ಬಸವಣ್ಣ   
  ವಚನ - 208     
 
ಶಾಸ್ತ್ರ ಘನವೆಂಬೆನೆ? ಕರ್ಮವ ಭಜಿಸುತ್ತಿದೆ! ವೇದ ಘನವೆಂಬೆನೆ? ಪ್ರಾಣಿವಧೆಯ ಹೇಳುತ್ತಿದೆ! ಸ್ಮೃತಿ ಘನವೆಂಬೆನೆ? ಮುಂದಿಟ್ಟರಸುತ್ತಿದೆ! ಅಲ್ಲೆಲ್ಲಿಯೂ ನೀವಿಲ್ಲದ ಕಾರಣ, ತ್ರಿವಿಧ ದಾಸೋಹದಲ್ಲಲ್ಲದೆ ಕಾಣಬಾರದು ಕೂಡಲಸಂಗಮದೇವನ!
Hindi Translation शास्त्र श्रेष्ट कहूँ? वह कर्म को भजता है वेद श्रेष्ट कहूँ? वह प्राणी-वध बताता है। श्रुति श्रेष्ट कहूँ? वह सामने रखकर खोजती है इनमें कहीं भी तुम नहीं हो, अतः त्रिविध दासोह के यहाँ छोड अन्यत्र कूडलसंगमदेव को देख नहीं सकते ॥ Translated by: Banakara K Gowdappa