ಬಸವಣ್ಣ   
  ವಚನ - 21     
 
ಅರಿಯದೆ ಜನನಿಯ ಜಠರದಲ್ಲಿ ಬಾರದ ಭವಂಗಳಲ್ಲಿ ಬರಿಸಿದೆ ತಂದೆ! ಹುಟ್ಟಿತ್ತೇ ತಪ್ಪಾಯಿತ್ತೆ, ಎಲೆ ಲಿಂಗವೇ ? ಮುನ್ನ ಹುಟ್ಟಿದುದಕ್ಕೆ ಕೃಪೆ ಮಾಡು ಲಿಂಗವೇ! ಇನ್ನು ಹುಟ್ಟಿದೆನಾದೊಡೆ, ಕೂಡಲ ಸಂಗಮದೇವಾ, ನಿಮ್ಮಾಣೆ!
Hindi Translation जननी-जठर में न आने योग्य भवों में हे पिता, इस अनजान को आने दिया क्या जन्म लेना ही अपराध था, लिंगदेव? गत जन्मों के लिए क्षमा करो, आगे जन्म लूँ, तो तव सौगंध है, कूडलसंगमदेव ॥ Translated by: Banakara K Gowdappa