ಬಸವಣ್ಣ   
  ವಚನ - 156     
 
ಶಿವಚಿಂತೆ ಶಿವಜ್ಞಾನವಿಲ್ಲದ ಮನುಜರು- ಸಗಣಕ್ಕೆ ಸಾಸಿರ ಹುಳು ಹುಟ್ಟವೇ, ದೇವಾ? ಕಾಡ ಮೃಗವೊಂದಾಗಿರಲಾಗದೆ, ದೇವಾ? ಊರ ಮೃಗವೊಂದಾಗಿರಲಾಗದೆ, ಹರನೆ? ನಮ್ಮ ಕೂಡಲಸಂಗನ ಶರಣರಿಲ್ಲದ ಊರು, ದೇಶ- ವನವಾಸ, ನರವಿಂಧ್ಯ ಕಾಣಿರಣ್ಣಾ.
Hindi Translation शिवचिंता, शिवज्ञान रहित मनुज गोबर में सहस्रों कीटाणु पैदा नहीं होते देव? वन्यपशु एकाकी नहीं रहता देव-? ग्रामपशु एकाकी नहीं रहता देव-? मम कूडलसंगमदेव के शरणों से शून्य ग्राम व देश देखो भाई, वनवास है, नरविंध्या है ॥ Translated by: Banakara K Gowdappa