ಬಸವಣ್ಣ   
  ವಚನ - 213     
 
ಹಲವು ಕಾಲ ಧಾವತಿಗೊಂಡು ಒಟ್ಟಿದ ಹಿದಿರೆಯು ಒಂದು ಮಿಡುಕುರಲ್ಲಿ ಬೇವಂತೆ, ಸಲೆ ನೆಲೆ ಸನ್ನಿಹಿತನಾಗಿರ್ಪ ಶರಣನ ಭಕ್ತಿ ಒಂದನಾಯತದಿಂದ ಕೆಡುವುದು. ಸ್ವಧರ್ಮದಲ್ಲಿ ಗಳಿಸಿದ ಪಿತನ ಧನವ ಅಧರ್ಮದಲ್ಲಿ ಕೆಡಿಸುವ ಸುತನಂತೆ- ಶಿವನ ಸೊಮ್ಮ ಶಿವಂಗೆ ಮಾಡದೆ, ಅನ್ಯಕ್ಕೆ ಮಾಡಿದೊಡೆ, ತನ್ನ ಭಕ್ತಿ ತನ್ನನೇ ಕೆಡಿಸುವುದು, ಕೂಡಲಸಂಗಮದೇವಾ.
Hindi Translation दीर्घ कालीन श्रम से एकत्र घास एक चिनगारी से जैसे भस्म होती है, वैसे निश्चित, लक्ष्यसन्निहित- शरण की भक्ति एक दोष से नष्ट होती है स्वधर्मार्जित पितृधन- अधर्म से नष्ट करनेवाले पुत्रवत् शिवसंपत्ति शिवार्पित करना छोड-, औरों को अर्पित करने से उसकी भक्ति उसी का नाश करेगी, कूडलसंगमदेव॥ Translated by: Banakara K Gowdappa