ಬಸವಣ್ಣ   
  ವಚನ - 222     
 
ಉಂಬಾಗಳಿಲ್ಲೆನ್ನ, ಉಡುವಾಗಳಿಲ್ಲೆನ್ನ, ಬಂಧುಗಳು ಬಂದಾಗಳಿಲ್ಲೆನ್ನ: ಲಿಂಗಕ್ಕೆ ಇಲ್ಲೆಂಬ, ಜಂಗಮಕ್ಕೆ ಇಲ್ಲೆಂಬ, ಬಂದ ಪುರಾತರಿಗೆ ಇಲ್ಲೆಂಬ: ಸಾವಾಗ ದೇಹವ ದೇಗುಲಕ್ಕೊಯ್ಯೆಂಬ, ದೇವರಿಗೆ ಹೆಣ ಬಿಟ್ಟಿ ಹೇಳಿತ್ತೆ, ಕೂಡಲಸಂಗಮದೇವಾ!
Hindi Translation खाते समय ‘नाहीं’ नहीं कहता, पहनते समय ‘नाहीं’ नहीं कहता, भाई बंधुओं के आने पर ‘नाहीं’ नहीं कहता; लिंग के लिए ‘नहीं’ कहता, जंगम के लिए ‘नहीं’ कहता, आगंतुक शरणों से ‘नहीं’ कहता, मरते समय अपने शरीर को मंदिर ले जाने के लिए कहता है, शव शिव से बेगारी लेना चाहता है? कूडलसंगमदेव। Translated by: Banakara K Gowdappa