ಬಸವಣ್ಣ   
  ವಚನ - 32     
 
ಕೊಂಬೆಯ ಮೇಲಣ ಮರ್ಕಟನಂತೆ ಲಂಘಿಸುವುದೆನ್ನ ಮನವು; ನಿಂದಲ್ಲಿ ನಿಲ್ಲಲೀಯದೆನ್ನ ಮನವು ಹೊಂದಿದಲ್ಲಿ ಹೊಂದಲೀಯದೆನ್ನ ಮನವು! ಕೂಡಲ ಸಂಗಮದೇವಾ ನಿಮ್ಮ ಚರಣಕಮಲದಲ್ಲಿ ಭ್ರಮರನಾಗಿರಿಸು, ನಿಮ್ಮ ಧರ್ಮ!
Hindi Translation शाखोपरिस्थ वानरवत् मेरा मन लांघता है जहाँ रहना हो, मेरा मन रहने नहीं देता, जहाँ मिलना हो, मेरा मन मिलने नहीं देता, कूडलसंगमदेव, निज चरण-कमलों में मुझे भ्रमर बना रखो, दया करो ॥ Translated by: Banakara K Gowdappa