ಬಸವಣ್ಣ   
  ವಚನ - 102     
 
ಎರದೆಲೆಯಂತೆ ಒಳಗೊಂದು ಹೊರಗೊಂದಾದರೆ ಮೆಚ್ಚುವನೆ? ಬಾರದ ಭವಂಗಳ ಬರಿಸುವನಲ್ಲದೆ ಮೆಚ್ಚುವನೆ? ಅಘೋರ ನರಕವನುಣಿಸುವನಲ್ಲದೆ ಮೆಚ್ಚುವನೆ ? ಉಡುವಿನ ನಾಲಗೆಯಂತೆ ಎರಡಾದರೆ ಕೂಡಲಸಂಗಯ್ಯ ಮೆಚ್ಚುವನೆ?
Hindi Translation बेर के पत्ते की भाँती भीतर कुछ, बाहर कुछ हो, तो होंगे? अनुचित भवों में आने न देंगे तो क्या प्रसन्न होंगे? घोर नरक भोजन न देंगे, तो क्या प्रसन्न होंगे? गोधे की भाँति जीभ दो हो, तो क्या कूडलसंगमदेव प्रसन्न होंगे? Translated by: Banakara K Gowdappa