ಬಸವಣ್ಣ   
  ವಚನ - 34     
 
ಅಂದಣವನೇರಿದ ಸೊಣಗನಂತೆ ಕಂಡೊಡೆ ಬಿಡದು ತನ್ನ ಮುನ್ನಿನ ಸ್ವಭಾವವನು; ಸುಡು! ಸುಡು!! ಮನವಿದು ವಿಷಯಕ್ಕೆ ಹರಿವುದು ಮೃಡ, ನಿಮ್ಮನನುದಿನ ನೆನೆಯಲೀಯದು ಎನ್ನೊಡೆಯ ಕೂಡಲ ಸಂಗಮದೇವಾ, ನಿಮ್ಮ ಚರಣವ ನೆನೆವಂತೆ ಕರುಣಿಸು ಸೆರಗೊಡ್ಡಿ ಬೇಡುವೆ, ನಿಮ್ಮ ಧರ್ಮ!
Hindi Translation पालकी पर आरूढ श्वान सा यह मन देखने पर अपना पिछला स्वभाव नहीं छोड़ता, जलाओं जलाओं मन विषय की ओर दौडता है, हे शिव, अनुदिन तव स्मरण करने नहीं देता, हे मेरे प्रभु – कूडलसंगमदेव, ऐसी कृपा करो, तव चरण - स्मरण करता रहूँ, अंचल पसार विनती करता हूँ, दया करो ॥ Translated by: Banakara K Gowdappa