ಬಸವಣ್ಣ   
  ವಚನ - 135     
 
ಹೊಲೆಯ ಹೊಲಬಿಗನಾದೊಡೆ, ಅವನ ಹೊರೆಯಲಿಪ್ಪುದು ಲೇಸು, ಕಂಡಯ್ಯಾ; ಹೊಲಬುಗೆಡದೆ ಲಿಂಗ ಶರಣೆನ್ನಿರಯ್ಯಾ. ಹೊಲಬುಗೆಡಬೇಡ: ಶಿವ ಶರಣೆನ್ನಿರಯ್ಯಾ. ನಮ್ಮ ಕೂಡಲಸಂಗನ ಮಹಾಮನೆಯೊಳು ಮಾದಾರ ಚೆನ್ನಯ್ಯ ಹೊಲಬಿಗನಯ್ಯಾ.
Hindi Translation श्वपच सन्मार्गी हो, तो उसके पास रहना अच्छा है। पथभ्रष्ट न होकर लिंगदेव की शरण लो, सन्मार्ग से बिना भटके शिव की शरण लो, मम कूडलसंगमेश के महागृह श्वपच चन्नय्या सन्मार्गी है॥ Translated by: Banakara K Gowdappa