ಬಸವಣ್ಣ   
  ವಚನ - 48     
 
ಕಾಯವಿಕಾರ ಕಾಡಿಹುದಯ್ಯಾ ಮನೋವಿಕಾರ ಕೂಡಿಹುದಯ್ಯಾ. ಇಂದ್ರಿಯವಿಕಾರ ಸುಳಿವುದಯ್ಯಾ ! ಸುಳಿವಿನೊಳಗೆ ಸುಳಿಯುತ್ತಲಿದ್ದೇನೆ, ಸಿಲುಕಿಸದಿರಯ್ಯಾ ಅನ್ಯ ಚಿತ್ತವಿರಿಸದಿರಯ್ಯಾ; ನಿಮ್ಮ ಚಿತ್ತವಿರಿಸಯ್ಯಾ. ಅನುಪಮಸುಖಸಾರಾಯ ಶರಣರಲ್ಲಿ ಕೂಡಲ ಸಂಗಮದೇವಯ್ಯಾ, ಇದನೆ ಬೇಡುವೆನಯ್ಯಾ.
Hindi Translation काय-विकार सताते हैं । मनो विकार योग देते हैं, इंद्रिय विकार मंडराते हैं मैं भँवर में चक्कर खा रहा हूँ मुझे मत उलझाओ देव, अन्य मन मत बनाओ त्वल्लीन मन बनाओ ॥ अनुपम सुख सार निलय शरणों से मैं यही प्रार्थना करता हूँ कूडलसंगमदेव ॥ Translated by: Banakara K Gowdappa