ಬಸವಣ್ಣ   
  ವಚನ - 229     
 
ಹಡೆದೊಡವೆ-ವಸ್ತುವನು ಮೃಡಭಕ್ತರಿಗಲ್ಲದೆ ಕಡಬಡ್ಡಿಯ ಕೊಡಲಾಗದು. ಬಂದರೊಂದು ಲೇಸು, ಬಾರದಿದ್ದರೆರೆಡು ಲೇಸು!. ಅಲ್ಲಿದ್ದರೆಯೂ ಲಿಂಗಕ್ಕೆ ಬೋನ; ಇಲ್ಲಿದ್ದರೆಯೂ ಲಿಂಗಕ್ಕೆ ಬೋನ. ಲಿಂಗದೊಡವೆ ಲಿಂಗಕ್ಕೆ ಸಾರಿತ್ತಾಗಿ ಬಂದಿತ್ತೆಂಬ ಪರಿಣಾಮವಿಲ್ಲ, ಬಾರದೆಂಬ ದುಃಖವಿಲ್ಲ. ಇದುಕಾರಣ ಕೂಡಲಸಂಗಮದೇವಾ, ನಿಮ್ಮ ಶರಣರಿಗಲ್ಲದೆ, ಕಡಬಡ್ಡಿಯ ಕೊಡಲಾಗದು.
Hindi Translation अर्जित आभरण शिवभक्तों के सिवा औरों को उधार या सूद पर नहीं देना चाहिए, आये तो अच्छा है, न अये तो और अच्छा है वहाँ रहने पर भी लिंग भोग है । यहाँ रहने पर भी लिंग भोग है । लिंग की वस्तु लिंग को प्राप्त हुई आने पर हर्ष नहीं, न आने पर दुःख नहीं अतः कूडलसंगमदेव, तव शरणों को छोड औरों को उधार या सूद पर नहीं देना चाहिए ॥ Translated by: Banakara K Gowdappa