ಬಸವಣ್ಣ   
  ವಚನ - 46     
 
ಆಸೆಯಾಮಿಷ, ತಾಮಸ, ಹುಸಿ, ವಿಷಯ, ಕುಟಿಲ, ಕುಹಕ, ಕ್ರೋಧ, ಕ್ಷುದ್ರ, ಮಿಥ್ಯೆ- ಇವನೆನ್ನ ನಾಲಗೆಯ ಮೇಲಿಂದತ್ತ ತೆಗೆದು ಕಳೆಯಯ್ಯಾ ಅದೇಕೆಂದೊಡೆ, ನಿನ್ನತ್ತಲೆನ್ನ ಬರಲೀಯವು ಇದು ಕಾರಣ, ಇವೆಲ್ಲವ ಕಳೆದು ಎನ್ನ ಪಂಚೈವರ, ಭಕ್ತರ ಮಾಡು ಕೂಡಲ ಸಂಗಮದೇವಾ.
Hindi Translation आशा, आमिष, तामसता, असत्य, वासना, कुटिलता, कपट, क्रोध, क्षुद्रता, मिथ्या इन्हें मेरी जिह्वा से दूर करो स्वामी, क्योंकि ये तुम्हारे पास आने नहीं देते, अतः इन सब को दूर कर कूडलसंगमदेव॥ Translated by: Banakara K Gowdappa