ಬಸವಣ್ಣ   
  ವಚನ - 96     
 
ಒಳಗೆ ಕುಟಿಲ, ಹೊರಗೆ ವಿನಯವಾಗಿ ಭಕ್ತರೆನಿಸಿಕೊಂಬವರ ಬಲ್ಲನೊಲ್ಲನಯ್ಯಾ ಲಿಂಗವು! ಅವರು ಸತ್ಪಥಕ್ಕೆ ಸಲ್ಲರು, ಸಲ್ಲರಯ್ಯಾ. ಒಳಹೊರಗೊಂದಾಗದವರಿಗೆ ಅಳಿಯಾಸೆದೋರಿ ಬೀಸಾಡುವನವರ ಜಗದೀಶ ಕೂಡಲಸಂಗಮದೇವ!
Hindi Translation अंतरंग में कपट, बाहर विनम्र होकर भक्त कहलानेवालों को लिंगदेव जानते हैं, अतः उन्हें नहीं चाहते। वे सत्पथ के योग्य नहीं । जिनका भीतर बाहर एक न हो उन्हें दुराशा दिखाकर त्याग देते हैं जगदीश कूडलसंगमदेव॥ Translated by: Banakara K Gowdappa