ಬಸವಣ್ಣ   
  ವಚನ - 111     
 
ಹಾದರಕ್ಕೆ ಹೋದಡೆ, ಕಳ್ಳದಮ್ಮವಾಯಿತ್ತು; ಹಾಳುಗೋಡೆಗೆ ಹೋದರೆ, ಚೇಳೂರಿತ್ತು; ಅಬ್ಬರವ ಕೇಳಿ ತಳವಾರನುಟ್ಟ ಸೀರೆಯ ಸುಲಿದ; ನಾಚಿ ಹೋದರೆ ಮನೆಯ ಗಂಡ ಬೆನ್ನ ಬಾರನೆತ್ತಿದ; ಅರಸು ಕೂಡಲಸಂಗಮದೇವ ದಂಡವ ಕೊಂಡ!
Hindi Translation व्यभिचारार्थ जाना अधर्म है; टूटी दीवार के पास जाने पर बिच्छूने डंक मारा चिल्लाहट सुनकर संतरीने उसकी साड़ी उधेड दी, लजाती हुई घर गई, तो पतिने पीठ पर पीटा, राजाने उससे दंड वसूल किया, कूडलसंगमदेव ॥ Translated by: Banakara K Gowdappa