ಬಸವಣ್ಣ   
  ವಚನ - 8     
 
ಸಂಸಾರಸಾಗರದ ತೆರೆ ಕೊಬ್ಬಿ ಮುಖದ ಮೇಲೆ ಅಲೆಯುತ್ತಿದ್ದುದೇ, ನೋಡಾ! ಸಂಸಾರಸಾಗರ ಉರದುದ್ದವೆ? ಹೇಳಾ ! ಸಂಸಾರಸಾಗರ ಕೊರಲುದ್ದವೆ? ಹೇಳಾ ! ಸಂಸಾರಸಾಗರ ಸಿರದುದ್ದವಾದ ಬಳಿಕ ಏನ ಹೇಳುವೆನಯ್ಯಾ? ಅಯ್ಯಾ, ಅಯ್ಯಾ, ಎನ್ನ ಹುಯ್ಯಲ ಕೇಳಯ್ಯಾ ಕೂಡಲ ಸಂಗಮದೇವಾ, ನಾನೇವೆನೇವೆನಯ್ಯಾ?
Hindi Translation संसार-सागर की लहर उठकर देखो, मुख पर लहराती है कहो, संसार-सागर वक्ष तक है कहो, संसार-सागर कंठ तक है? कहो, संसार-सागर सिर तक है, तो क्या कहूँ स्वामी? मेरा दुःख सुनो, मैं क्या करूँ, कूडलसंगमदेव ॥ Translated by: Banakara K Gowdappa