ಬಸವಣ್ಣ   
  ವಚನ - 139     
 
ದೇವಲೋಕ ಮರ್ತ್ಯಲೋಕವೆಂಬುದು ಬೇರೆ ಮತ್ತುಂಟೆ? ‍ಈ ಲೋಕದೊಳಗೆ ಮತ್ತೆ ಅನಂತಲೋಕ! ‍ಶಿವಲೋಕ, ಶಿವಾಚಾರವಯ್ಯಾ; ‍ಶಿವಭಕ್ತನಿದ್ದ ಠಾವೇ ದೇವಲೋಕ; ‍ಭಕ್ತನಂಗಣವೇ ವಾರಣಾಸಿ; ಕಾಯಕವೆ ಕೈಲಾಸ! ಇದು ಸತ್ಯ, ಕೂಡಲಸಂಗಮದೇವಾ.
Hindi Translation देवलोक, मर्त्यलोक कहीं भिन्न हैं? इस लोक में और अनंत लोक हैं? शिवाचार ही शिवलोक है; शिवभक्त निवास ही देवलोक है; भक्त प्रांगण ही वाराणसि है; काय ही कैलास है, यह सत्य है कूडलसंगमदेव ॥ Translated by: Banakara K Gowdappa