ಬಸವಣ್ಣ   
  ವಚನ - 92     
 
ಕುಂಬಳಕಾಯಿಗೆ ಕಬ್ಬುನದ ಕಟ್ಟ ಕೊಟ್ಟರೆ ಕೊಳೆವುದಲ್ಲದೆ ಬಲುಹಾಗಬಲ್ಲುದೆ? ಅಳಿಮನದವಂಗೆ ಶಿವದೀಕ್ಷೆಯ ಕೊಟ್ಟರೆ ಭಕ್ತಿ ಎಂತಹುದೊ? ಮುನ್ನಿನಂತೆ. ಕೂಡಲಸಂಗಯ್ಯಾ, ಮನಹೀನನ ಮೀಸಲ ಕಾಯ್ದಿರಿಸಿದಂತೆ!
Hindi Translation कुम्हडे पर लोहे का छल्ला बिठाने से वह सडता नहीं तो पुष्ट होगा? हीन मनुज को शिव-दीक्षा देने से भक्ति कैसे होगी? वह पूर्ववत् रहेगा । कूडलसंगमदेव, हीन मनवाले की मनौती की रक्षा करने की भाँती है ॥ Translated by: Banakara K Gowdappa