ಬಸವಣ್ಣ   
  ವಚನ - 65     
 
ನರ ಕೂರಂಬಿನಲೆಚ್ಚ, ಅವಂಗೊಲಿದೆಯಯ್ಯಾ; ಅರಳಂಬಿನಲೆಚ್ಚ ಕಾಮನನುರುಹಿದೆಯಯ್ಯಾ! ಇರುಳು ಹಗಲೆನ್ನದೆ ಪ್ರಾಣಘಾತಕವ ಮಾಡಿದ ಬೇಡನ ಕೈಲಾಸಕೊಯ್ದೆಯಯ್ಯಾ: ಎನ್ನನೇತಕೊಲ್ಲೆ, ಕೂಡಲ ಸಂಗಮದೇವಾ?
Hindi Translation अर्जुन ने क्रूर बाण मारा, उस पर तुम प्रसन्न हुए; कामदेव ने कुसुम-बाण छोडा, उसे तुमने भस्म किया; दिन – रात प्राणि – वध करनेवाले व्याध को कैलास ले गए; मुझे क्यों नहीं-चाहते कूडलसंगमदेव ॥ Translated by: Banakara K Gowdappa