಾತನೆಂಬುದನರಿದು,
298. ಗರಳವಿಲ್ಲದ ಉರಗಂಗೆ ಹಲಬರಂಜಿದರುಂಟೆ ?
299. ಗಾಜಿನ ಗೋಡೆಯ ಸುಣ್ಣ ವೇಧಿಸಬಲ್ಲುದೆ ?
300. ಗಾಣದಲ್ಲಿ ಸಿಲುಕಿದ ಎಳ್ಳು, ನೋಯದೆ ಎಣ್ಣೆಯ ಬಿಡುವುದೆ ?
301. ಗಾರುಡವ ತಿಳಿದಡೆ ಹಾವಿನ ಸರಸವೆ ಲೇಸು.
302. ಗಾಳಿಯಲೆದ್ದ ಧೂಳು, ತೃಣ ಎಲೆ ಮೊದಲಾದ
303. ಗುಣವ ಕಂಡು ನೆನೆದೆಹೆನೆಂದಡೆ ಆ ನೆನಹು ನಿನ್ನ ಹಂಗು.
304. ಗುತ್ತಿಗೆಕಾರ ನುಡಿದಡೆ, ಅದ ಒಪ್ಪವಿಡಲರಿಯರು.
305. ಗುರುಜಂಗಮದ ಪಾದೋದಕವ ಲಿಂಗಕ್ಕೆ ಮಜ್ಜನವ ಮಾಡುವಲ್ಲಿ,
306. ಗುರುಪೂಜಕರೆಲ್ಲರೂ ಬ್ರಹ್ಮನ ಪಾಶಕ್ಕೊಳಗಾದರು.
307. ಗುರು ಭಕ್ತನಂಗ, ಲಿಂಗ ಮಹೇಶ್ವರನಂಗ,
308. ಗುರುಭಕ್ತನಾದಡೆ ತನುವಿನಾಸೆಯ ಬಿಡಬೇಕು.
309. ಗುರುಲಿಂಗಜಂಗಮಕ್ಕೆ ತನುಮನಧನವಂ ಸವೆಸಿ,
310. ಗುರುಲಿಂಗದ ಕುರುವಹುದಕ್ಕೆ ಕೆಟ್ಟ ದನವೆ ?
311. ಗುರುವನರಿದವಂಗೆ ಗುರುವಿಲ್ಲ,
312. ಗುರುವನರಿಯದ ಕಾರಣ ತನು ಸವೆಯಬೇಕೆಂಬರು.
313. ಗುರುವ ಭಾವಿಸಿದಲ್ಲಿ ಲಿಂಗವ ಮರೆಯಬೇಕು.
314. ಗುರುವಾದಡೆ ಕಾಲಿಲ್ಲದಿರಬೇಕು.
315. ಗುರುವಿಂಗೆ ತನು, ಲಿಂಗಕ್ಕೆ ಮನ, ಜಂಗಮಕ್ಕೆ ಧನ.
316. ಗುರುವಿಂಗೆ ತನುವ ಕೊಟ್ಟಾಗವೆ ಬ್ರಹ್ಮನ ಬಲೆ.
317. ಗುರುವಿಂಗೆ ತನುವ ಕೊಟ್ಟಿಹೆವೆಂದು
318. ಗುರುವಿಲ್ಲವೆಂದೆ, ಶಿಕ್ಷೆಯೊಳಗಣ ನಿಳಯವನರಿಯನಾಗಿ.
319. ಗುರುವೆಂದಡೆ ತನು, ಲಿಂಗವೆಂದಡೆ ಆತ್ಮ,
320. ಗುರುವೆಂದು ಪ್ರಮಾಣಿಸಿದಲ್ಲಿ, ಪ್ರತ್ಯುತ್ತರವಿಲ್ಲದೆ ನಿಗರ್ವಿಯಾಗಿರಬೇಕು.
321. ಗುರುವೆಂಬೆನೆ, ಕಂಡಕಂಡವರಿಗೆ ಲಿಂಗವ ಕೊಟ್ಟು, ದ್ರವ್ಯಕ್ಕೆ ಹಂಗಿಗನಾದ.
322. ಗುರುಶಿಷ್ಯ ಸಂಬಂಧ, ಕಮಠನ ಶಿಶುವಿನ ಕೂರ್ಮೆಯಂತಿರಬೇಕು.
323. ಗುರುಸೇವೆಯ ಮಾಡುವಲ್ಲಿ, ಉತ್ಪತ್ಯದ ಒಡಲೊಡೆಯಬೇಕು.
324. ಗುರುಸ್ಥಲ ಭಕ್ತಿವಂಶಿಕ, ಲಿಂಗಸ್ಥಲ ಮಾಹೇಶ್ವರ ವಂಶಿಕ,
325. ಗುರುಸ್ಥಲ ಮೂರಾಗಿ ನಡೆವ ಭೇದವನಾರೂ ಅರಿಯರಲ್ಲಾ.
326. ಗುರುಸ್ಥಲ ಲಿಂಗಸ್ಥಲ ಜಂಗಮಸ್ಥಲ.
327. ಗುರುಸ್ಥಲವಾರು, ಲಿಂಗಸ್ಥಲ ಮೂರು,
328. ಗುರುಸ್ಥಲವೆಂದು ಬಂದೆ, ಆಚಾರ್ಯನಾಗಿ.
329. ಗೂಳಿಯ ಕೋಡಿನಲ್ಲಿ ನಾಡೆಲ್ಲ ಸಿಕ್ಕಿತ್ತು.
330. ಗೆಲ್ಲಾಳೆಲ್ಲರು ಬಿಲ್ಲನೂರಿ ನಿಂದಿರಲಾಗಿ
331. ಗೇಣಗಲದ ಹಳ್ಳ ಕುಡಿಯಿತ್ತು ಸಪ್ತಸಮುದ್ರದುದಕವ.
332. ಗ್ರಾಮ ಮಧ್ಯದೊಳಗೆ ದೇಗುಲ, ದೇಗುಲದೊಳಗೆ ಮೂವರ ಕಂಡೆ.
333. ಘಟತತ್ವ ಪೃಥ್ವಿಭೇದವಾಗಿ, ಆತ್ಮತತ್ವ ಅಪ್ಪುಭೇದವಾಗಿ,
334. ಘಟದೊಳಗೆ ರಸವಿದ್ದು, ರಸದೊಳಗೆ ಘಟವಿದ್ದು,
335. ಚಂದ್ರಕಾಂತಶಿಲೆಯನೊಂದು ಹಿಳಿದಲ್ಲಿ, ಬಿಂದು ಬಂದುದುಂಟೆ ?
336. ಚಂದ್ರಮಂಡಲದಲ್ಲಿ ನಿಂದಿರ್ಪ ಭೇದವ, ಅದರಂಗದ ನಿಲುವೆಂತುಟೊ ?
337. ಚಕ್ರಿಯ ಚಿತ್ತದಂತೆ, ಚಿತ್ರಜ್ಞನ ಕೈಯ ಲೆಕ್ಕಣಿಕೆಯಂತೆ,
338. ಚಿತ್ತಶುದ್ಧವನರಿದು ನಡೆಯಬೇಕೆಂಬರು
339. ಚಿತ್ತ ಶುದ್ದವಾದಲ್ಲಿಯೆ ಮಜ್ಜನದ ಮಂಡೆ.
340. ಚಿತ್ರದ ಹುಲಿ ಮನುಷ್ಯನ ಕಚ್ಚಬಲ್ಲುದೆ ?
341. ಚಿನ್ನದ ಕುರುಹ ಒರೆದಲ್ಲದೆ ಅರಿಯಬಾರದು.
342. ಚಿನ್ನದಲ್ಲಿ ಮಾಡಿದ ರೂಪು, ಮಣ್ಣಿನಲ್ಲಿ ಮಾಡಿದ ರೂಪು,
343. ಚಿಪ್ಪಿನ ಮಂದಿರದಲ್ಲಿ ಮುತ್ತು ಬೆಳೆದ ಭೇದದಂತೆ,
344. ಚೇತನವಳಿದು ಅಚೇತನವಸ್ತು ರೂಪಾಗಿ ಬಂದಿತ್ತದೇತಕ್ಕೆ ಎಂಬುದು ತಿಳಿದು,
345. ಜಂಗಮ ಸುಳಿದಡೆ ವಸಂತ ಗಾಳಿಯಂತೆ ಸುಳಿವ.
346. ಜಂಗಮಕ್ಕೆ ಇಕ್ಕಿದಲ್ಲದೆ ಒಲ್ಲೆವೆಂಬ ಭಕ್ತರು ಕೇಳಿರೊ.
347. ಜಂಗಮ ಭಕ್ತಿಯ ಮಾಡಿಹೆನೆಂದು ಮಹಾಮನೆಯ ಕಟ್ಟಿದ ಮತ್ತೆ,
348. ಜಂಗಮವೆಂದು ಮಾಡಿ ಪಂಕ್ತಿಯಲ್ಲಿ ವಿಂಗಡಿಸಿ,
349. ಜಗದಲ್ಲಿ ಪರಿವೇಷ್ಟಿಸುವ ದೈವಜಾತಿಗಳ ಪರಿಪ್ರಕಾರವ ನೋಡಿರೆ.
350. ಜಗದಲ್ಲಿ ಸುಳಿವ ಗುರುಗಳ ಉಪದೇಶದ ಬೋಧೆಯ
351. ಜನನ ಮರಣಕ್ಕೊಳಗಹ ಆತ್ಮನ ಪರಿಭವಕ್ಕೆ ಬರ್ಪುದು,
352. ಜಪವೇಕೊ ಅಪ್ರಮಾಣಂಗೆ ?
353. ಜಲ ಅನಲ ಮಣ್ಣು ಕೂಡಿ ಬಲಿದ ಮತ್ತೆ ಜಲ ಅನಲನಿಗುಂಟೆ ?
354. ಜಲಮಣೆಯ ಬೆಗಡನಿಕ್ಕಬಹುದೆ ? ಬಯಲಬಂಧಿಸಬಹುದೆ ?
355. ಜಾಗ್ರದಲ್ಲಿ ಕಾಬುದು ಬ್ರಹ್ಮನಿರವು.
356. ಜಾಲಗಾರನ ಡೋಣಿಯಂತೆ, ಬಳಸುವ ಹುಟ್ಟಿನಂತೆ,
357. ಜಿಹ್ವೆಯ ಲಂಪಟಕ್ಕಾಗಿ ಅನ್ಯರ ಬೋಧಿಸಲೇಕೆ ?
358. ಜೀವವ ಕಡಿದವಂಗಿಲ್ಲದ ಪಾಪ, ಕತ್ತಿಗುಂಟೆ ಎಲೆದೇವಾ ?
359. ಜ್ಞಾತೃಚಕ್ಷುವಿನಿಂದ ಜಗದ ರೂಪ ಕಾಬಲ್ಲಿ,
360. ಜ್ಞಾನಕ್ಕೆ ಲೇಪವಾದವನಿರವು, ತುಪ್ಪವ ನಂಬಿದ ಬತ್ತಿಯಂತೆ,
361. ಜ್ಞಾನದಲ್ಲಿ ಸುಳಿವ ಜಂಗಮಸ್ಥಲದ ಇರವು ಹೇಂಗಿರಬೇಕೆಂದಡೆ:
362. ಜ್ಞಾನಲಿಂಗದ ಆದಿ ಅಂತ್ಯವನರಿವಡೆ,
363. ಜ್ಞಾನವನರಿದೆನೆಂದು ಕಾಯವ ದಂಡಿಸಲೇಕೆ ?
364. ಜ್ಞಾನಾರೂಢನಾದಲ್ಲಿ ಮಾನವರಲ್ಲಿ ಆಶ್ರಯಿಸಲಾಗದು.
365. ಜ್ಞಾನಿ ತಾನಾದಡೆ ಮಾನವರ ಗುಣವೇನಾದಡೂ ಆಗಲಿ.
366. ಜ್ಞಾನಿಯ ಸಂಗ ನೇಕೆಯ ಶಿಶುವಿನಂತಿರಬೇಕು.
367. ಜ್ಯೋತಿಯ ಬೆಳಗಿನಲ್ಲಿ ನೋಡಿ ಜ್ಯೋತಿಯ ಪಟವ ಕಾಬಂತೆ,
368. ಡೊಂಬರ ಡೊಳ್ಳಧ್ವನಿ ಕೇಳಬಂದಿತ್ತು.
369. ತತ್ವಬ್ರಹ್ಮವನರಿವ ಹಿರಿಯರೆಲ್ಲರೂ ಕ್ಷುತ್ತಿನ ಸುಖವ ಮೆಚ್ಚಿ
370. ತತ್ವಬ್ರಹ್ಮವ ನುಡಿವ ಹಿರಿಯರೆಲ್ಲರೂ ಮೃತ್ಯುವಿನ ಬಾಯ ತುತ್ತಾದರು.
371. ತಥ್ಯವುಳ್ಳವಂಗೆ ತತ್ವದ ಮಾತು ನುಡಿದು, ಹೊತ್ತು ಹೋರಲೇಕೆ ?
372. ತನ್ನಂಗವ ತಾ ಬಡಿದು, ಇದಿರಿನಲ್ಲಿ ನೋವ ಕೇಳುವನಂತೆ,
373. ತನ್ನ ತಾನರಿದು ಕಂಡೆಹೆನೆಂದಡೆ, ಆ ಚಿತ್ತ ಬಣ್ಣದ ಬಯಲು.
374. ತನು ನಿರ್ವಾಣವೊ, ಮನ ನಿರ್ವಾಣವೊ, ಭಾವ ನಿರ್ವಾಣವೊ ?
375. ತನುವ ನೆಮ್ಮಿ ಕಾಬ ಮನವಿಲ್ಲ.
376. ತನುವಿಗೆ ಕುರುಹು ಕೊಟ್ಟು, ಮನಕ್ಕೆ ಅರಿವ ಕೊಟ್ಟು,
377. ತನುವಿಂಗೆ ಲಿಂಗ ಬಾಹಾಗ ಕಂಕುಳ ಕೂಸೆ ?
378. ತನುವಿನ ಮೇಲಿಪ್ಪ ಲಿಂಗಕ್ಕೆ, ಅನವರತ ಬಿಡದೆ ನೆನಹಿರಬೇಕೆಂಬರು.
379. ತನುವಿನಾಶೆಯ ಬಿಟ್ಟು ಕಂಡೆಹೆನೆಂದಡೆ, ಗುರುವಿನ ಹಂಗು ಬಿಡಬೇಕು.
380. ತನುವಿನಿಂದ ಕಂಡೆಹೆನೆಂದಡೆ ರೂಪಿನ ಜಡ.
381. ತಮದಲ್ಲಿ ಸ್ಥಾಣುವ ನಟಿಸಿದ ವ್ಯಾಧನಂತೆ ಅಂಜಲೇಕೋ ?
382. ತಮಂಧವೆಂಬ ಕೊಪ್ಪರಿಗೆಯಲ್ಲಿ,
383. ತರಬಾರದ ಠಾವಿನಲ್ಲಿ ಪರುಷರಸವಿದ್ದರೇನೋ ?
384. ತಲೆಯನಿತ್ತವಂಗೆ ನಯನದ ಹಂಗೇಕೆ ?
385. ತಲೆಯ ಹಿಡಿಯಲರಿಯದೆ ನಡುವ ಹಿಡಿದ ಮತ್ತೆ,
386. ತಲೆಯಿಲ್ಲದೆ, ಹಾವು ಕಚ್ಚಿ, ವಿಷ ಹತ್ತುವುದಕ್ಕೆ ಮೊದಲೆ ಜೀವ ಸತ್ತಿತ್ತು.
387. ತಲೆಯಿಲ್ಲದೆ ಕಾಲು ನಡೆಯಬಲ್ಲುದೆ ?
388. ತಾಗಿದ ಮತ್ತೆ ಬಾಗುವರೆಂಬುದನೆಲ್ಲರೂ ಬಲ್ಲರು.
389. ತಾ ನಡೆಯಲರಿದೆ, ಮೊನೆಯ ಮೆಟ್ಟಿ ಬಯ್ವವನಂತೆ,
390. ತಾನರಿಯದಿರ್ದಡೆ, ಅರಿವ ಮುಖ ಬೇಕು,
391. ತಾನಳಿದ ಮತ್ತೆ ತಾನಾದುದ ಕಂಡೆ,
392. ತಾನು ಹೊಳೆಯಲ್ಲಿ ಮುಳುಗಿ ಹೋಗುತ್ತ, ಈಸಬಲ್ಲವರ ಕಂಡೆನೆಂಬಂತೆ,
393. ತಾನೇನೊಂದ ನೆನೆದು ಮಾಡಿ ಆಯಿತ್ತೆಂದಡೆ ತಾನೇನು ಬ್ರಹ್ಮನೆ ?
394. ತಾನೇ ಬಲ್ಲವನೆಂದು ಇಲ್ಲದ ಹುಸಿಯ ಹುಸಿವ,
395. ತಾ ಮಾಡಿದೆನೆಂದಡೆ ತನ್ನ ಕೆಳಗಣದೆ,
396. ತಾವು ಬಲ್ಲವರಾದೆವೆಂದು ಗೆಲ್ಲಸೋಲಕ್ಕೆ ಹೋರುತಿಪ್ಪರು.
397. ತಾವು ಸತ್ಯರೆಂದು ನುಡಿಯದಿಪ್ಪುದೆ ಶೀಲ.
398. ತಿಲದ ಮರೆಯ ತೈಲವ ಅರೆದು ಕಾಬ ತೆರದಂತೆ,
399. ತೃಣ ತ್ರಿಣಯನ ಹೆಡಗೈಯ ಕಟ್ಟಿತ್ತು.
400. ತೃಣವತಿಶುಷ್ಕವಾದ ಪರ್ಣ
401. ತೊಗಲ ಕೈಯಲ್ಲಿ ಶಿಲೆಯ ಲಿಂಗವ ಹಿಡಿದು,
402. ತೊಗಲಚೀಲದಲ್ಲಿ ಪರಶಿವನಿದ್ದಾನೆಂದು
403. ತೊಳೆದು ಕಂಡೆಹೆನೆಂದಡೆ ಅಂಗದವನಲ್ಲ.
404. ತೊಳೆದು ನೋಡಿಹೆನೆಂದಡೆ ಉದಕಕ್ಕೆ ಭೇದಿಸೆ.
405. ತೋಹಿನ ಶಬರನಂತೆ, ಲಾಗಿನ ವ್ಯಾಘ್ರನಂತೆ,
406. ತ್ರಿಕರಣ ಶುದ್ಧವಿಲ್ಲದವನ ಮಾಟ, ನೇಣು ಹರಿದವನಾಟ.
407. ತ್ರಿಭುವನದಗ್ರದಲ್ಲಿ ಮೂವತ್ತಾರು ಲೋಕ.
408. ದಂಡಕ್ಕಂಜಿ, ಜಂಗಮಕ್ಕೆ ಇಕ್ಕುವ
409. ದಯವೆ ಭಕ್ತಿಗೆ ಬೀಜ, ಭಕ್ತಿಯೆ ಮುಕ್ತಿಗೆ ಬೀಜ.
410. ದಳ್ಳುರಿಯಲ್ಲಿಗೆ ಹೋದಡೆ, ಮೆಲ್ಲನೆ ಮುಟ್ಟುವುದೆ ಅಯ್ಯಾ ?
411. ದೀಕ್ಷಾಗುರು ಶಿಕ್ಷಾಗುರು ಮೋಕ್ಷಗುರುವಾದಲ್ಲಿ,
412. ದೀಪದ ಕೊನೆಯ ಮೊನೆಯ ಮೇಲಿದ್ದುದು, ತಮವೋ, ಬೆಳಗೋ ?
413. ದೀರ್ಘಕ್ಕೆ ದೀರ್ಘವನೈದಿಸಿ, ಸಾಗಿಸಿ ಮುರಿವನಂತೆ,
414. ದೇಶ ಮಾತಿನ ಬಿನ್ನಾಣಿಗಳಿಗೆ ಗ್ರಾಸ ಉಂಟಲ್ಲದೆ ನಿಜವಿಲ್ಲ.
415. ದೇವರು ಹುಟ್ಟುವಾಗ ಮಾಯೆ ಕವಳೀಕರಿಸಿ ಬಂ[ದುದೆ]ಂಬರು.
416. ದೇಹದ ಕಲೆಯನರಿವನ್ನಬರ ಇಷ್ಟಲಿಂಗ ಸಂಬಂಧಿಯಲ್ಲ.
417. ದ್ರವ್ಯದ ಸಂಗದಿಂದ ಅರಸಿಕೊಂಬ ಅಪ್ಪು,
418. ದ್ವೇಷವಿಲ್ಲದ ಭಕ್ತ, ಆಶೆಯಿಲ್ಲದ ವಿರಕ್ತ,
419. ಧರೆ ನೀರ ಕುಡಿದಲ್ಲಿ, ಉರಿ ಶಿಲೆ ಮರನ ಸುಡುವಲ್ಲಿ,
420. ಧರೆಯ ಮೇಲಣ ಮರದಲ್ಲಿ, ಹಿರಿದಿಹ ಕೊಂಬಿನ ತುದಿಯಲ್ಲಿ,
421. ಧರೆ ಸಲಿಲ ಅನಲ ಅನಿಲ ಆಕಾಶ
422. ಧಾನ್ಯವ ಹೊಯ್ದಿದ್ದ ಘಟ, ಅಳತೆಗೆ ಬಪ್ಪುದೆ, ಆ ಧಾನ್ಯವಲ್ಲದೆ ?
423. ನಡುನೀರ ಮಧ್ಯದಲ್ಲಿ ಅಗಮ್ಯದ ಜ್ಯೋತಿ ಉರಿವುತ್ತಿದೆ.
424. ನರಸುರ ಚೌರಾಸಿಗಳಿಗೆಲ್ಲಾ ನೀನಿತ್ತಲ್ಲದಿಲ್ಲ ನೋಡಯ್ಯಾ.
425. ನಾಣ್ಯವ ಹೊದ್ದಡೆ ಬೇಲಿಯ ಮೇಲೆ ಸಿಲ್ಕಿಸಿ ಸೀಳಬಹುದೆ ?
426. ನಾ ತಪ್ಪಿ ನುಡಿದಡೆ ಒಪ್ಪವಿಟ್ಟುಕೊಳ್ಳಿರಣ್ಣಾ.
427. ನಾನರಿತು, ನಿನ್ನ ಕುರಿತೆಹೆನೆಂದಡೆ ನಿನಗೆ ಭಿನ್ನವಾದೆ.
428. ನಾನರಿದು ಕಂಡೆಹೆನೆಂದಡೆ ಸ್ವತಂತ್ರಿಯಲ್ಲ.
429. ನಾನರಿದು ಬಲ್ಲೆನೆಂದು ನುಡಿಯಲೇಕೆ ?
430. ನಾನರಿಯದಿರ್ದಡೆ ಜ್ಞಾನಿಗಳ ಸಂಭಾಷಣೆಯನರಸುತ್ತಿದ್ದೇನೆ.
431. ನಾನಾ ಚಿಹ್ನವಿಚ್ಫಿಹ್ನಂಗಳು ತಲೆದೋರದೆ,
432. ನಾನಾ ಯೋನಿಯಲ್ಲಿ ತಿರುಗಿ ಬಂದನಾಗಿ ಗುರುವಲ್ಲ.
433. ನಾನಾ ವರ್ಣವ ನೀರುಂಡು,
434. ನಾನಾ ಸಾರಂಗಳ ಸವಿಯ,
435. ನಾನಾ ಸ್ಥಲಂಗಳ ಮಾತಿನ ಮಾಲೆಯಲ್ಲಿ,
436. ನಾನಾ ಸ್ಥಲಂಗಳ ಹೊಲಬಿನ ಹೊಲನ ವಿಚಾರಿಸುವಲ್ಲಿ,
437. ನಾನು ನೀನೆಂಬ ಉಭಯವ ಭೇದಿಸಿ ಹೋರಲೇಕೆ,
438. ನಾನೆಂಬುದನರಿದಲ್ಲಿಯೆ ಅರಿವನೊಳಕೊಂಡುದು.
439. ನಾನೇಕೆ ಬಂದೆ ಸುಖವ ಬಿಟ್ಟು? ಬಂದುದಕ್ಕೆ ಒಂದೂ ಆದುದಿಲ್ಲ.
440. ನಾ ಬಾಹಾಗ ಎನ್ನ ಗುರು ಮೂರು ರತ್ನವ ಕೊಟ್ಟ.
441. ನಾರಿ ಸುತ್ತನಾರೈಕೆಗೊಂಬವನ ಬೇರಿನ ಬಿಲ್ಲ ನುಂಗಿತ್ತು.
442. ನಾಲ್ಕು ಯುಗವು ಕೂಡಿ ಇಪ್ಪತ್ತೊಂದು ವೇಳೆ ತಿರುಗಿದಡೆ,
443. ನಿನಗೆ ಮಜ್ಜನವ ಮಾಡುವಲ್ಲಿ, ನಾ ಮಲದೇಹಿ, ನೀ ನಿರ್ಮಲದೇಹಿ.
444. ನಿನ್ನ ಇರವು, ನಿನ್ನನರಿವಿನ ಇರವು ಮೃತ್ತಿಕೆಯ ಚಕ್ರದಂತೆ,
445. ನಿನ್ನನರಿತು ಅರಿದೆನೆಂದಡೆ,
446. ನಿನ್ನನರಿವುದಕ್ಕೆ ಹೊನ್ನು ಹೆಣ್ಣು ಮಣ್ಣೆಂಬ
447. ನಿನ್ನಿಂದ ನಾ ಭವಸಾಗರವ ಗೆದ್ದೆಹೆನೆಂದಡೆ,
448. ನಿಮಿತ್ತ ಶುಭಸೂಚನೆಯ ಭಿನ್ನಪವನವಧರಿಸು.
449. ನಿರ್ಘಟದಲ್ಲಿ ಘಟ ಹುಟ್ಟಿ, ಪ್ರಕಟಿಸುವುದ ಕಂಡೆ.
450. ನಿರವಯಲಿಂಗ ಲೀಲೆಗೆ ರೂಪಾಯಿತ್ತೆಂದು ನುಡಿವರು,
451. ನಿರುಪಾಧಿಭಕ್ತಂಗೆ ನಿರಂಜನ ಜಂಗಮ, ನಿರವಯ ಅಭೇದ್ಯ ಲಿಂಗ.
452. ನಿಶ್ಚಟ ಭಾಷೆಯ ನುಡಿದ ಮತ್ತೆ, ರಣದಲ್ಲಿ ವಾಸಿಗೆ ಸಾಯಲೇಬೇಕು.
453. ನಿಷ್ಠೆಯ ಹರಿದು ಭಕ್ತಿಯೆಂಬ ತೂರ್ಯದಲ್ಲಿ ಸಿಲ್ಕಿ ಸಾಯದೆ,
454. ನೀತಿಗೆ ನೀತಿ, ಜಾತಿಗೆ ಜಾತಿ ಭೇದವನರಿದು,
455. ನೀನೊಳ್ಳಿಹನೆಂಬೆನೆ ಮನಧರ್ಮವನರಸಿಹೆ.
456. ನೀರು ಕೂಡಿ[ದ] ಕ್ಷೀರ ಬೆಂದಲ್ಲದೆ ಮತ್ತಾ
457. ನೀರ ನೆಳಲಿನಲ್ಲಿ ಒಂದು ಆರವೆ ಹುಟ್ಟಿತ್ತು:
458. ಅದು ಬೇರಿಲ್ಲದೆ, ಆ ಮರನ ಮೀರುವ ಕೊಂಬಿಲ್ಲದೆ,
459. ನೀರಿನ ಮೇಲಣ ತೆಪ್ಪ ಒಪ್ಪವಾಗಿ ಹೋಹುದು
460. ನೀರು ನೆನೆದುದ ಕಂಡೆ. ಹೆಚ್ಚದ ಕುಂದದ ವಾರುಧಿ,
461. ನೀರು ನೇಣು ಭೂಮಿಯ ತಡಿಯ ಕುಂಭ ಮುಂತಾಗಿ ಬಂದಲ್ಲದೆ,
462. ನೀರು ಪ್ರಳಯವಾದಲ್ಲಿ ತೋಡಲುಂಟೆ ಬಾವಿಯ ?
463. ನೀರೆಂತು ನೆನೆವುದೆಂದು ಬೆಸಗೊಂಡರೆ, ಹೇಳಬಹುದೆ ಅಯ್ಯಾ ?
464. ನೀರೊಳಗಣ ಶಿಲೆಯ ಒಡೆಯರುಗಳೆಲ್ಲರೂ ಕೂಡಿ,
465. ನೂಲೆಳೆಯ ಗಾತ್ರದ ಮರದಲ್ಲಿ, ಬೆಟ್ಟದ ತೋರದ ಕಾಯಿ ಫಲವಾಯಿತ್ತು.
466. ನೆಟ್ಟ ಲಿಂಗವ ಪ್ರತಿಷ್ಠೆಯೆಂಬರು.
467. ನೆಲ ತಳವಾರನಾದಡೆ, ಕಳ್ಳಂಗೆ ಹೊಗಲೆಡೆಯುಂಟೆ ?
468. ನೇಮಕ್ಕೊಳಗಾದ ಬ್ರಹ್ಮ, ತಪಕ್ಕೊಳಗಾದ ವಿಷ್ಣು.
469. ನೇಮವ ಮಾಡುವರೆಲ್ಲರೂ ಬ್ರಹ್ಮಪಾಶಕ್ಕೊಳಗಾದರು.
470. ಪಂಚಭೌತಿಕದಿಂದ ಬಂದ ತನುವಿನಲ್ಲಿ,
471. ಪಂಚಮುಖದ ಗಿರಿಯ ಗಹ್ವರದಲ್ಲಿ,
472. ಪಟ ಬಾಲಸರವು ಕೂಡಿರ್ದಡೇನು ?
473. ಪಯವ ಕೂಡಿದ ನೀರಿನಂತೆ, ಮಧುರವ ಕೂಡಿದ ಅಂಬಸಿಯಂತೆ,
474. ಪರಬ್ರಹ್ಮವ ನುಡಿಯುತ್ತ, ಪರದ್ರವ್ಯವ ಕೈಯಾಂತು ಬೇಡುತ್ತ,
475. ಪರರ ಕಾಡಿ ಬೇಡಿ ಮಾಡೆಹೆನೆಂಬ ಮೋಡಿ ಏತಕ್ಕೆ ?
476. ಪರುಷದ ಪುತ್ಥಳಿಯ ಇರವಿನಂತೆ, ಪೃಥ್ವಿಯ ನುಂಗಿದ ಉದಕದಂತೆ,
477. ಪಾದತೀರ್ಥವ ಕೊಂಡಲ್ಲಿ ಬ್ರಹ್ಮಂಗೆ ಹೊರಗು.
478. ಪಾದೋಕದದಿಂದ ಪದಂ ನಾಸ್ತಿಯಾಗಿರಬೇಕು.
479. ಪಾದೋದಕ ಪ್ರಸಾದೋದಕ ಲಿಂಗೋದಕಗಳಲ್ಲಿ,
480. ಪಾದೋದಕ ಮಂಡೆಗೆ ಮಜ್ಜನ, ಪ್ರಸಾದೋದಕ ಜಿಹ್ವೆಗೆ ಭಾಜನ.
481. ಪಾಪ ಪುಣ್ಯವಿಲ್ಲವೆಂದು ನುಡಿವ ಕಾಕರ ಮಾತ ಕೇಳಲಾಗದು.
482. ಪಾಪ ಪುಣ್ಯವೆಂದು ಹೇಳುವ ಕೂಪರಪ್ಪ ಭಕ್ತರು ಕೇಳಿರಣ್ಣಾ,
483. ಪಿಂಡ ಪಿಂಡಸ್ಥಲ, ಭಾವ ಭಾವಸ್ಥಲ, ಜ್ಞಾನ ಜ್ಞಾನಸ್ಥಲ.
484. ಪಿಂಡ ಪಿಂಡಸ್ಥಲವಾದಲ್ಲಿ ಆತ್ಮನೆರಡುಂಟೆ ?
485. ಪುಷ್ಪಗಂಧದಂತೆ ಪ್ರಾಣಲಿಂಗಭಾವ.
486. ಪೂಜಿಸುವಲ್ಲಿ ಹೂ ನೀರು ಮುಂತಾದ ಷೋಡಶ ಉಪಚರಿಯಕ್ಕೆ ನಿಲ್ಲ.
487. ಪೂಜೆಯ ಮಾಡುವಲ್ಲಿ, ಪುಣ್ಯವನರಿಯದೆ ಮಾಡಬೇಕು.
488. ಪೂಜೆಯಲ್ಲಿ ಮುಕ್ತನೆಂದು ಜ್ಞಾನವ ಮರೆಯಲಿಲ್ಲ.
489. ಪೂಜೆಯಿಂದ ತಾ ಪೂಜ್ಯವಂತನಾದೆಹೆನೆಂದು ಮಾಡುವನ ಇರವು,
490. ಪೂರ್ವತತ್ವ ಬಿಟ್ಟುದು ಭಕ್ತಸ್ಥಲ,
491. ಪೂರ್ವಧಾತುವಿನ ಮೋಹ, ಉತ್ತರಧಾತುವಿನ ನಿರ್ಮೋಹ,
492. ಪೂರ್ವವನಳಿದು ಪುನರ್ಜಾತನ ಮಾಡಿದೆವೆಂಬಿರಿ.
493. ಪೃಥ್ವಿ ಅಪ್ಪು, ಅಗ್ನಿಯ ಘಟ.
494. ಪೃಥ್ವಿ ಅಪ್ಪು ತೇಜ ವಾಯು ಆಕಾಶಂಗಳು
495. ಪೃಥ್ವಿ ಅಪ್ಪು ತೇಜ ವಾಯು ಆಕಾಶದಿಂದ
496. ಪೃಥ್ವಿ ಅಪ್ಪು ತೇಜ ವಾಯು ಆಕಾಶವೆಂಬ
497. ಪೃಥ್ವಿ ಅಪ್ಪುವಿನ ಸಂಗದಲ್ಲಿ, ಅನಲ ಅನಿಲವೆಂಬ ಪುತ್ಥಳಿ ಹುಟ್ಟಿತ್ತು.
498. ಪೃಥ್ವಿಗೆ ಹಲವು ತೆರ, ಅಪ್ಪುವಿಗೆ ನಾನಾ ಸಾರ.
499. ಪೃಥ್ವಿಯ ಅಂಗ ಭಕ್ತನಾದಲ್ಲಿ,
500. ಪೃಥ್ವಿಯಂಗ ಭಕ್ತನಲ್ಲ, ಅಪ್ಪುವಿನಂಗ ಮಹೇಶ್ವರನಲ್ಲ,
501. ಪೃಥ್ವಿಯ ಗುಣವ ಅಪ್ಪು ನುಂಗಿತ್ತಾಗಿ, ಪೃಥ್ವಿಯ ಗುಣವಿಲ್ಲ.
502. ಪೃಥ್ವಿಯ ಪೃಥ್ವಿ ಎಲ್ಲಿಪ್ಪುದು ?
503. ಪೃಥ್ವಿಯಿಂದ ಅಪ್ಪು, ಅಪ್ಪುವಿನಿಂದ ಪೃಥ್ವಿ.
504. ಪೃಥ್ವಿಯೊಳಗಿದ್ದು ಸಾಯದಿರಬೇಕು,
505. ಪೃಥ್ವಿಶೂನ್ಯ ಅಪ್ಪುಶೂನ್ಯ ತೇಜಶೂನ್ಯ ವಾಯುಶೂನ್ಯ ಆಕಾಶಶೂನ್ಯ.
506. ಪ್ರಭುದೇವರು ಬಂದ ಬರವಿನ ವೃದ್ಧಿ ಅವಧಿಯಿಲ್ಲ.
507. ಪ್ರಮಾಣಿಸಿ ಅವಧರಿಸಿ ಮಾಡುವಂಗೆ,
508. ಪ್ರಾಣಲಿಂಗಸಂಬಂಧಿಗಳೆಂಬ ಭಾವದಭ್ರಮೆಯಿಂದ
509. ಪ್ರಾಣಲಿಂಗಿಗಳೆಂದು ನುಡಿವ ನಾಚಿಕೆಯಿಲ್ಲದ
510. ಪ್ರಾಣಲಿಂಗಿಗಳೆಂದು ನುಡಿವುತಿಪ್ಪ ಅಣ್ಣಗಳು ನೀವು ಕೇಳಿರೆ.
511. ಪ್ರಾಣಲಿಂಗಿಯ ಯೋಗಸಂಬಂಧವೆಂತುಟೆಂದಡೆ:
512. ಫಲದ ಸವಿಯ ವೃಕ್ಷವರಿದಡೆ, ಕೊಡುವುದೆ ಇದಿರಿಂಗೆ ?
513. ಬಂದ ಪದಾರ್ಥವ ಸವಿದು ಚಪ್ಪಿರಿದು,
514. ಬಂದ ಬಟ್ಟೆಯಂ ಮರೆದು, ಪೂರ್ವಾಶ್ರಯವನಳಿದು,
515. ಬಂದ ಲಂದಣಗಿತ್ತಿಯರೆಲ್ಲರೂ ಓಗರವನುಂಡು ಹೋದರಲ್ಲದೆ,
516. ಬ ಎಂಬಲ್ಲಿ ಬಳಿಸಂದೆನು.
517. ಬಡವಂಗೆ ನಿಧಾನ ಕಡವರ ಕೈಸಾರಿತ್ತಯ್ಯಾ.
518. ಬಧಿರನೊಂದಾಗಿ ಮದವಳಿಗ ಕೂಡಿದ.
519. ಬಯಲು ಬತ್ತಲೆಯಾದಡೆ ಹೊದಿಸುವರಿನ್ನಾರೊ ?
520. ಬಯಲೊಳಗಣ ಬಯಲಿನಲ್ಲಿ ಒಂದು ಕಲ್ಪತರು ಹುಟ್ಟಿ,
521. ಬಲ್ಲವನಾದಡೆ ಕಲ್ಲಿಯಡಗಿದಂತಿರಬೇಕು.
522. ಬಲ್ಲವರಾದಡೆ ಗೆಲ್ಲಸೋಲಕ್ಕೆ ಹೋರಲೇಕಯ್ಯಾ ?
523. ಬಲ್ಲವರೆಂದು ಎಲ್ಲಕ್ಕೂ ಹೇಳಿ,
524. ಬಲುಗೈಯನೊಡನೆ ಹಗೆವಡೆದು ಕೊಲೆಗಂಜಲೇಕೆ ?
525. ಬಲ್ಲೆಬಲ್ಲೆನೆಂದು ಎಲ್ಲರೊಳಗೆ ಗೆಲ್ಲಸೋಲವೇತಕ್ಕೆ?
526. ಬಸವಣ್ಣ ಮೊದಲಾದ ಮಹಾಭಕ್ತರೆಲ್ಲರೂ ಕಂಡರಯ್ಯಾ.
527. ಬಳ್ಳಿ ಮರನ ಸುತ್ತಿ, ಅದು ಸಾಲದೆ ಮತ್ತೊಂದಕ್ಕೆ ಅಲ್ಲಾಡುವಂತೆ,
528. ಬಾಯ ಮುಚ್ಚಿ, ಹೊಟ್ಟೆ ತುಂಬ ಉಂಬವರನಾರನೂ ಕಾಣೆ.
529. ಬಾಲಲೀಲೆಯಲ್ಲಿ ಕಟ್ಟಿದ ಲಿಂಗವನೇನೆಂದರಿಯದಿರ್ದಲ್ಲಿ,
530. ಬಾವಿಯ ಓರೆಯ ಮೆಟ್ಟಿ ಜಾರಿಬಿದ್ದವರಾರೊ ?
531. ಬಿಂದು ನಾದವ ನುಂಗಿತ್ತೆಂಬರು, ನಾದ ಬಿಂದುವ ನುಂಗಿತ್ತೆಂಬರು.
532. ಬಿದ್ದ ಬೀಜ, ಇಕ್ಕಿದ ಸಸಿ ಮುಂತಾದವಕ್ಕೆ
533. ಬೀಜದ ಮೊಳೆಯ ಮುರಿದ ಮತ್ತೆ, ಅದು ಸಾಗಬಲ್ಲುದೆ?
534. ಬೀಜದಲ್ಲಿ ಅಂಕುರವಿದ್ದಂತೆ ಏಕಡಗಿದೆ ?
535. ಬೀಜದೊಳಗಣ ವೃಕ್ಷ ಉಲಿಯಬಲ್ಲುದೆ ?
536. ಬೀಜ ಹುಟ್ಟುವಲ್ಲಿ ಒಂದೆ ಗುಣ.
537. ಬೆಂಕಿಗೆ ಶೈತ್ಯ ಕೊಂಡು, ಉದಕಕ್ಕೆ ಉರಿ ಹುಟ್ಟಿ
538. ಬೆಟ್ಟದ ಮೇಲಣ ಗುಂಡು, ಬೆಟ್ಟವ ನುಂಗಿತ್ತು.
539. ಬೆಣ್ಣೆಯ ಮಡಕೆಯಲ್ಲಿ ಕಿಚ್ಚು ತುಂಬಿ, ಉರಿವುತ್ತಿದ್ದುದ ಕಂಡೆ.
540. ಬೆಲ್ಲದ ಗೋಟು ಕುಬ್ಜವಾದಡೇನು,
541. ಬೆಲ್ಲದ ದಂಟು ಅದೆಲ್ಲಿದ್ದಡೂ,
542. ಬೆಳಗಿಂಗೆ ಬೆಳಗಿನಿತ್ತಡೆ ನೋಡಬಲ್ಲವರಾರು ?
543. ಬೆಳಗಿನಲ್ಲಿದ್ದು ಬೆಳಗ ಕಾಬುದು ತಾನೊ, ಇದಿರೊ ?
544. ಬೇಟದಲ್ಲಿ ಸುಖಿಯಾದ ಮತ್ತೆ ಕೂಟದ ಆಟವೇಕೆ ?
545. ಬೇಡ ಬಿಲ್ಲ ಹಿಡಿದು, ರೂಢಿಯಲ್ಲಿ ತಿರುಗಾಡುತ್ತಿರಲಾಗಿ,
546. ಬೇರು ಒಣಗಿದಲ್ಲಿ ಅಂಕುರವುಂಟೆ ?
547. ಬೋಧೆನೆಯ ಬೋಧಿಸಿ ಉಂಬವರೆಲ್ಲರೂ ಸಾಧಾರಣಕ್ಕೆ ಈಡಾದರು.
548. ಬ್ರಹ್ಮನ ಉತ್ಪತ್ಯವ ಕಳೆದಲ್ಲದೆ ಲಿಂಗಕ್ಕೆ ಮಜ್ಜನವೆರೆಯಲಾಗದು.
549. ಬ್ರಹ್ಮನ ಕಲ್ಪಿತವ ಕಳೆಯನಾಗಿ, ಗುರು ಲಿಂಗವ ಕೊಟ್ಟುದು ಹುಸಿ.
550. ಬ್ರಹ್ಮನ ಡಾಗು ಬೆನ್ನಮೇಲೆ, ವಿಷ್ಣುವಿನ ಡಾಗು ಕೈಯ ಮೇಲೆ.
551. ಭಂಡವ ತುಂಬಿದ ಹಸುಬೆ, ಕೊಂಡವನ ನುಂಗಿತ್ತು.
552. ಭಕ್ತಂಗೆ ಪೃಥ್ವಿಯಂಗವಾಗಿ, ಮಾಹೇಶ್ವರಂಗೆ ಅಪ್ಪುವಂಗವಾಗಿ,
553. ಭಕ್ತಂಗೆ ಬೀಜರೂಪು, ಮಾಹೇಶ್ವರಂಗೆ ಅಂಕುರರೂಪು,
554. ಭಕ್ತಂಗೆ ಭಕ್ತಿಯ ಲಕ್ಷಣವೆಂತೆಂದಡೆ:
555. ಭಕ್ತಂಗೆ ಭಕ್ತಸ್ಥಲ, ಮಹೇಶ್ವರಂಗೆ ಮಾಹೇಶ್ವರಸ್ಥಲ,
556. ಭಕ್ತಂಗೆ ವಿಶ್ವಾಸ ಗುರುವೆಂದು ಪ್ರಮಾಣಿಸಿದಲ್ಲಿ,
557. ಭಕ್ತಂಗೆ ಹೆಣ್ಣುಬೇಡ, ಹೊನ್ನುಬೇಡ, ಮಣ್ಣುಬೇಡವೆಂದು ಹೇಳಿ,
558. ಭಕ್ತದೇವನಿಗೆ ನೀರು ತಾವರೆಯ ತೆರನಂತೆ,
559. ಭಕ್ತನ ಅಂಗಸ್ಥಲ, ಮಾಹೇಶ್ವರನ ಭಾವಸ್ಥಲ,
560. ಭಕ್ತನಂಗ ಕಾಮ, ಮಹೇಶ್ವರನಂಗ ಲೋಭ,
561. ಭಕ್ತನ ತ್ರಿವಿಧ ಲಿಂಗಭೇದ,
562. ಭಕ್ತನ ಭಕ್ತ, ಮಹೇಶ್ವರನ ಮಾಹೇಶ, ಪ್ರಸಾದಿಯ ಪ್ರಸಾದಿ,
563. ಭಕ್ತನ ಭಕ್ತಸ್ಥಲದ ಮಹೇಶ್ವರನ ಭಾವ, ಧರೆ ಪಂಕಜಲದಂತೆ.
564. ಭಕ್ತನಾದ ಮತ್ತೆ ಬಂಧಗಳ ಬಿಡಬೇಕು.
565. ಭಕ್ತನಾದಲ್ಲಿ ಧರಿತ್ರಿಯಂತಿರಬೇಕು.
566. ಭಕ್ತನಾದಲ್ಲಿ ಬ್ರಹ್ಮನ ಒಡಲೊಡೆಯಬೇಕು.
567. ಭಕ್ತ ಮಾಹೇಶ್ವರ ಪ್ರಸಾದಿ ಇಂತೀ ತ್ರಿವಿಧವನರಿತು,
568. ಭಕ್ತ ಮಾಹೇಶ್ವರ ಪ್ರಸಾದಿ ಈ ಮೂರು ಭಕ್ತನಂಗ.
569. ಭಕ್ತ ಮಾಹೇಶ್ವರಸ್ಥಲ ಏಕವಾದಲ್ಲಿ,
570. ಭಕ್ತ ತಾ ಮಾಡುವ ಕಾಯಕ, ತನಗೆಂದಡೆ ಗುರುವಿಂಗೆ ದೂರ,
571. ಭಕ್ತರ ಪಾವನವ ಮಾಡಿಹೆನೆಂದು ಮೊತ್ತವ ಕೂಡಿ,
572. ಭಕ್ತರು ಭವಪಾಶದಲ್ಲಿದ್ದಹರೆಂದು
573. ಭಕ್ತರೆಂಬವರೆಲ್ಲರೂ ಲೆಕ್ಕಕ್ಕೆ ಹಾಯ್ದು,
574. ಭಕ್ತಿ ಜ್ಞಾನ ಕ್ರೀ ಮಾಡುವ ಮಾಟಂಗಳಲ್ಲಿ,
575. ಭಕ್ತಿ ಮಂದಿರದಲ್ಲಿ ಪೂಜಿಸಿಕೊಂಬ ಜಂಗಮವ ನೋಡಾ,
576. ಭಕ್ತಿಯಂ ಮಾಡಿ ವಸ್ತುವಂ ಕಾಣಬೇಕೆಂಬರು ಕರ್ಮಕಾಂಡಿಗಳು.
577. ಭಕ್ತಿಯಿಂದ ಮಾಡುವುದೆಲ್ಲವು ಬ್ರಹ್ಮನ ಒಡಲು.
578. ಭಕ್ತಿಯುಳ್ಳನ್ನಕ್ಕ ಇಷ್ಟಲಿಂಗದ ಹಂಗು ಬೇಕು.
579. ಭಕ್ತಿಯುಳ್ಳವಂಗೆ ನಿಷ್ಠುರದ ಮಾತೇಕೆಂಬರು
580. ಭಕ್ತಿಯೆಂಬ ಪಾಶವ ಹೊತ್ತು
581. ಭಕ್ತಿಯೊಳಗಾದ ಕ್ರೀ, ಕ್ರೀಯೊಳಗಾದ ಆಚಾರ,
582. ಭಕ್ತಿಸೂತ್ರ ಬಸವಣ್ಣಂಗೆ, ಭಾವಸೂತ್ರ ಚೆನ್ನಬಸವಣ್ಣಂಗೆ,
583. ಭಕ್ತಿಸ್ಥಲ ಅಳವಟ್ಟವಂಗೆ ಮಾಹೇಶ್ವರಸ್ಥಲವಿಲ್ಲ.
584. ಭಕ್ತಿಸ್ಥಲ ಬ್ರಹ್ಮನಾಶನ, ಮಾಹೇಶ್ವರಸ್ಥಲ ವಿಷ್ಣುನಾಶನ,
585. ಭಕ್ತಿಸ್ಥಲ ಮಾಹೇಶ್ವರನ ನಿರ್ವೀಜ.
586. ಭಕ್ತಿಸ್ಥಲವಳವಟ್ಟಲ್ಲಿ, ಮಾಟಕೂಟವೆಂಬ ಕೋಟಲೆಯೇತಕ್ಕೆ ?
587. ಭಕ್ತಿಸ್ಥಲವಾರು, ಮಹೇಶ್ವರಸ್ಥಲವಾರು, ಪ್ರಸಾದಿಸ್ಥಲವಾರು,
588. ಭಗದಲೊಂದು ಬಕ ಹುಟ್ಟಿ,
589. ಭವಘೋರಕ್ಕಾರದೆ ಭವದಾಳಿಯ ತೊಡೆದೆನಯ್ಯಾ.
590. ಭವಾರಣ್ಯದಲ್ಲಿ ಒಂದು ವನಚರ ಹುಟ್ಟಿತ್ತು.
591. ಭಾವ ತ್ರಿವಿಧ, ನಿರ್ಭಾವ ತ್ರಿವಿಧ ದಂಪತಿ ಸಂಬಂಧವಾಗಿ,
592. ಭಾಳಾಂಬಕ ಬಲೆಗೆ ಸಿಲ್ಕಿದ, ಲೀಲಾಂಗ ಕಾಲಕ್ಕೊಳಗಾದ.
593. ಭಿತ್ತಿಯ ಮೇಲಣ ಚಿತ್ರದ ಬೊಂಬೆಯ ಕೈಯಲ್ಲಿ,
594. ಭೂತಹಿತವುಳ್ಳನ್ನಕ್ಕ ಇಷ್ಟಲಿಂಗಪೂಜೆ.
595. ಭೂಮಿಯ ಮರೆಯ ಹೇಮ, ನಾನಾ ರತ್ನಮೂಲಿಕ ದ್ರವ್ಯಂಗಳಂತೆ,
596. ಭೂಮಿಯಲ್ಲಿ ಪೂಜಿಸಿಕೊಂಬ ಅರುಹಿರಿಯರೆಲ್ಲರೂ
597. ಭೂಮಿಯ ಹಿಡಿದು ಉಳುತ್ತಿದ್ದೇನಯ್ಯಾ, ಕಡೆ ನಡು ಮೊದಲಿಲ್ಲದೆ.
598. ಭೃತ್ಯನಾದಲ್ಲಿ ಕರ್ತೃವಿನ ಕೈಯ ಊಳಿಗವ ಕೊಂಬ
599. ಭೃತ್ಯರೂಪೊಂದು ಭಕ್ತಿಸ್ಥಲ, ಕರ್ತೃರೂಪೊಂದು ವಸ್ತು.
600. ಭೇರಿಯು ಈರಹವಾದಲ್ಲಿ ಅದಿರಲ್ಲದೆ ಸುನಾದವಿಲ್ಲ.
601. ಭೇರಿಯೊಳಗಣ ನಾದವ ಭೇದಿಸಬಲ್ಲಡೆ,
602. ಮಂಜಿನ ಧರೆಯಲ್ಲಿ ಬಿಸಿಲ ಬೀಜ ಬಿದ್ದು,
603. ಮಂಜಿನ ಮಡಿಕೆಯ ನೀರಿನಂತೆ,
604. ಮಂಜಿನ ರಂಜನೆಯ ನೀರಿಗೆ ತಟಾಕ ತುಂಬಿದುದುಂಟೆ ?
605. ಮಂಡೆ ಮಾಸಿದಡೆ ಮಜ್ಜನ ಮಾಡಿದಲ್ಲದೆ, ಹಿಂಗದು ವ್ಯಾಪಾರ,
606. ಮಂತ್ರಸಂಸ್ಕಾರವಾದುದೆ ಲಿಂಗ, ಭಿನ್ನವಾದಡೆ ಲಿಂಗವಲ್ಲ.
607. ಮಗು ಸತ್ತು ಕೊರಳು ಕುಗ್ಗದು, ಅಂಗುಳಾರದು, ಬಾಯ ಬರೆ ಹಿಂಗದು.
608. ಮಜ್ಜನೆಕ್ಕೆರೆವ ಮಹಿಮರೆಲ್ಲರೂ ಭೋಗಕ್ಕೊಳಗಾದರು.
609. ಮಡಕೆ ಕಾವುದಕ್ಕೆ ಮುನ್ನವೆ ಜಲ ಕಾದು ಉಕ್ಕಿತ್ತು.
610. ಮಣ್ಣ ಬೆಕ್ಕು, ನನ್ನಿಯ ಮೂಷಕನ ಮುಟ್ಟಿದುದುಂಟೆ ?
611. ಮಣ್ಣಿನ ಗುಣವನರಿದು ಕಳೆದಡೆ, ಗುರು[ಸಿ]ದ್ಧಾತ್ಮಿಯೆಂಬೆ.
612. ಮಣ್ಣು ಕೊಂಡ ನೀರಿನಂತೆ, ಬಣ್ಣವನೊಳಕೊಂಡ ಕಪ್ಪಡದಂತೆ,
613. ಮಣ್ಣು ದೇಹ, ಹೊನ್ನು ಪ್ರಾಣ, ಹೆಣ್ಣು ಸಕಲ ಪ್ರಪಂಚು.
614. ಮಣ್ಣು ನೀರಿನಂತೆ ಆದಾಗವೆ ಭಕ್ತನ ಭಕ್ತಸ್ಥಲ.
615. ಮತ್ಸ್ಯದ ಮನೆಯ ಕೀಟಕನಂತೆ,
616. ಮದವಳಿಗ ಮದವಳಿಗಿತ್ತಿಯ ಮುಟ್ಟದೆ,
617. ಮದಸೊಕ್ಕಿದ ಗಜ, ಅಜಕ್ಕಂಜಿ, ಅಡಿಯಿಡಲಮ್ಮದುದ ಕಂಡೆ.
618. ಮಧುರದ ಗುಣ ಬದರಿಯಿಂದಳಿಯಿತ್ತು,
619. ಮಧುರವ ಕೂಡಿದ ಜಲವ ತೆಗೆದು
620. ಮಧುರವ ಬಲ್ಲರಲ್ಲದೆ ಮಧುರ ರಸವ ಬಲ್ಲಡೆ, ಬಲ್ಲರೆಂಬೆ.
621. ಮನಸ್ಸು ಏತರಿಂದ ಅರಿವುದು ಲಿಂಗವನು ?
622. ಮನೆಯ ಕೋಡಗ ಊರ ಮಂತವ ನುಂಗಿತ್ತು.
623. ಮರ್ತ್ಯಕ್ಕೆ ಸಂಗನಬಸವಣ್ಣ ಬಾಹಲ್ಲಿ, ಮೂರು ಮಹಾರತ್ನವ ಕಂಡು,
624. ಮಹಾಜಗವು ಪ್ರಳಯವಹಲ್ಲಿ, ಮಣ್ಣುಮೊರಡಿ ಕದಡಿದುದಿಲ್ಲ.
625. ಮಹಾಬಯಲ ಕಡಿದು ಎರಡು ಮಾಡಿಹೆನೆಂದಡೆ
626. ಮಹಾಂಧಕಾರದಲ್ಲಿ ಸಂದಿಲ್ಲದೆ,
627. ಮಹಾಭಕ್ತರು ಮಾಡುವ ಅಭ್ಯಾಸ, ಕ್ರೀ ಲೇಸಿನ ಭಕ್ತಿಯ ಕೇಳಿರಣ್ಣಾ.
628. ಮಹಾಮಲೆಯಲ್ಲಿ ಕೊಲುವ ವ್ಯಾಘ್ರನ ನಾಲಗೆಯ ತುದಿಯಲ್ಲಿ,
629. ಮಹಾಮುಗಿಲಿನ ಮರೆಯ ವರುಣನ ಕಿರಣದಂತೆ,
630. ಮಹಾರಾಣುವೆಯ ಬಿಟ್ಟು ಬಂದು,
631. ಮಳಲ ಹಿಳಿದು ದ್ರವವ ಕಾಣಬಲ್ಲಡೆ, ಇಷ್ಟಲಿಂಗಸಂಬಂಧಿ.
632. ಮಾಂಸಪಿಂಡವ ಕಳೆದು ಮಂತ್ರಪಿಂಡವ ಮಾಡಿದೆವೆಂದು
633. ಮಾಟಕೂಟವೆಂಬ ಹೊಲದಲ್ಲಿ, ಪಾಪರುಣ್ಯವೆಂಬ ಬೀಜವ ಬಿತ್ತೆ,
634. ಮಾಟಕೂಟವೆಂಬುದು ಮೂರರ ಒದಗಿನಾಟ.
635. ಮಾಡಿ ಮರುಗುವ, ನೀಡಿ ನಿಜವಿಲ್ಲದೆ ಇಹ,
636. ಮಾತನಳಿವ ಮಾತು ಬಂದಡೆ, ಹೋತಿನಂತೆ ಹೋರಲೇಕೆ ?
637. ಮಾತನಾಡುವ ಪಂಜರದ ವಿಂಹಗನ ಕೊಂದು, ಕೋಡಗ ನುಂಗಿತ್ತು.
638. ಮಾತ ಹೇಳುವ ಹಿರಿಯರೆಲ್ಲರೂ ನೀತಿಗೊಡಲಾದರು.
639. ಮಾತಿಗೆ ಮಾತನಾಡಿಹೆನೆಂದಡೆ ಪಥಕ್ಕೆ ಕಡೆ ಮೊದಲಿಲ್ಲ.
640. ಮಾತಿಗೆ ಮಾತು ಕೊಟ್ಟು, ನೀತಿ ನಿರ್ಣಯವನರಿಯದೆ,
641. ಮಾತಿನಲ್ಲಿ ಗೆಲ್ಲಸೋಲದಲ್ಲಿ ಅಜಾತನನರಿಯಬಾರದು.
642. ಮಾತಿನ ಮಾಲೆ ಎಷ್ಟಾದಡೆಯೂ ಉಂಟು.
643. ಮಾತಿನ ಮಾಲೆಗೆ ಹೋರಲೇಕೊ, ಆತನನರಿದಿರ್ದವಂಗೆ ?
644. ಮಾತಿನಲ್ಲಿ ನಿರ್ವಾಣ, ಆತ್ಮನಲ್ಲಿ ಘಾತಕ, ಕೂಸು ಹೇತು ಕಲಿಸುವಂತೆ,
645. ಮಾತು ಮಾತಿನಂತೆ, ಮನವು ಮುನ್ನಿನಂತೆ,
646. ಮಾತು ಮಾತಿನೊಳಗೇಕೆ ಆಜಾತನ ಸಂವಾದ ?
647. ಮಾಯೆ ತನ್ಮಯವೆಂಬ ಭವಜನ್ಮದಲ್ಲಿ ಬಂದು,
648. ಮುಂದರಿದು ಕಂಡೆಹೆನೆಂಬಾಗ, ತನು ಶಿಲೆಯ ನೆಲೆಮನೆಯೆ ?
649. ಮುಕುರಕ್ಕೆ ತಮಂಧವೆಂದು ಒರಸಿದವರುಂಟೆ ?
650. ಮುಗಿಲ ತೆರೆಯ ಮರೆಯಲ್ಲಿ ಉರಿವ ಬೆಂಕಿಯ ಹೊಗೆಯ ಹಿಡಿದಲ್ಲಿ,
651. ಮುಚ್ಚಿ ಕಾಬುದು ಸ್ವಪ್ನದ ಇರವು, ತೆರೆದು ಕಾಬುದು ಜಾಗ್ರದ ಇರವು.
652. ಮುತ್ತೊಡೆದ ಚಿಪ್ಪಿನಲ್ಲಿ ನಿವಾಳಿಗಳ ಮಾಡಿ,
653. ಮುನ್ನ ಸತ್ತವರ ಕೇಳಿ, ಈಗ ಸತ್ತವರ ಕಂಡು,
654. ಮೂಕೊರೆಯನ ಕೈಯಲ್ಲಿ ವಾಸನೆಯ ಕುಸುಮವ ಕೊಟ್ಟಡೆ,
655. ಮೂಗೇಣಗಲದ ಬಾವಿಗೆ, ಆರು ಗೇಣಗಲದ ಗಾತ್ರದ ಕುಂಭವ ಬಿಟ್ಟು,
656. ಮೂರು ತಟ್ಟೆಯ ನಡುವೆ, ಒಂದು ಕಂಬವ ನಟ್ಟು,
657. ಮೂರುಸ್ಥಲದಲ್ಲಿ ಎಯ್ದಿಹೆನೆಂದಡೆ,
658. ಮೂರು ಸ್ಥಲದಲ್ಲಿ ವೇಧಿಸಿ, ಆರು ಸ್ಥಲದಲ್ಲಿ ಕೂಡಿ,
659. ಮೂಲದ್ವಾರದ ಮೂಲೆಯಲ್ಲಿ ಏಳುಮಂದಿ ಕಳ್ಳರಡಗಿ,
660. ಮೃತ್ಪಿಂಡದ ಹದನ ಚಕ್ರಿಯ ಚಿತ್ತದ ಕರದಂತೆ,
661. ಯುಗ ಹದಿನೆಂಟು ಸಹಸ್ರ ಕೂಡೆ, ಬ್ರಹ್ಮಂಗೆ ಪರಮಾಯು.
662. ಯೋನಿಯಲ್ಲಿ ಹುಟ್ಟಿದ ಸಕಲಜೀವಂಗಳೆಲ್ಲ,
663. ರಣಕ್ಕೆ ಅಲಗೇರಿದಲ್ಲಿ ಹಲುಬಿದಡೆ ಬಿಡುವರೆ ?
664. ರಸ ಆತ್ಮನಂಗ, ಗಂಧ ವಾಯುವಿನಂಗ, ರೂಪು ಭಾವದಂಗ,
665. ರಸರುಚಿಸುವಲ್ಲಿ, ಗಂಧ ವಾಸಿಸುವಲ್ಲಿ,
666. ರಾಜರಲ್ಲಿ ಹೊಕ್ಕ ಮತ್ತೆ, ಅವರ ಆಗುಚೇಗೆಯ ಹೇಳಬೇಕು.
667. ರಿಣಾತೂರ್ಯ, ಮುಕ್ತ್ಯಾತೂರ್ಯ, ಸ್ವೇಚ್ಫಾತೂರ್ಯ.
668. ರುದ್ರತತ್ವ ಲಿಂಗಮೂರ್ತಿಯಾಗಿ, ಈಶ್ವರತತ್ವ ಶರಣಮೂರ್ತಿಯಾಗಿ,
669. ರುದ್ರದೈವವೆಂದಡೆ ಅರ್ಧನಾರಿಗೆ ಸಿಕ್ಕಿದ.
670. ರುದ್ರನ ದೇವೆರೆಂದು ಆರಾಧಿಸಿ,
671. ರೂಪಗೊಂಡ ಲಿಂಗವ ನಿರೂಪಿನಿಂದರಿವಾಗ,
672. ರೂಪಿನಲ್ಲಿ ಪೂಜಿಸಿಕೊಂಬ ಲಿಂಗ, ಶಿಲೆಯ ಹಂಗು ಬಿಡದಾಗಿ,
673. ಲಕ್ಷದ ಮೇಲೆ ತೊಂಬತ್ತಾರುಸಾವಿರ ಜಂಗಮಕ್ಕೆ
674. ಲಿಂಗಕ್ಕೆ ಮಜ್ಜನವ ಮಾಡುವಲ್ಲಿ ಮಂಡೆಯ ಕುರುಹ ಕಾಣೆ.
675. ಲಿಂಗಕ್ಕೊಂದು, ತನಗೊಂದೆಂಬಾಗ ಆ ಅಂಗ, ಲಿಂಗವಿರೋಧಿಯೆ ?
676. ಲಿಂಗ ಪ್ರಾಣ, ಪ್ರಾಣ ಲಿಂಗವಾದ ನಿರಂಗನ ಇರವು ಹೇಗೆಂದಡೆ:
677. ಲಿಂಗ ಬಿದ್ದರೆ ಸಮಾಧಿಯ ಕೊಂಡೆನೆಂಬಿರಿ.
678. ಲಿಂಗಬಾಹ್ಯಂಗೆ ಲಿಂಗಬಾಹ್ಯನಾಗಬೇಕಲ್ಲದೆ,
679. ಲಿಂಗ ಮೂರು, ಸ್ಥಲವಾರೆಂಬುದು ತಮ್ಮ ಸಂದೇಹದ ಗುಣ.
680. ಲಿಂಗವ ಕೈಯಲ್ಲಿ ಹಿಡಿದು, ಭಕ್ತರಂಗಣವ ಕಾಯಲೇತಕ್ಕೋ ?
681. ಲಿಂಗವನರಿದನಾಗಿ ಗುರುವೆಂಬುದ ಬಲ್ಲ.
682. ಲಿಂಗವಿದ್ದು ಇದಿರಿಂಗೆ ಕೊಟ್ಟ ಕಾರಣ ಗುರುವಾದ.
683. ಲಿಂಗಸ್ಥಲ ಭಾವಸ್ವರೂಪವಾದಲ್ಲಿ,
684. ಲಿಂಗಸ್ವರೂಪದಲ್ಲಿ ನಿಜವಸ್ತುವಿನ ಕಳೆಯದೆ, ಮತ್ತಿಲ್ಲದುದ ಕಂಡೆ.
685. ಲಿಂಗಾಂಗಿಯೆಂದು ಜಗದಲ್ಲಿ ಸುಳಿವ
686. ಲಿಂಗಾಲಯದಲ್ಲಿ ಸತ್ತಿತ್ತೆಂದು,
687. ಲೀಲಾಭಾವಿಯಾಗಿ ಯಾಕೆ ಬಂದೆನೆಂಬುದನರಿದು,
688. ಲೀಲೆಯರತು ಆಡುವರೆಲ್ಲರು,
689. ಲೆಕ್ಕದಲ್ಲಿ ಲೇಪಿತವಾದವರಿಗೇಕೆ ಅಜಾತನ ಸುದ್ದಿ?
690. ಲೇಸಾಯಿತ್ತಯ್ಯಾ ಎನ್ನ ಕಾಡುವುದು.
691. ವರ್ತನ ಶುದ್ಧವಾದಲ್ಲಿ ಭಕ್ತಸ್ಥಲವಾಯಿತ್ತು.
692. ವರ್ಮವನೆತ್ತಿ ನುಡಿವಲ್ಲಿ ವರ್ಮಿಗನಲ್ಲದೆ ಕರ್ಮಕ್ಕೊಳಗಲ್ಲ.
693. ವಸ್ತುವ ಕುರಿತು ಇಷ್ಟವ ನೋಡಬೇಕಲ್ಲದೆ,
694. ವಸ್ತುವ ಮುಟ್ಟಿ ಇಹಪರದಲ್ಲಿ ಸುಖಿಯಾದೆನೆಂಬನ್ನಬರ,
695. ವಸ್ತುವಿಪ್ಪ ಭೇದವೆಂತೆಂದಡೆ:
696. ವಾದ್ಯವೊಂದರಲ್ಲಿ ಬಹುಸಂಚುಗಳ ಮುಟ್ಟಿ
697. ವಾಯುವ ಹಿಡಿದು, ದಂಡವ ಕೊಂಡು,
698. ವಾಯುವಿನ ಬೆಂಬಳಿಯ ಗಂಧ, ಅದಾವ ಠಾವಿನಲ್ಲಿ ನಿಲುವುದು ?
699. ವಾರಿಧಿಯ ಹೊಯ್ದು ಬೇರ್ಪಡಿಸಬಹುದೆ ?
700. ವಾರುವ ಮುಗ್ಗಿದಡೆ ವಾಗೆದಲ್ಲಿ ಆದರಿಸಬೇಕಲ್ಲದೆ,
701. ವಿಕಾರಿಗೇಕೊ ವ್ರತ ನೇಮ ? ವಿಶ್ವಾಸಹೀನಂಗೇಕೊ ಭಕ್ತಿಕೃತ್ಯ ?
702. ವಿರಕ್ತಿಯ ಹೇಳಿ ಹರಿದಾಡುವ ಹಿರಿಯರೆಲ್ಲರೂ
703. ವಿರಳವಿಲ್ಲದ ಮಣಿಗೆ ದಾರದ ಹಂಗೇಕೆ ?
704. ವಿಶ್ವಾಸದ ಹರವರಿಯಲ್ಲಿ ವಿಶ್ವಮಯ ಸ್ಥಲಕುಳಂಗಳಾದವು.
705. ವೃಕ್ಷ ಬೀಜವ ನುಂಗಿತ್ತೋ, ಬೀಜ ವೃಕ್ಷವ ನುಂಗಿತ್ತೋ
706. ವೇದಕ್ಕೆ ಹೋರುವಡೆ ವೇದಕ್ಕತೀತ,
707. ವೇದಂಗಳ ಉತ್ತರದಲ್ಲಿ, ಶಾಸ್ತ್ರದ ಮಧ್ಯದಲ್ಲಿ,
708. ವೇದವ ಕಲಿತು, ಶಾಸ್ತ್ರವನೋದಿ,
709. ವೇದಾಂತವ ನುಡಿವವರ ಕಂಡೆ, ಸಿದ್ಧಾಂತವ ನಡೆವವರ ಕಾಣೆ.
710. ವೇಷಮಾತಿನ ಬಿನ್ನಾಣಿಗಳಿಗೆ ಗ್ರಾಸ ಉಂಟಲ್ಲದೆ ನಿಜವಿಲ್ಲ.
711. ವ್ರತನೇಮ ನಿತ್ಯಕೃತ್ಯವ ಮಾಡುವ ಸತ್ಯರುಗಳು ಕೇಳಿರೋ.
712. ವ್ರತವ ಮಾಡಿಕೊಂಡೆವೆಂದು ಗನ್ನಘಾತಕತನದಲ್ಲಿ ನಡೆವಧಿಕರ ನೋಡಾ.
713. ಶತಭಿನ್ನಪತ್ರದಲ್ಲಿ ತೋರುವ ಪ್ರಕಾಶ,
714. ಶಬ್ದ ಸ್ಪರ್ಶ ರೂಪು ರಸ ಗಂಧಂಗಳೆಂಬ ಪಂಚೇಂದ್ರಿಯಂಗಳಲ್ಲಿ
715. ಶರೀರದ ನೆಲೆಮನೆಯಲ್ಲಿರ್ದು, ನೆರೆವ ವಸ್ತುವನರಿವುದಕ್ಕೆ ಕುರುಹಾವುದು?
716. ಶರೀರದಲ್ಲಿ ಷಡಾಧಾರಚಕ್ರವುಂಟೆಂಬ
717. ಶಿಶುವಿಂಗೆ ಗುಮ್ಮನಲ್ಲದೆ ದೆಶೆಯ ಬಲ್ಲರಿಗುಂಟೆ, ಭೀತಿ ?
718. ಶಿಶುವಿನ ಬಸುರಿನಲ್ಲಿ ತಾಯಿ ಹುಟ್ಟಿ,
719. ಶುಕ್ತಿಕರಂಡದಲ್ಲಿ ಬಿದ್ದ ಅಪ್ಪು, ಶುಕ್ತಿಯ ಭೇದವೋ?
720. ಶ್ವಾನಜ್ಞಾನಿಗಳೆಲ್ಲ ಸಮ್ಯಕ್ ಜ್ಞಾನವ ಬಲ್ಲರೆ ?
721. ಸಂಚಿತ ಆಗಾಮಿ ಪ್ರಾರಬ್ಧವೆಂಬ ಕರ್ಮಕಲ್ಪಿತಕ್ಕೆ
722. ಸಂಚಿತ ಪ್ರಾರಬ್ಧ ಆಗಾಮಿಗಳೆಂಬ ತ್ರಿಸಂಚವನರಿತು,
723. ಸಂಜೀವನವ ಕೈಯಲ್ಲಿ ಹಿಡಿದಿರ್ದು, ಸಾವ ಹುಟ್ಟುವ ಜೀವವ ನಾ ಕಂಡೆ.
724. ಸಕಲ ರೂಪೆಂದು, ನಿಃಕಲ ನಿರವಯವೆಂದು ಲಕ್ಷಿಸಿ ನುಡಿವಾಗ,
725. ಸಕಲ ಸುಖಭೋಗಂಗಳಲ್ಲಿದ್ದೂ ಇಲ್ಲದಾತನ ಆತ್ಮನ ಇರವು ಎಂತುಟೆಂದಡೆ,
726. ಸಡಗರಿಸುವಲ್ಲಿ ಲಿಂಗವ ನೆನೆದು, ಕಡುದುಃಖ ಬಂದಲ್ಲಿ ಲಿಂಗವ ಮರೆದು,
727. ಸತ್ತ ಹೆಣಕ್ಕೆ ಎಳವಿಗೆ ಬಂದವರ ಕಂಡೆ.
728. ಸತ್ಯನ ಇರವು ಪಯದೊಳಗಣ ನವನೀತದಂತೆ,
729. ಸತ್ವಕ್ಕೆ ತಕ್ಕ ಹೊರೆಯಲ್ಲದೆ, ಮತ್ತುಳಿದ ಮಾತಂಗವ ಹೊರಬಹುದೆ?
730. ಸತ್ವಗೆಟ್ಟಲ್ಲಿ ಕಾಷ್ಠವನೂರಿ ನಡೆಯಬೇಕು. ಮತ್ತತ್ವವಿದ್ದಲ್ಲಿ ನಿಶ್ಚಯವ ಹೇಳಲಾಗಿ,
731. ಸತಿ ತಪ್ಪಿ ಪಾರದ್ವಾರವ ಮಾಡಿದಲ್ಲಿ,
732. ಸತಿ ಪುರುಷರಿಬ್ಬರಿಂದೊದಗಿದ ಸುಖ ಸತಿಗೋ, ಪುರುಷಂಗೋ?
733. ಸತ್ಕ್ರೀವಂತಂಗೆ ಭಕ್ತಸ್ಥಲವಿಲ್ಲ, ನಿರ್ಮಲಚಿತ್ತಂಗೆ ಮಾಹೇಶ್ವರಸ್ಥಲವಿಲ್ಲ.
734. ಸದ್ಭಕ್ತಿಯೆ ದೈವವೆಂದು ಅರ್ಚಿಸುವ ಠಾವಿನಲ್ಲಿ
735. ಸದ್ಗುರುಚರ ಶ್ಮಶಾನದೀಕ್ಷೆಯ ಮಾಡಲಾಗದು.
736. ಸಮಯಾಚಾರವೆಂದು ನೇಮಕ್ಕೆ ಹೊತ್ತು ಮಾಡುತಿರ್ಪ ಸದ್ಭಕ್ತರು,
737. ಸಮಾಲಕ್ಷದಲ್ಲಿ ಹುಟ್ಟಿ, ಸಕಲಕ್ರಮಗಳಿಂದ ಭೋಗಿಸಿ,
738. ಸರ್ಪನ ಸಲಹಿದಲ್ಲಿ, ಬೇರೆ ವಿಷವ ಸಲಹಲುಂಟೆ ?
739. ಸರ್ಪನ ಹಿಡಿವಲ್ಲಿ ಅಧಮತ್ವವ ಮಾಡುವ ಮಂತ್ರವಿರಬೇಕು.
740. ಸರ್ವತ್ರ ಸುಲಭನಾದಲ್ಲಿ ನೀನು ನಾನು ಎನ್ನದಿರ್ಪುದೆ ಜ್ಞಾನ.
741. ಸರ್ವ ನಿರ್ವಾಣದಲ್ಲಿ ಗುರುಸ್ಥಲ, ಲಯ ನಿರ್ವಾಣದಲ್ಲಿ ಲಿಂಗಸ್ಥಲ.
742. ಸರ್ವವನಾಧರಿಸಿಕೊಂಡಿಪ್ಪ ಮಹಾಶರಣನ ಇರವು ಎಂತುಟೆಂದಡೆ,
743. ಸರ್ವಶೂನ್ಯ ನಿರಾಭಾರಿಯಾದ ಲಿಂಗವು,
744. ಸರ್ವಾವಧಾನಿಯ ಇರವು, ಅನಲ ಅನಿಲನ ತೆರದಂತೆ,
745. ಸರ್ವೆಂದ್ರಿಯಂಗಳ ಲಿಂಗಮುಖ ಮಾಡಿ, ಲಿಂಗಕ್ಕೆ ಕೊಡಬೇಕೆಂಬುದು,
746. ಸಸಿ ಸ್ಥಾವರ ಮೂಲಂಗಳಿಗೆಲ್ಲಕ್ಕೂ ಪೃಥ್ವಿಯೆ ಆದಿ.
747. ಸಾರವ ಕೂಡಿದಲ್ಲಿ ಹಣ್ಣು, ನಿಸ್ಸಾರವಾದಲ್ಲಿ ಕಾಯಿ.
748. ಸಾವಿರದಲ್ಲಿ ಒಂದು ರಜ್ಜು ಹರಿದಡೆ,
749. ಸಾಸಿರ ನೋಂಪಿಯ ನೋ[ಂ]ತು,
750. ಸಾಸಿವೆಯ ಮೊನೆಯೊಳಗಡಗಿದ ಗುಂಗುರು,
751. ಸಿದ್ಧರಸ ಲೇಸೆಂದಡೆ ತಾನಿದ್ದ ಕುಡಿಕೆ ಹೇಮವಾದುದಿಲ್ಲ,
752. ಸೀರೆಯ ನೆಯ್ವನ ಕೈಯ, ಲಾಳಿ ನುಂಗಿತ್ತ ಕಂಡೆ,
753. ಸುಖದುಃಖಗಳನರಿವುದು, ಕಾಯ ಜೀವ ಒಂದಾದಲ್ಲಿ.
754. ಸುಖವ ಮೆಚ್ಚಿದ ದೇಹ, ಸಕಲದೊಳಗೆ ಸಿಕ್ಕಿದುದಕ್ಕೆ ದೃಷ್ಟ.
755. ಸುಗಂಧ ಕೊಡುವ ಮೃಗವೆಂದಡೆ,
756. ಸುಗಂಧ ದುರ್ಗಂಧವೆಂಬುಭಯವ ನಾಸಿಕವರಿದು,
757. ಸುಡುವ ಬೆಂಕಿಯ ತುದಿಮೊನೆಯಲ್ಲಿ, ಒಂದು ಅರಗಿನ ಮಣಿಮಾಡವಿದೆ
758. ಸುಧೆಯಿದ್ದಂತೆ ಸುರೆಗೆ ಆಸೆ ಮಾಡುವನಂತೆ,
759. ಸುರೆಯ ಮಡಕೆಯ ಮೇಲೆ ವಿಭೂತಿಯ ಪೂಸಿ
760. ಸೂತ್ರವನಾಡಿಸುವುದೇತರ ಸತ್ವ?
761. ಸೆರೆಯ ಮದ್ದ ಕಡುಗಳ್ಳನ ಬುದ್ಧಿ,
762. ಸ್ಥಲವ ಕಂಡಡೇನು ಸ್ಥಲವನರಿಯಬೇಕು.
763. ಸ್ಥಲವೆಂಬುದು ಘಟ, ಕುಳವೆಂಬುದು ಆತ್ಮ.
764. ಸ್ವಕ್ಷೇತ್ರದಲ್ಲಿ ಒಂದು ಕ್ಷೇತ್ರಗೇರಿ ಹುಟ್ಟಿತ್ತು.
765. ಸ್ವಪ್ನದ ಸತಿಗೆ ನಿಶ್ಚಯವೆಂದದ ಮೆಚ್ಚಿ,
766. ಸ್ತ್ರೀಯರು ಹಲವಾದಡೇನು ಕೂಡುವನೊಬ್ಬನೆ.
767. ಸ್ಥೂಲತನು, ಸೂಕ್ಷ್ಮ ತನು, ಕಾರಣತನು.
768. ಸ್ಥೂಲದಲ್ಲಿ ಕಾಬ ತನುವಿಂಗೆ ಆವುದು ದೃಷ್ಟ?
769. ಸ್ಥೂಲ ಬ್ರಹ್ಮನ ಮಗ, ಸೂಕ್ಷ್ಮ ವಿಷ್ಣುವಿನ ಮಗ,
770. ಸ್ಥೂಲವಡಕೆಯಾದಂತೆ, ಸೂಕ್ಷ್ಮ ಪರ್ಣವಾದಂತೆ,
771. ಹಣ್ಣು ಮರನ ನುಂಗಿ ಏರುವುದಕ್ಕೆ ಠಾವಿಲ್ಲದೆ,
772. ಹದ್ದುಹಾವು ನುಂಗುವಾಗ ಸಿದ್ಧರೆಲ್ಲರು ನೋಡುತ್ತಿದ್ದರು.
773. ಹರಿಗೆಯ ಹಿಡಿದವ ಇದಿರ ಗೆದ್ದಿಹೆನೆಂದು
774. ಹರುಗೋಲನೇರಿದಡೆ ಅದ ಹಿಡಿವ ತೆರನನರಿಯಬೇಕು.
775. ಹಲವು ಬಹುರೂಪ ಬರೆದ ಕರದ ಕಡ್ಡಿಯ ಭೇದದಂತೆ,
776. ಹಸಿದ ಡುಂಡುಕಂಗೆ, ಬಕಂಗೆ ಎಸಕದ ಧ್ಯಾನವುಂಟೆ ?
777. ಹಸಿದ ಹಕ್ಕಿ ಹಣ್ಣಿಂಗೆ ಹೋದಡೆ, ಹಣ್ಣು ಹಕ್ಕಿಯ ನುಂಗಿತ್ತು.
778. ಹಸಿದು ಅಶನವ ಮುಸುಕಿಟ್ಟುಕೊಂಡಡೆ, ಹಸಿವು ಹರಿದುದುಂಟೆ ?
779. ಹಸಿವ ಕೊಂದಿಹೆವೆಂದು ತುಪ್ಪ ಹಾಲು ಸಕ್ಕರೆ ಹಣ್ಣು
780. ಹಳುವಿನೊಳಗಣ ದಳ್ಳುರಿ, ಅದು ಸಲ್ಲಲಿತದಿಂದಲ್ಲದೆ ಅಲ್ಲಿಂದೇಳದು.
781. ಹಾಳಾಹಳವೆಂಬ ಮಾಳಿಗೆಯ ಹೊಕ್ಕು, ಕೋಳಾಹಳ ತಾ ಕಾದಿ,
782. ಹಿಂದೆ ನೀ ಬಂದೆ ನಾನಾ ಭವಂಗಳಲ್ಲಿ,
783. ಹಿಡಿದ ಹೊಲಕ್ಕೆ ಒಡವೆಯ ಕೊಡೆನೆಂದಡೆ,
784. ಹಿಡಿದು ಬಿಟ್ಟಡೆ ಮಹಾಪ್ರಮಥರಿಗೆ ದೂರ.
785. ಹಿರಿದಪ್ಪ ಮಹಾಮೇರುವೆಯ ತುದಿಯಲ್ಲಿ,
786. ಹಿರಿದಪ್ಪುದೊಂದು ಭೇರಿಗೆ,
787. ಹೀಗಿರು ಎಂದಡೆ, ಹಾಗಿರದಿದ್ದಡೆ ಅವಳು ಸತಿಯಲ್ಲ, ನಾ ಪತಿಯಲ್ಲ.
788. ಹುಟ್ಟದ ಮುನ್ನವೆ ಸತ್ತಿತ್ತು ಆ ಶಿಶು.
789. ಹುಟ್ಟಿಸುವಾತ ಬ್ರಹ್ಮನಾದಡೆ ಅರ್ಚಿಸಲೇಕೋ ನಿಮ್ಮುವ?
790. ಹುಟ್ಟುಗುರುಡ ಕತ್ತೆಯನೇರಿ ಬಪ್ಪಾಗ,
791. ಹುಟ್ಟುವುದಕ್ಕೆ ಹಂಗಿಗರಾದವರೆಲ್ಲರೂ ಬ್ರಹ್ಮನ ಲೆಂಕರು.
792. ಹುತ್ತದ ಬಾಯಲ್ಲಿ ಲೆಕ್ಕವಿಲ್ಲದ ಹುಳು ಹುಟ್ಟಿ,
793. ಹುತ್ತದಲ್ಲಿ ಕೈಯನಿಕ್ಕಿ ಸರ್ಪನ ತೆಗೆವಾಗ, ಸರ್ಪನ ಒಪ್ಪತಪ್ಪಿ,
794. ಹುಲಿಯ ಹುಲ್ಲೆ ನುಂಗಿತ್ತು,
795. ಹುಲ್ಲಿನ ಸಾರವ, ಮೇವ ಪಶು ಬಲ್ಲುದಲ್ಲದೆ
796. ಹುಳ್ಳಿಯ ಹಗುರದಿಂದ ಹಳ್ಳವ ಹಾಯಬೇಕು.
797. ಹೃದಯಕಮಲಮಧ್ಯದಲ್ಲಿ ಅಷ್ಟದಳ ಕಮಲವ ಮೆಟ್ಟಿಪ್ಪ
798. ಹೆಡೆಯಿಲ್ಲದ ಸರ್ಪ, ಫಲವಿಲ್ಲದ ವೃಕ್ಷ, ದಯವಿಲ್ಲದ ಮಾಟ,
799. ಹೆಣದ ಚಪ್ಪರದ ಮಣಿಮಾಡದ ಮೇಲೆ, ಸುತ್ತಿದವಾರು ಸೀರೆ.
800. ಹೆಣ್ಣು ಬೇಡುವಂಗೆ ಹೆಣ್ಣೇ ಪ್ರಾಣ,
801. ಹೆಣ್ಣು ಹೊರಗಣದೆಂದು, ಹೊನ್ನು ಹೊರಗಣದೆಂದು,
802. ಹೇಮದ ಬಣ್ಣ ರಸವು ಅಗ್ನಿಯ ಸಂಗದಿಂದ
803. ಹೇಮ ಹಲವಂಗದಲ್ಲಿ ಹುಟ್ಟಿ ಬೆಳೆಯಿತ್ತೆ?
804. ಹೇರಂಡದ ಬಿತ್ತ ತುಳಿದು, ವಾರಿಯ ಕಲಸಿ ಬೇಯಿಸಿದಲ್ಲಿ,
805. ಹೇಳುವಡೆ ನಾನಾಗಿ, ಕೇಳುವಡೆ ನೀನಾಗಿ.
806. ಹೊಟ್ಟೆಯ ಕಕ್ಕುಲತೆಗಾಗಿ,
807. ಹೊಯ್ದ ಭೇರಿಯ ನಾದ ಸಾಗಿತ್ತು ಎಲ್ಲಿಗೆ?
808. ಹೊರಗಣ ಮಾತ ಹೇಳಿ, ಒಳಗು ಶುದ್ಧವನರಿಯದೆ,
809. ಹೊಲಕ್ಕೆ ಹೋಗುತಿರ್ಪವನ ಕಂಡು, ಊರೆಲ್ಲರು ನೆರೆದು,
810. ಹೊಲದವರೆಯ ನಡೆದು ಸೊಡಗೆಯ ಸುಲಿದಲ್ಲಿ,
811. ಹೊಲನ ಗೆಯ್ದು ಮನೆಗೆ ಬರಲಾಗಿ,
812. ಹೊಲ ಬೆಳೆದಲ್ಲಿ ಹುಲ್ಲೆಗಳು ಇರಗುಡವು.
813. ಹೊಲೆಯ ಕುಲಜನಾದುದ ಕಂಡೆ,
814. ಹೊಳೆಯ ಸುಳಿಯಲ್ಲಿ ಸಿಕ್ಕಿದ ಹುಲ್ಲು,
815. ಹೋಟಾರದಲ್ಲಿ ಒಂದು ವೇತಾಳ ಹುಟ್ಟಿತ್ತು.
ವಚನಕಾರ ಮಾಹಿತಿ
×
ಮೋಳಿಗೆ ಮಾರಯ್ಯ
ಅಂಕಿತನಾಮ:
ನಿ:ಕಳಂಕ ಮಲ್ಲಿಕಾರ್ಜುನ
ವಚನಗಳು:
815
ಕಾಲ:
12ನೆಯ ಶತಮಾನ
ಕಾಯಕ:
ಮಹಾರಾಜ-ಕಾಡಿನಿಂದ ಉರುವಲು ಕಟ್ಟಿಗೆ ತಂದು ಊರೊಳಗೆ ಮಾರುವುದು.
ಜನ್ಮಸ್ಥಳ:
ಕಾಶ್ಮೀರ
ಕಾರ್ಯಕ್ಷೇತ್ರ:
ಕಾಶ್ಮೀರ, ಕಲ್ಯಾಣ, ಬೀದರ ಜಿಲ್ಲೆ.
ಸತಿ/ಪತಿ:
ಮಹಾದೇವಿ(ಗಂಗಾದೇವಿ)
ಐಕ್ಯ ಸ್ಥಳ:
ಮೋಳಕೇರಾ, ಹುಮನಾಬಾದ ತಾಲ್ಲೂಕು, ಬೀದರ ಜಿಲ್ಲೆ.
ಪೂರ್ವಾಶ್ರಮ:
ಶೈವ
ಪದ ಹುಡುಕಿದ ವಿವರ:
×
ವಚನಕಾರ ಮಾಹಿತಿ
×