ಬಸವಣ್ಣ   
  ವಚನ - 74     
 
ನೀರಿಂಗೆ ನೈದಿಲೆ ಶೃಂಗಾರ; ಸಮುದ್ರಕ್ಕೆ ತೆರೆಯೇ ಶೃಂಗಾರ; ನಾರಿಗೆ ಗುಣವೇ ಶೃಂಗಾರ; ಗಗನಕ್ಕೆ ಚಂದ್ರಮನೇ ಶೃಂಗಾರ; ನಮ್ಮ ಕೂಡಲಸಂಗನ ಶರಣರಿಗೆ ನೊಸಲ ವಿಭೂತಿಯೇ ಶೃಂಗಾರ.
Hindi Translation कमल ही जल का श्रृंगार है; लहर ही सागर का श्रृंगार है; गुण ही नारी का श्रृंगार है; चंद्र ही गगन का श्रृंगार है; विभूति ही मम कूडलसंगमेश के शरणों के ललाट का श्रृंगार है ॥ Translated by: Banakara K Gowdappa