ಬಸವಣ್ಣ   
  ವಚನ - 175     
 
ಅಷ್ಟವಿಧಾರ್ಚನೆ-ಷೋಡಶೋಪಚಾರವ ಮಾಡುವುದು; ಮಾಡಿದ ಪೂಜೆಯ ನೋಡುವುದಯ್ಯಾ. ಶಿವತತ್ವಗೀತವ ಪಾಡುವುದು; ಶಿವನ ಮುಂದೆ ನಲಿದಾಡುವುದಯ್ಯಾ. ಭಕ್ತಿಸಂಭಾಷಣೆಯ ಮಾಡುವುದು; ನಮ್ಮ ಕೂಡಲಸಂಗನಯ್ಯನ ಕೂಡುವುದು.
Hindi Translation अष्टविविर्चन और षोडशोपचार करो स्वयं कृत पूजा देखो शिवतत्व गीत गाओ- शिव समक्ष नृत्य करो भक्तिपूर्ण बातें करो । मम कूडलसंगमदेव में ऐक्य हो जाओ ॥ Translated by: Banakara K Gowdappa