ಬಸವಣ್ಣ   
  ವಚನ - 93     
 
ಸಗಣಿಯ ಬೆನಕಂಗೆ ಸಂಪಗೆಯರಳಲ್ಲಿ ಪೂಜಿಸಿದರೆ ರಂಜನೆಯಲ್ಲದೆ ಅದರ ಗಂಜಳ ಬಿಡದಣ್ಣಾ! ಮಣ್ಣ ಪುತ್ಥಳಿಯ ಮಾಣದೆ ಜಲದಲ್ಲಿ ತೊಳೆದರೆ ನಿಚ್ಚ ನಿಚ್ಚಕ್ಕೆ ಕೆಸರಹುದಲ್ಲದೆ ಅದರಚ್ಚುಗ ಬಿಡದಣ್ಣಾ! ಲೋಕದ ಮಾನವಂಗೆ ಶಿವದೀಕ್ಷೆಯ ಕೊಟ್ಟರೆ ಕೆಟ್ಟವನೇಕೆ ಶಿವಭಕ್ತನಹನು, ಕೂಡಲಸಂಗಮದೇವಾ?
Hindi Translation चंपक पुष्पों से गोबर गणेश की पूजा करें, तो रंजन होगा, उसकी दुर्गंध नहीं छूटेगी? मिट्टी की पुतली को निरंतर जल में धोयें, तो, दिन दिन कीचड बनेगी, उसकी ममता नहीं जायेगी? लौकिक मानव को शिवदीक्षा दी जाय, तो, वह दुष्ट सद्भक्त क्यों बनेगा कूडलसंगमदेव। Translated by: Banakara K Gowdappa