ಬಸವಣ್ಣ   
  ವಚನ - 6     
 
ಕರಿ ಘನ: ಅಂಕುಶ ಕಿರಿದೆʼನ್ನ ಬಹುದೆ? ಬಾರದಯ್ಯಾ. ಗಿರಿ ಘನ: ವಜ್ರ ಕಿರಿದೆʼನ್ನ ಬಹುದೆ? ಬಾರದಯ್ಯಾ. ತಮಂಧ ಘನ: ಜ್ಯೋತಿ ಕಿರಿದೆʼನ್ನ ಬಹುದೆ? ಬಾರದಯ್ಯಾ. ಮರಹು ಘನ: ನಿಮ್ಮ ನೆನೆವ ಮನ ಕಿರಿದೆʼನ್ನ ಬಹುದೆ? ಬಾರದಯ್ಯಾ, ಕೂಡಲ ಸಂಗಮದೇವಾ.
Hindi Translation करी बडा है, अंकुश को छोटा कह सकते हैं? नहीं, गिरि बडा है, वज्र को छोटा कह सकते हैं? नहीं, तिमिर गहन है दीप ज्योति को छोटा कह सकते हैं? नहीं विस्मृति गहन है, तव नाम-जापक मन को छोटा कह सकते हैं? नहीं कूडलसंगमदेव ॥ Translated by: Banakara K Gowdappa