ಬಸವಣ್ಣ   
  ವಚನ - 73     
 
ಮುನ್ನ ಮಾಡಿದ ಪಾಪವೆಂತು ಹೋಹುದೆಂದು ಚಿಂತಿಸಬೇಡ: ಕಹಿಸೋರೆಯ ಕಾಯ ತಂದು ವಿಭೂತಿಯ ತುಂಬಿದೊಡೆ ಸಿಹಿಯಾಗದೆ ಮೂರು ದಿವಸಕ್ಕೆ? ಹಲವುಕಾಲ ಕೊಂದ ಸೂನೆಗಾರನ ಕತ್ತಿಯಾದರೇನು, ಪರುಷ ಮುಟ್ಟಲಿಕೆ ಹೊನ್ನಾಗದೆ ಅಯ್ಯಾ? ಲಲಾಟದಲ್ಲಿ ವಿಭೂತಿ ಬರೆಯಲಿಕೆ ಪಾಪ ಪಲ್ಲಟವಾಗದೆ, ಕೂಡಲ ಸಂಗಮದೇವಾ?
Hindi Translation चिंता न करो पूर्वकृत पाप कैसे मिटेगा? कडुआ कद्दू लाकर विभूति भरने से तीन दिन में मीटा नहीं बनता? अनंत काल तक वध किया हुआ वधिक के हस्त का कृपाण क्यों न हो पारस स्पर्श से सोना नहीं बनता? ललाट पर विभूति धारण करने से पाप नहीं मिटता, कूडलसंगमदेव ? Translated by: Banakara K Gowdappa