ಬಸವಣ್ಣ   
  ವಚನ - 270     
 
ಅರಿಸಿನವನೆ ಮಿಂದು, ಹೊಂದೊಡಿಗೆಯನೆ ತೊಟ್ಟು, ಪುರುಷನ ಒಲವಿಲ್ಲದ ಲಲನೆಯಂತಾಗಿರ್ದೆನಯ್ಯಾ! ವಿಭೂತಿಯನೆ ಹೂಸಿ, ರುದ್ರಾಕ್ಷಿಯನೆ ಕಟ್ಟಿ, ಶಿವ ನಿಮ್ಮೊಲವಿಲ್ಲದಂತೆ ಆಗಿರ್ದೆನಯ್ಯ! ಕೆಟ್ಟು ಬಾಳುವರಿಲ್ಲಾ ಎಮ್ಮವರ ಕುಲದಲ್ಲಿ: ನೀನೊಲಿದಂತೆ ಸಲಹಯ್ಯಾ, ಕೂಡಲಸಂಗಮದೇವಾ.
Hindi Translation हल्दी से नहाकर, स्वर्णाभरण धारण कर, पति प्रेम से वंचित ललना जैसा हूँ । विभूति लगाकर रुद्राक्ष धारण कर हे शिव, तव प्रेम से वंचित हूँ । हमारे वंश में भ्रष्ट होकर जीनेवाले नहीं हैं। कूडलसंगमदेव , अपने इच्छानुसार रक्षा करो ॥ Translated by: Banakara K Gowdappa