ಬಸವಣ್ಣ   
  ವಚನ - 269     
 
ಎಂತಕ್ಕೆ ನಾನಿಮ್ಮ ದೇವರೆಂದರಿದೆನು? ಇಂತಾಗಿ ನೀವೆನ್ನನಾರೆಂದರಿಯಿರಿ? ನಂಬಲರಿಯೆ, ನಂಬಿಸಲರಿಯೆ ಒಲಿಯಲರಿಯೆ, ಒಲಿಸಲರಿಯೆ! 'ಯಥಾ ಭಾವಸ್ತಥಾ ಲಿಂಗಂ| ಸತ್ಯಂ ಸತ್ಯಂ ನ ಸಂಶಯಃ ಯಥಾ ಭಕ್ತಿಸ್ಥಥಾ ಸಿದ್ಧಿಃ| ಸತ್ಯಂ ಸತ್ಯಂ ನ ಸಂಶಯಃ'|| ಎಂದುದಾಗಿ ಕೂಡಲಸಂಗಮದೇವಾ, ಕೇಳಯ್ಯಾ ಕೋಟಿ ಕೋಟಿ ವರ್ಷ ಕೋಟಲೆಗೊಂಡೆನಯ್ಯಾ!
Hindi Translation जितना मैंने तुमको भगवान के रुप में जाना, उतना तुमने मुझे नहीं पहचाना! न विश्वास करना जानता हूँ, न विश्वास पात्र बनना । न प्रेम करना जानता हूँ, न प्रेम कराना ॥ “यथा भावस्तथा लिंगं सत्यं सत्यं न संशयः । यथा भक्तिस्तथा सिद्धिः सत्यं सत्यं न संशयः॥ अतः कूडलसंगमदेव सुनो, मैं कोटि कोटि वर्षों से पीडित हूँ ॥ Translated by: Banakara K Gowdappa