ಬಸವಣ್ಣ   
  ವಚನ - 227     
 
ಕಾಳಾಗ್ನಿ ರುದ್ರನ ಮೇಳಾಪವನರಿಯದವರು ʼಕಾಳು ಬೇಳೆʼಯೆನುತಿಪ್ಪರಯ್ಯಾ. ಕಾನನದಡವಿಯಲ್ಲಿ ಕಿಚ್ಚು ಬಾಳುವೆಯಾಗಿ ಮಿಕ್ಕೊಡೆ ಒರಲುವ ಬಳ್ಳುವಿನಂತಿಪ್ಪರಯ್ಯಾ, ಮನುಜರು ನರವಿಂಧ್ಯದೊಳಗೆ! ತತ್ಕಾಲಪ್ರೇಮವನರಿಯದೆ ವಿಭವಕೆ ಮಾಡಿದವನ ಭಕ್ತಿ ಇರುಳು ಸತ್ತಿಗೆಯ ಹಿಡಿಸಿಕೊಂಡಂತೆ ಕೂಡಲಸಂಗಮದೇವಾ!
Hindi Translation कालाग्नि रुद्र के मिलन अपरिचित दानादाल कहते रहते- हैं दावानल प्रज्वलित हो, तो जैसे सियार चिल्लाता है वैसे ही नरविंध्य में मनुज तात्कालिक प्रेम न जानकर वैभवार्थ आचरित भक्ति रात में छत्री धराने के समान है कूडलसंगमदेव॥ Translated by: Banakara K Gowdappa