ಬಸವಣ್ಣ   
  ವಚನ - 194     
 
ಕಲ್ಲ ನಾಗರ ಕಂಡರೆ ಹಾಲನೆರೆಯೆಂಬರು: ದಿಟದ ನಾಗರ ಕಂಡರೆ ಕೊಲ್ಲೆಂಬರಯ್ಯಾ! ಉಂಬ ಜಂಗಮ ಬಂದರೆ ನಡೆಯೆಂಬರು: ಉಣ್ಣದ ಲಿಂಗಕ್ಕೆ ಬೋನವ ಹಿಡಿಯೆಂಬರಯ್ಯಾ! ನಮ್ಮ ಕೂಡಲಸಂಗನ ಶರಣರ ಕಂಡು ಉದಾಸೀನವ ಮಾಡಿದರೆ, ಕಲ್ಲ ತಾಗಿದ ಮಿಟ್ಟೆಯಂತಪ್ಪರಯ್ಯಾ!
Hindi Translation शिला नाग देखकर दूध चढाने को कहते हैं सजीव नाग देख कर मारने को कहते हैं, भोजनार्थी जंगम आवे, तो जाओ कहते हैं न खानेवाले लिंग से खाओ कहते हैं, मम कूडलसंगमदेव के शरणों को देख उदासीन रहनेवाले पाहन पतित बाण वत् होते हैं॥ Translated by: Banakara K Gowdappa