ಬಸವಣ್ಣ   
  ವಚನ - 152     
 
ಪರುಷದ ಹೊರೆಯಲ್ಲಿ ಕಬ್ಬುನವಿರ್ದು ಹೊನ್ನಾಯಿತ್ತು, ನೋಡಿರೆ: ಅವ್ವಾ ಚಂಗಳೇ, ನೀನಿದ್ದೇಳು ಕೇರಿಯವರು ಲಿಂಗದ ನೋಂಪಿಯ ನೋಂತರೆ? ಹೇಳಾ: ಕೂಡಲಸಂಗಮದೇವಂಗೆ ಚಿಲ್ಲಾಳನೆಂಬ ಬಾಯಿನವನಿಕ್ಕಿದರೆ? ಹೇಳಾ.
Hindi Translation देखो, पारस की संगति से लोहा स्वर्ण बनता है कहो, चंगळे माँ, तुम्हारे निवास की सात गलियों के लोगों ने लिंग का व्रत रखा, कहो, कूडलसंगमदेव को चीलाळ नामक भोग चढाया? Translated by: Banakara K Gowdappa