ಬಸವಣ್ಣ   
  ವಚನ - 214     
 
ನಚ್ಚಿದೆನೆಂದರೆ ಮಚ್ಚಿದೆನೆಂದರೆ, ಸಲೆ ಮಾರುವೋದೆನೆಂದರೆ ತನುವನಲ್ಲಾಡಿಸಿ ನೋಡುವೆ ನೀನು. ಮನವನಲ್ಲಾಡಿಸಿ ನೋಡುವೆ ನೀನು. ಧನವನಲ್ಲಾಡಿಸಿ ನೋಡುವೆ ನೀನು. ಇದಕೆಲ್ಲ ಅಂಜದಿದ್ದರೆ ಭಕ್ತಿಕಂಪಿತ ನಮ್ಮ ಕೂಡಲಸಂಗಮದೇವ!
Hindi Translation श्रद्धा रखता हूँ, विश्वास करता हूँ, मैं बिक चुका हूँ-कहूँ, तो तन हिलाकर देखते हो, मन हिलाकर देखते हो धन हिलाकर देखते हो, इन सब से न डरूँ, तो भक्ति से कंपित होंगे, मम कूडलसंगमदेव ॥ Translated by: Banakara K Gowdappa