ಬಸವಣ್ಣ   
  ವಚನ - 37     
 
ದಂದುಗ ಬಿಡದು ಮನದ ಸಂದೇಹ ಹಿಂಗದಾಗಿ; ಮುಂದೆ ಲಿಂಗವ ಕಂಡೆಹೆನೆಂಬುದು ಹುಸಿ, ನೋಡಾ! ಬೆಂದ ಕರಣಾದಿಗಳು ಒಂದೇ ಪಥವನರಿಯವು; ಎಂತು ಶಿವಪಥವೆನಗೆ ಸಾಧ್ಯವಪ್ಪುದಯ್ಯಾ? ಎನ್ನ ತಂದೆ, ಕೂಡಲ ಸಂಗಮದೇವಾ ನಿಮ್ಮ ಶರಣರ ಬಳಿವಿಡಿದರೆ ಎನ್ನ ದಂದುಗ ಹಿಂಗುವುದು.
Hindi Translation मन का संदेह नष्ट नहीं होता, अतः कष्ट नहीं मिटता, यह झूठ है, आगे लिंग – दर्शन करूँगा। तप्त करणेंद्रिय एक ही पथ नहीं जानते, शिवपथ मेरे लिए कैसे साध्य होगा? मेरे पिता कूडलसंगमदेव, तव शरणों का अनुसरण करूँ, तो मेरा कष्ट दूर होगा ॥ Translated by: Banakara K Gowdappa