ಬಸವಣ್ಣ   
  ವಚನ - 47     
 
ಎಂತೋ ಶಿವಭಕ್ತಿಯ ನಾನುಪಮಿಸುವೆನಯ್ಯಾ? ಎಂತೋ ಶಿವಾಚಾರವೆನಗೆ ವೇದ್ಯವಪ್ಪುದಯ್ಯಾ? ಕಾಮ, ಕ್ರೋಧ, ಲೋಭ, ಮೋಹದಿಂದ ಕಟ್ಟುವಡೆದೆನು ಹಸಿವು, ತೃಷೆ, ವ್ಯಸನದಿಂದ ಕುದಿಯುತ್ತಿದ್ದೇನೆ; ಪಂಚೇಂದ್ರಿಯ, ಸಪ್ತಧಾತು ಹಂಚುವರಿ ಮಾಡಿ ಕಾಡಿಹುವಯ್ಯಾ! ಅಯ್ಯಾ, ಅಯ್ಯಾ, ಎನ್ನ ಹುಯ್ಯಲ ಕೇಳಯ್ಯಾ ಕೂಡಲ ಸಂಗಮದೇವಾ, ನಾನೇವೆನೇವೆನಯ್ಯಾ.
Hindi Translation मैं शिवभक्ति की उपमा कैसे दूँ ? शिवाचार मुझे कैसे वेद्य होगा, प्रभू? मैं काम, क्रोध, लोभ, मोह, मद, मत्सर से बंधा हूँ । क्षुधा, तृषा, व्यसन से उबल रहा हूँ । पंचेंद्रिय और सप्त धातु मुझे विच्छिन्न कर सताते हैं , स्वामी, मेरी व्यथा सुनो, कूडलसंगमदेव मैं क्या कर सकता हूँ? Translated by: Banakara K Gowdappa