ಬಸವಣ್ಣ   
  ವಚನ - 232     
 
ಹಾಲ ನೇಮ, ಹಾಲ ಕೆನೆಯ ನೇಮ: ಕೆನೆ ತಪ್ಪಿದ ಬಳಿಕ ಕಿಚ್ಚಡಿಯ ನೇಮ; ಬೆಣ್ಣೆಯ ನೇಮ, ಬೆಲ್ಲದ ನೇಮ! ಅಂಬಲಿಯ ನೇಮದವರನಾರನೂ ಕಾಣೆ; ಕೂಡಲಸಂಗನ ಶರಣರಲ್ಲಿ ಅಂಬಲಿಯ ನೇಮದಾತ ಮಾದಾರ ಚೆನ್ನಯ್ಯ.
Hindi Translation दूध का व्रत, मलाई का व्रत, मलाई न मिले, तो खिचडी का व्रत, मक्खन का व्रत, गुड का व्रत रखते हैं । मैं ने किसी काँजी के व्रती को नहीं देखा कूडलसंगमेश के शरणों में काँजी के व्रती मातंग चन्नय्या है ॥ Translated by: Banakara K Gowdappa