ಬಸವಣ್ಣ   
  ವಚನ - 285     
 
ಕುಲಮದಕ್ಕೆ ಹೋರಿ ಜಂಗಮ ಭೇದವ ಮಾಡುವೆ: ಫಲವೇನು? ನಿತ್ಯ ಲಿಂಗಾರ್ಚನೆ ಪ್ರಾಯಶ್ಚಿತ್ತ! ಛಲಮದಕ್ಕೆ ಹೋರಿ ಲಿಂಗಭೇದವ ಮಾಡುವೆ: ಜಂಗುಳಿಯ ಕಾವ ಗೋವ ಹಲವು ಹಸುವ ನಿವಾರಿಸುವಂತೆ! ತನು ಭಕ್ತನಾಯಿತ್ತು; ಎನ್ನ ಮನ ಭವಿ, ಕೂಡಲಸಂಗಮದೇವಾ.
Hindi Translation जाति-मद हेतु लड़कर जंगम भेद करता हूँ क्या प्रयोजन है? नित्य का लिंगार्चन प्रायश्चित्त है! दुर्दांत मद हेतु लडकर लिंग भेद करता हूँ, जैसे चरवाहा पशु-समूह में कुछ गायों को पृथक रखता है! मेरा तन भक्त है, मन भवि ,कूडलसंगमदेव ॥ Translated by: Banakara K Gowdappa