ಬಸವಣ್ಣ   
  ವಚನ - 157     
 
ಹೊತ್ತಾರೆ ಎದ್ದು ಶಿವಲಿಂಗದೇವನ ದೃಷ್ಟಿ(ಯಾ)ರೆ ನೋಡದವನ ಸಂಸಾರವೇನವನ? ಬಾಳುವೆಣನ ಬೀಳುವೆಣನ ಸಂಸಾರವೇನವನ? ನಡೆವೆಣನ ನುಡಿವೆಣನ ಸಂಸಾರವೇನವನ? ಕರ್ತೃ ಕೂಡಲಸಂಗಮದೇವಾ, ನಿಮ್ಮ ತೊತ್ತುಗೆಲಸವ ಮಾಡದವನ ಸಂಸಾರವೇನವನ?
Hindi Translation उषः काल उठकर शिवलिंगदेव को आँख भर न देखनेवाले का क्या जीवन है? उस जीवन्मृत का पतित शव का क्या जीवन है? उस चलते शव का बोलते शव का क्या जीवन है? हे कर्ता कूडलसंगमदेव तव भृत्य – वृत्ति न करनेवाले का क्या जीवन है? Translated by: Banakara K Gowdappa