ಬಸವಣ್ಣ   
  ವಚನ - 183     
 
ತನ್ನಾಶ್ರಯದ ರತಿಸುಖವನು, ತಾನುಂಬ ಊಟವನು ಬೇರೆ ಮತ್ತೊಬ್ಬರ ಕೈಯಲ್ಲಿ ಮಾಡಿಸಬಹುದೆ? ತನ್ನ ಲಿಂಗಕ್ಕೆ ಮಾಡುವ ನಿತ್ಯನೇಮವನು ತಾ ಮಾಡಬೇಕಲ್ಲದೆ, ಬೇರೆ ಮತ್ತೊಬ್ಬರ ಕೈಯಲ್ಲಿ ಮಾಡಿಸಬಹುದೆ? ಕೆಮ್ಮನೆ ಉಪಚಾರಕ್ಕೆ ಮಾಡುವರಲ್ಲದೆ ನಿಮ್ಮನೆತ್ತಬಲ್ಲರು, ಕೂಡಲಸಂಗಮದೇವಾ?
Hindi Translation निजाश्रित रतिसुख, निजभोजन अन्य के हाथों करा सकते हैं? निजशिवलिंगार्थ भी किए जानेवाले नित्य नेम स्वयं करना चाहिए अन्य के हाथों करा सकते हैं? वे यों ही शिष्टाचारार्थ करते हैं, तुम्हें कहाँ जानते हैं, कूडलसंगमदेव । Translated by: Banakara K Gowdappa